Loading video

ಒತ್ತುವರಿ ಮಾಡಿಕೊಂಡಿರುವ ಜಾಗದಲ್ಲಿ ಕುಮಾರಸ್ವಾಮಿ ಬೆಳೆ ಮತ್ತು ಗಿಡಮರಗಳನ್ನು ಬೆಳೆದಿದ್ದಾರೆ, ಇಲ್ಲಿದೆ ವರದಿ

|

Updated on: Mar 18, 2025 | 5:48 PM

ಕಂದಾಯ ಮತ್ತು ಸರ್ವೇ ಇಲಾಖೆಯ ಅಧಿಕಾರಿಗಳು ಹಿಂದೆ ನಡೆದ ಸರ್ವೇಯ ಅನುಗುಣವಾಗಿ ಬೇರೆ ಬೇರೆ ಸರ್ವೆ ನಂಬರ್​ಗಳಲ್ಲಿ ಕುಮಾರಸ್ವಾಮಿ ಮತ್ತು ಇತರರಿಂದ ಆಗಿರುವ ಒತ್ತುವರಿ ಜಾಗವನ್ನು ಮಾರ್ಕ್ ಮಾಡುತ್ತಾರೆ ಮತ್ತು ನಂತರ ಆ ಜಾಗದಲ್ಲಿ ಬೆಳೆ, ಕಟ್ಟಡ ಅಥವಾ ಬೇರೇನೇ ಇದ್ದರೂ ತೆರವುಗೊಳಿಸಿ ಜಮೀನನ್ನು ಸರ್ಕಾರದ ವಶಕ್ಕೆ ಪಡೆಯುತ್ತಾರೆ.

ರಾಮನಗರ, ಮಾರ್ಚ್ 18: ಕೇಂದ್ರ ಸಚಿವ ಕುಮಾರಸ್ವಾಮಿಯವರು ಒತ್ತುವರಿ ಮಾಡಿಕೊಂಡಿದ್ದಾರೆನ್ನಲಾಗುತ್ತಿರುವ ಬಿಡದಿಗೆ ಹತ್ತಿರದ ಕೇತಗಾಹಳ್ಳಿಯಲ್ಲಿರುವ ಸರ್ವೆ ನಂಬರ್ 7, 8, 9, 10, 16, 17 ಮತ್ತು 79ರಲ್ಲಿ ತೆರವು ಕಾರ್ಯಾಚರಣೆಯು ರಾಮನಗರದ ಜಿಲ್ಲಾಧಿಕಾರಿಯವರ (Ramanagara DC) ನೇತೃತ್ವದಲ್ಲಿ ನಡೆಯುತ್ತಿದೆ. ನಮ್ಮ ಪ್ರತಿನಿಧಿಯು ಕುಮಾರಸ್ವಾಮಿಗೆ ಸೇರಿದ ಜಮೀನಿನ ಹೊರಗಡೆಯಿಂದ ಈ ವರದಿಯನ್ನು ಕಳಿಸಿದ್ದಾರೆ. ಕುಮಾರಸ್ವಾಮಿ ತಮ್ಮ ಜಮೀನಲ್ಲಿ ಬೇರೆ ಬೇರೆ ರೀತಿಯ ಗಿಡಮರಗಳ ಜೊತೆಗೆ ಹಲವು ರೀತಿಯ ಬೆಳೆಗಳನ್ನೂ ಬೆಳೆದಿರುವರೆಂದು ನಮ್ಮ ವರದಿಗಾರ ಹೇಳುತ್ತಾರೆ. ಸರ್ವೆ ನಂಬರ್ 7 ಮತ್ತು 8ರಲ್ಲಿ ಕುಮಾರಸ್ವಾಮಿಯವರಿಂದ ಒತ್ತುವರಿಯಾಗಿದೆಯೆಂದು ಹೇಳಲಾಗಿದೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಜಮೀನು ಒತ್ತುವರಿ; ಕುಮಾರಸ್ವಾಮಿ ಮಟ್ಟಕ್ಕಿಳಿದು ರಾಜೀನಾಮೆ ಕೇಳಲ್ಲ, ಉತ್ತರ ನಿರೀಕ್ಷಿಸುತ್ತೇವೆ: ಚಲುವರಾಯಸ್ವಾಮಿ

Published on: Mar 18, 2025 04:57 PM