ಎಕ್ಸ್ಪ್ರೆಸ್ ಬಸ್ಗಳಿಗೆ ರಾಜಹಂಸ ಬಸ್ ಮಾದರಿ ವಿನ್ಯಾಸ ಮತ್ತು ಸೇವೆ ಒದಗಿಸಲು ನಿರ್ಧರಿಸಿರುವ ಕೆಎಸ್ಆರ್ಟಿಸಿ
ಬೆಂಗಳೂರು ಮತ್ತು ಧರ್ಮಸ್ಥಳ ನಡುವೆ ಓಡಾಡುವ ಈ ಬಸ್ ಒಳಭಾಗದಲ್ಲಿ ಸ್ವಲ್ಪ ರಾಜಹಂಸ ಬಸ್ ನಂತೆ ವಿನ್ಯಾಸಗೊಂಡಿದೆ. ಆಸನಗಳು ಸುಖಾಸೀನಗೊಂಡಿರುವುದನ್ನು ಸಂಸ್ಥೆಯ ಅಧಿಕಾರಿಗಳೊಂದಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ವೀಕ್ಷಿಸುತ್ತಿದ್ದಾರೆ.
ಬೆಂಗಳೂರು: ಶಕ್ತಿ ಯೋಜನೆ (Shakti Scheme) ಜಾರಿಗೊಳಿಸಿದ ಬಳಿಕ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ದಿವಾಳಿಯೇಳುತ್ತದೆ ಅಂತ ವಿರೋಧ ಪಕ್ಷಗಳ ನಾಯಕರು ಕುಹುಕವಾಡಿದ್ದರು. ಈ ತಿಂಗಳು ಸಂಸ್ಥೆಯ ನೌಕರರಿಗೆ ಸಂಬಳ ಬಿಡುಗಡೆಯಾಗೋದು ತಡವಾದಾಗ ಅವರು ಹೇಳಿದ್ದರಲ್ಲಿ ಉತ್ಪ್ರೇಕ್ಷೆಯೇನೂ ಇಲ್ಲ ಅನಿಸಿದ್ದು ನಿಜವೇ. ಆದರೆ, ಈ ಬಸ್ಸನ್ನು ನೋಡುತ್ತಿದ್ದರೆ ವಾಸ್ತವ ಬೇರೆಯಿದೆ ಅನಿಸದಿರದು. ರಾಜಹಂಸ (Rajahamsa) ಮಾದರಿ ವ್ಯವಸ್ಥೆ ಮತ್ತು ಸವಲತ್ತುಗಳನ್ನು ಎಕ್ಸ್ ಪ್ರೆಸ್ ಬಸ್ ಗಳಲ್ಲಿ ಕಲ್ಪಿಸಿ ರಸ್ತೆಗಿಳಿಸುವ ನಿರ್ಣಯವನ್ನು ಸಾರಿಗೆ ಇಲಾಖೆ ತೆಗೆದುಕೊಂಡಿದೆ ಮತ್ತು ಅದರ ನಮೂನೆ ಇಲ್ಲಿದೆ. ಬೆಂಗಳೂರು ಮತ್ತು ಧರ್ಮಸ್ಥಳ ನಡುವೆ ಓಡಾಡುವ ಈ ಬಸ್ ಒಳಭಾಗದಲ್ಲಿ ಸ್ವಲ್ಪ ರಾಜಹಂಸ ಬಸ್ ನಂತೆ ವಿನ್ಯಾಸಗೊಂಡಿದೆ. ಆಸನಗಳು ಸುಖಾಸೀನಗೊಂಡಿರುವುದನ್ನು ಸಂಸ್ಥೆಯ ಅಧಿಕಾರಿಗಳೊಂದಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ವೀಕ್ಷಿಸುತ್ತಿದ್ದಾರೆ. ಈ ಬಸ್ ಬೆಂಗಳೂರು ಬಿಟ್ಟರೆ ನಿಲ್ಲೋದು ಧರ್ಮಸ್ಥಳದಳದಲ್ಲೇ. ಮುಂದಿನ ಒಂದೂವರೆ ತಿಂಗಳ ಅವಧಿಯಲ್ಲಿ ಇಂಥ 300 ಬಸ್ ಗಳು ರಸ್ತೆಗಿಳಿಯಲಿವೆಯಂತೆ. ಇದನ್ನೆಲ್ಲ ನೋಡುತ್ತಿದ್ದರೆ ಕರಾರಸಾ ಸಂಸ್ಥೆ ನಷ್ಟದಲ್ಲಿದೆ ಅಂತ ಅನಿಸದು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ