ಕೆಪಿಎಸ್‌ಸಿ ನೇಮಕಾತಿ ಹಗರಣ: ಸ್ಕ್ಯಾಮ್ ಹಣದಲ್ಲಿ ಪ್ರಿಯತಮೆಗೆ ಚಿನ್ನ ಗಿಫ್ಟ್ ನೀಡಿದ್ದ ಜ್ಞಾನೇಂದ್ರ

Edited By:

Updated on: Sep 11, 2026 | 3:04 PM

ಕೆಪಿಎಸ್‌ಸಿ ನೇಮಕಾತಿ ಹಗರಣದಲ್ಲಿ ಮಧ್ಯವರ್ತಿ ಬಸವರಾಜ್ ಕನ್ನಾಳೆಯಿಂದ ಐಎಎಸ್​​ ಅಧಿಕಾರಿ ಜ್ಞಾನೇಂದ್ರ ಕುಮಾರ್ ಹಣ ಪಡೆದಿರುವ ಆರೋಪದ ನಡುವೆ, ತಮ್ಮ ಪ್ರೇಯಸಿಗೆ 26 ಲಕ್ಷ ರೂ. ಮೌಲ್ಯದ ಚಿನ್ನದ ಗಿಫ್ಟ್ ನೀಡಿರುವ ಬಗ್ಗೆಯೂ ಆರೋಪಗಳು ಕೇಳಿಬಂದಿವೆ. ಆದರೆ ಕೆಪಿಎಸ್​ಸಿ ಹಗರಣಕ್ಕೂ ಚಿನ್ನಕ್ಕೂ ಸಂಬಂಧವಿಲ್ಲ ಎಂದು ಅವರ ಗೆಳತಿ ತಿಳಿಸಿದ್ದಾರೆ ಎನ್ನಲಾಗಿದೆ.

ಬೆಂಗಳೂರು, ಸೆಪ್ಟೆಂಬರ್​​ 11: KPSCಯಿಂದ ಪಶುವೈದ್ಯಾಧಿಕಾರಿ ನೇಮಕಾತಿಯಲ್ಲಿ ಹಗರಣ ಸಂಬಂಧ ಬಗೆದಷ್ಟೂ ವಿಚಾರಗಳೂ ಬಯಲಾಗ್ತಿವೆ. ಕನ್ನಾಳೆ ಬಳಿ ಲಕ್ಷಾಂತರ ಹಣ ಪಡೆದಿದ್ದ ಜ್ಞಾನೇಂದ್ರ ಕುಮಾರ್, ಹಗರಣದ 26 ಲಕ್ಷ ರೂ. ಹಣದಲ್ಲಿ ಪ್ರಿಯತಮೆಗೆ ಜ್ಞಾನೇಂದ್ರ ಚಿನ್ನ ಗಿಫ್ಟ್ ನೀಡಿದ್ದರು. ಬೇನಾಮಿ ಖಾತೆಯೊಂದಕ್ಕೆ 38 ಲಕ್ಷ ರೂ. ಹಾಕಿಸಿಕೊಂಡಿದ್ದ ಅವರು ತನ್ನ ಹುಟ್ಟೂರಿನಲ್ಲಿ ಆಸ್ತಿ ಕೂಡ ಖರೀದಿಸಿದ್ದರು. ಹೀಗಿದ್ದರೂ ಜ್ಞಾನೇಂದ್ರ ಕುಮಾರ್ ಗೆಳತಿ ಇಡಿ ಎದುರು ಚಿನ್ನದ ಸಾಲದ ಕಥೆ ಕಟ್ಟಿದ್ದಳು. ಜ್ಞಾನೇಂದ್ರ ಕುಮಾರ್ ಗಂಗ್ವಾರ್​ಗೆ ಸಾಲ ಕೊಟ್ಟಿದ್ದೆ. ಅದನ್ನು ಚಿನ್ನದ ರೂಪದಲ್ಲಿ ಹಿಂಪಡೆದಿದ್ದೆ. ಕೆಪಿಎಸ್​ಸಿ ಹಗರಣಕ್ಕೂ ಚಿನ್ನಕ್ಕೂ ಸಂಬಂಧವಿಲ್ಲ ಎಂದಿದ್ದಳು ಎನ್ನಲಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Loading...
Unable to load recommendations.
Follow Us