ಯೂತ್ ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಮಾರಾಮಾರಿಗೆ ಅಸಲಿ ಕಾರಣ ಬಿಚ್ಚಿಟ್ಟ ಜನರಲ್ ಸೆಕ್ರೆಟರಿ ಬಿಂದುಗೌಡ
ಕೆಪಿಸಿಸಿ ಯುವ ಕಾಂಗ್ರೆಸ್ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ನಡೆದ ಗಲಾಟೆ ಕುರಿತು ಪ್ರಧಾನ ಕಾರ್ಯದರ್ಶಿ ಬಿಂದುಗೌಡ ಪ್ರತಿಕ್ರಿಯಿಸಿದ್ದಾರೆ. ಆಂತರಿಕ ವಿಚಾರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದು ಮತ್ತು 15 ಸದಸ್ಯರನ್ನು ಹೋಲ್ಡ್ನಲ್ಲಿ ಇರಿಸಿದ ವಿಷಯದ ನಿರ್ವಹಣೆಯೇ ಈ ಅತಿರೇಕದ ಘಟನೆಗೆ ಕಾರಣ ಎಂದು ಅವರು ತಿಳಿಸಿದ್ದಾರೆ. ಈ ಕುರಿತು ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಗಮನಕ್ಕೆ ತರಲಾಗುವುದು ಎಂದಿದ್ದಾರೆ.
ಬೆಂಗಳೂರು, ಮೇ 18: ನಿನ್ನೆ ಹಲವು ಪದಾಧಿಕಾರಿಗಳನ್ನು ವಜಾ ಮಾಡಿದ್ದ ಯುವ ಕಾಂಗ್ರೆಸ್ ಇಂದು ಅದೇ ವಿಚಾರಕ್ಕೆ ಪದಾಧಿಕಾರಿಗಳ ನಡುವೆ ಗಲಾಟೆ ನಡೆದಿದೆ. ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥಗೌಡ ಮತ್ತು ಉಪಾಧ್ಯಕ್ಷೆ ದೀಪಿಕಾ ರೆಡ್ಡಿ ಬೆಂಬಲಿಗರ ನಡುವೆ ಮಾರಾಮಾರಿ ನಡೆದಿದೆ. ಸದ್ಯ ಈ ಬಗ್ಗೆ ಟಿವಿ9ಗೆ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಬಿಂದುಗೌಡ ಪ್ರತಿಕ್ರಿಯಿಸಿದ್ದು, ಇಂದು ಯೂತ್ ಕಾಂಗ್ರೆಸ್ ಸಭೆ ಕರೆದಿದ್ದರು. ಸಭೆ ನಡೆಯುವ ವೇಳೆ ಈ ರೀತಿ ಆಗಿದೆ. ಇದು ನಮ್ಮ ಆಂತರಿಕ ವಿಚಾರ. ಬಿಜೆಪಿ, ಜೆಡಿಎಸ್ನವರು ದೊಡ್ಡದು ಮಾಡುತ್ತಿದ್ದಾರೆ. ಸಭೆಗೆ ಬರುತ್ತಿಲ್ಲ ಅಂತ ಕಾಯ್ದಿರಿಸಿದ್ದರು, ನಮ್ಮನ್ನ ಎಲ್ಲಿಯೂ ಅಮಾನತು ಮಾಡಿರಲಿಲ್ಲ. 15 ಜನರಿಗೆ ಈ ರೀತಿ ಆಗಿದೆ. ಇದರ ಬಗ್ಗೆ ಸಭೆಯಲ್ಲಿ ಚರ್ಚೆಗೆ ಅವಕಾಶ ಕೊಡಲಿಲ್ಲ. ಹೀಗಾಗಿ ಗಲಾಟೆ ಆಗಿದೆ. ಪಕ್ಷದ ಒಳಗಡೆ ಬಗೆಹರಿಸಿಕೊಳ್ಳಬೇಕಿತ್ತು. ಈ ರೀತಿ ಆಗಿದ್ದು ನಾವೇ ಆಹಾರವಾದಂತೆ ಎಂದು ಹೇಳಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
