ಕೂಡಲಸಂಗಮ ಪಂಚಮಸಾಲಿ ಪೀಠಾಧಿಪತಿ ಬದಲಾವಣೆ ಸುಳಿವು ನೀಡಿದ: ಕಾಶಪ್ಪನವರ್

Edited By:

Updated on: Apr 06, 2025 | 9:43 PM

ಕರ್ನಾಟಕ ಲಿಂಗಾಯತ ವೀರಶೈವ ಅಭಿವೃದ್ಧಿ ನಿಗಮದ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್ ಅವರು ಕೂಡಲಸಂಗಮ ಪಂಚಮಸಾಲಿ ಪೀಠಾಧಿಪತಿ ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರ ಬದಲಾವಣೆಯ ಸುಳಿವು ನೀಡಿದ್ದಾರೆ. ಸ್ವಾಮೀಜಿಗಳ ಅವಧಿ ಮುಗಿಯುತ್ತಿರುವ ಬಗ್ಗೆ ಅವರು ಹೇಳಿದ್ದಾರೆ ಮತ್ತು ಬದಲಾವಣೆ ಅನಿವಾರ್ಯ ಎಂದು ಸೂಚಿಸಿದ್ದಾರೆ. ಇದು ಲಿಂಗಾಯತ ಸಮುದಾಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಕೂಡಲಸಂಗಮ ಪಂಚಮಸಾಲಿ ಪೀಠಾಧಿಪತಿ ಬಸವ ಜಯಮೃತ್ಯುಂಜಯ ಸ್ವಾಮೀಜಿ  ಬದಲಾವಣೆಯಾಗುವ ಸುಳಿವನ್ನು ಕರ್ನಾಟಕ ಲಿಂಗಾಯತ ವೀರಶೈವ ಅಭಿವೃದ್ಧಿ ನಿಗಮದ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್ ನೀಡಿದ್ದಾರೆ. ಗುರುಗಳು ಸ್ವಯಂಘೋಷಿತವಾಗಿ ಇವರೇ ಬಂದಿಲ್ಲ. ಕಾಲ ಕಾಲಕ್ಕೆ ಏನೇನು ಆಗಬೇಕೋ ಅದೆಲ್ಲಾ ಆಗುತ್ತದೆ. ಬದಲಾವಣೆ ಕಾಲ ಬಂದಾಗ ಯಾರೂ ತಡೆಯುವುದಿಲ್ಲ. ಭೂಮಂಡಲದಲ್ಲೇ ಯಾರನ್ನು ಉಳಿಸಲು ಆಗುವುದಿಲ್ಲ. ಸುನಾಮಿ ಯಾರನ್ನಾದ್ರೂ ಕೇಳಿ ಬರುತ್ತಾ?. ಇವರ ಕಾಲ ಮುಗಿದಿದೆ‌, ಬದಲಾವಣೆ ಆಗಿಯೇ ಆಗುತ್ತದೆ ಎಂದು ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕೂಡಲಸಂಗಮದಲ್ಲಿ ಹೇಳಿದರು.