KRS Back Water: ಕೆಆರ್​ಎಸ್​ನಲ್ಲಿ ಕುಸಿದ ನೀರಿನ ಮಟ್ಟ; ಸಂಪೂರ್ಣವಾಗಿ ಗೋಚರಿಸುತ್ತಿರುವ ಪುರಾತನ ದೇಗುಲ!

Updated on: Jun 13, 2026 | 1:06 PM

ಕೆಆರ್​ಎಸ್ ಜಲಾಶಯದ ನೀರಿನ ಮಟ್ಟ ದಿನೇ ದಿನೇ ಕುಸಿಯುತ್ತಿದ್ದು, ಪ್ರಸ್ತುತ 81 ಅಡಿಗೆ ತಲುಪಿದೆ. ಇದರಿಂದಾಗಿ ಹಿನ್ನೀರಿನಲ್ಲಿ ಮುಳುಗಡೆಯಾಗಿದ್ದ ಪುರಾತನ ಲಕ್ಷ್ಮಿ ನಾರಾಯಣಸ್ವಾಮಿ ದೇವಾಲಯ ಸಂಪೂರ್ಣವಾಗಿ ಗೋಚರಿಸುತ್ತಿದೆ. 90 ಅಡಿಗೆ ನೀರಿನ ಮಟ್ಟ ಕುಸಿದಾಗ ಈ ದೇವಾಲಯವು ಭಾಗಶಃ ಕಾಣಿಸಿಕೊಳ್ಳುತ್ತಿತ್ತು, ಆದರೆ ಈಗ ಸಂಪೂರ್ಣವಾಗಿ ಗೋಚರಿಸುತ್ತಿದೆ.

ಮಂಡ್ಯ, ಜೂನ್ 13: ಕೆಆರ್​ಎಸ್ ಜಲಾಶಯದ ನೀರಿನ ಮಟ್ಟ ದಿನೇ ದಿನೇ ಕುಸಿಯುತ್ತಿದ್ದು, ಪ್ರಸ್ತುತ 81 ಅಡಿಗೆ ತಲುಪಿದೆ. ಇದರಿಂದಾಗಿ ಹಿನ್ನೀರಿನಲ್ಲಿ ಮುಳುಗಡೆಯಾಗಿದ್ದ ಪುರಾತನ ಲಕ್ಷ್ಮಿ ನಾರಾಯಣಸ್ವಾಮಿ ದೇವಾಲಯ ಸಂಪೂರ್ಣವಾಗಿ ಗೋಚರಿಸುತ್ತಿದೆ. 90 ಅಡಿಗೆ ನೀರಿನ ಮಟ್ಟ ಕುಸಿದಾಗ ಈ ದೇವಾಲಯವು ಭಾಗಶಃ ಕಾಣಿಸಿಕೊಳ್ಳುತ್ತಿತ್ತು, ಆದರೆ ಈಗ ಸಂಪೂರ್ಣವಾಗಿ ಗೋಚರಿಸುತ್ತಿದೆ.

ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಆನಂದೂರು ಹಿನ್ನೀರಿನ ಪ್ರದೇಶದಲ್ಲಿರುವ ಈ ದೇವಾಲಯವು ಸಾಕಷ್ಟು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ನೀರಿನ ಮಟ್ಟ ಕುಸಿತದಿಂದ ಸ್ಪಷ್ಟವಾಗಿ ಕಾಣಿಸುತ್ತಿರುವ ದೇವಾಲಯದ ಸುತ್ತಮುತ್ತ ಫೋಟೋಶೂಟ್‌ ಮಾಡಿಸಿಕೊಳ್ಳಲು ಜನರು ದೂರದ ಊರುಗಳಿಂದ ಆಗಮಿಸುತ್ತಿದ್ದಾರೆ. ಕೆಆರ್‌ಎಸ್ ಹಿನ್ನೀರಿನಲ್ಲಿ ಈ ಹಿಂದೆ ಮುಳುಗಡೆಯಾಗಿದ್ದ ಸುಮಾರು 10-15 ಗ್ರಾಮಗಳು ಮತ್ತು ಕೆಲವು ದೇವಾಲಯಗಳನ್ನು ಸ್ಥಳಾಂತರಿಸಲಾಗಿತ್ತು. ಆದರೆ ಲಕ್ಷ್ಮಿ ನಾರಾಯಣಸ್ವಾಮಿ ದೇವಾಲಯವನ್ನು ಮಾತ್ರ ಅದೇ ಸ್ಥಳದಲ್ಲಿ ಉಳಿಸಿಕೊಳ್ಳಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಭಾವನಾ ಹೆಗಡೆ

ಭಾವನಾ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನವರು. ಬಿಎಸ್ಸಿ ಪದವಿ ಮುಗಿಸಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಡಿಪ್ಲೊಮಾ ಮಾಡಿದ್ದಾರೆ ಪತ್ರಿಕೋದ್ಯಮ ಇವರು ಇಷ್ಟ ಪಟ್ಟು ಆಯ್ದುಕೊಂಡ ಕ್ಷೇತ್ರ. ಟಿವಿ9 ಡಿಜಿಟಲ್​ನಲ್ಲಿ ವೃತ್ತಿ ಜೀವನ ಆರಂಭಿಸಿದ್ದಾರೆ. ರಾಜ್ಯ, ರಾಷ್ಟ್ರಕ್ಕೆ ಸಂಬಂಧಿಸಿದ ಕ್ಷಣಕ್ಷಣದ ಮಾಹಿತಿಗಳನ್ನು ಓದುಗರಿಗೆ ಒದಗಿಸುವ ಆಶಯ ಹೊಂದಿದ್ದಾರೆ.

Read More