‘ಹೆಂಗಸರು ಉಪ್ಪಿ ಚಿತ್ರ ನೋಡೋಕಾಗಲ್ಲ ಅಂತಿದ್ರು’: ಉಪೇಂದ್ರ ಬಗ್ಗೆ ಮಾತಾಡಿದ ಕುಮಾರ್ ಗೋವಿಂದ್
‘ಹೋಮ್ ಮಿನಿಸ್ಟರ್’ ಚಿತ್ರವನ್ನು ಕುಮಾರ್ ಗೋವಿಂದ್ ನೋಡಿದ್ದಾರೆ. ಸಿನಿಮಾ ವೀಕ್ಷಿಸಿದ ಬಳಿಕ ಉಪೇಂದ್ರ ಬಗ್ಗೆ ಅವರು ಮಾತನಾಡಿದ್ದಾರೆ.
ಉಪೇಂದ್ರ (Upendra) ಮತ್ತು ಕುಮಾರ್ ಗೋವಿಂದ್ ನಡುವೆ ಹಲವು ವರ್ಷಗಳ ಸ್ನೇಹ ಇದೆ. ಈಗ ಉಪ್ಪಿ ನಟನೆಯ ‘ಹೋಮ್ ಮಿನಿಸ್ಟರ್’ ಸಿನಿಮಾ (Home Minister Movie) ಬಿಡುಗಡೆ ಆಗಿದೆ. ಸೆಲೆಬ್ರಿಟಿಗಳಿಗಾಗಿ ಏರ್ಪಡಿಸಲಾಗಿದ್ದ ವಿಶೇಷ ಪ್ರದರ್ಶನದಲ್ಲಿ ಕುಮಾರ್ ಗೋವಿಂದ್ (Kumar Govind) ಅವರು ಭಾಗಿ ಆಗಿದ್ದರು. ಈ ವೇಳೆ ಅವರು ಉಪೇಂದ್ರ ಸಿನಿಮಾ ಜರ್ನಿಯನ್ನು ಮೆಲುಕು ಹಾಕಿದರು. ‘ಎ’, ‘ಉಪೇಂದ್ರ’ ಮುಂತಾದ ಸಿನಿಮಾಗಳನ್ನು ಹೆಂಗಸರು ನೋಡೋಕೆ ಆಗಲ್ಲ ಎನ್ನುತ್ತಿದ್ದಂತಹ ಒಂದು ಕಾಲ ಇತ್ತು. ಆದರೆ ಈಗ ಮಹಿಳೆಯರಿಗಾಗಿಯೇ ‘ಹೋಮ್ ಮಿನಿಸ್ಟರ್’ ಚಿತ್ರವನ್ನು ಉಪೇಂದ್ರ ಮಾಡಿದ್ದಾರೆ ಎಂಬ ಅನಿಸಿಕೆಯನ್ನು ಕುಮಾರ್ ಗೋವಿಂದ್ ಹಂಚಿಕೊಂಡಿದ್ದಾರೆ. ಈ ಚಿತ್ರದಲ್ಲಿ ಉಪೇಂದ್ರ ಅವರಿಗೆ ಜೋಡಿಯಾಗಿ ವೇದಿಕಾ ನಟಿಸಿದ್ದಾರೆ.
ಇದನ್ನೂ ಓದಿ:
ವೇದಿಕಾಗೆ ಯಾವ ರೀತಿಯ ಗಂಡ ಬೇಕು? ಮುಕ್ತವಾಗಿ ಹೇಳಿಕೊಂಡ ‘ಹೋಮ್ ಮಿನಿಸ್ಟರ್’ ನಾಯಕಿ
‘ಕೆಜಿಎಫ್ 2’, ಉಪೇಂದ್ರ ಮತ್ತು ಸ್ಯಾಂಡಲ್ವುಡ್ ಬಗ್ಗೆ ರಾಮ್ ಗೋಪಾಲ್ ವರ್ಮಾ ಹೇಳೋದು ಏನು?