KRS Dam Water Level: ಅವಧಿಗೂ ಮುನ್ನವೇ ತುಂಬುತ್ತಿದೆ ಕೆಆರ್‌ಎಸ್ ಡ್ಯಾಂ: ಭರ್ತಿಯಾಗಲು 9 ಅಡಿ ಅಷ್ಟೇ ಬಾಕಿ
ಈ ವರ್ಷ ಮುಂಗಾರು ಮಳೆ ರೈತರಿಗೆ ಭರ್ಜರಿ ಖುಷಿಕೊಟ್ಟಿದೆ. ಅವಧಿಗೂ ಬಹಳಷ್ಟು ಮುನ್ನವೇ ಕೆಆರ್‌ಎಸ್ ಡ್ಯಾಂ ಭರ್ತಿಯಾಗುವತ್ತ ಸಾಗಿದೆ. ಸದ್ಯ 37.947 ಟಿಎಂಸಿ ನೀರು ಸಂಗ್ರವಾಗಿದ್ದು, ಇನ್ನು 9 ಅಡಿ ನೀರು ತುಂಬಿದರೆ ಜಲಾಶಯ ಭರ್ತಿಯಾಗಲಿದೆ. ಕೆಆರ್‌ಎಸ್ ಡ್ಯಾಂನಲ್ಲಿ ನೀರಿನ ಹರಿವಿನ ವಿಡಿಯೋ ಇಲ್ಲಿದೆ ನೋಡಿ.
ಮಂಡ್ಯ, ಜೂನ್ 19: ಕಾವೇರಿ ಜಲಾನಯನ ಪ್ರದೇಶದಲ್ಲಿ ಮುಂಗಾರು ಮಳೆ ಹೆಚ್ಚಾದ ಕಾರಣ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಜಲಾಶಯದಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ಇಂದು ಕೆಆರ್‌ಎಸ್ ಡ್ಯಾಂಗೆ 34,092 ಕ್ಯೂಸೆಕ್ ಒಳಹರಿವು ಇದ್ದು, ಡ್ಯಾಂ ನೀರಿನ ಮಟ್ಟ 115.78 ಅಡಿ ತಲುಪಿದೆ. ಸದ್ಯ 37.947 ಟಿಎಂಸಿ ನೀರು ಸಂಗ್ರಹವಾಗಿದ್ದು, ಜಲಾಶಯ ಭರ್ತಿಯಾಗಲು 9 ಅಡಿ ಅಷ್ಟೇ ಬಾಕಿ ಇದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ