ನನ್ನ ಗೆಲುವಿಗೆ ಎರಡೂ ಪಕ್ಷಗಳ ಕಾರ್ಯಕರ್ತರು ಟೊಂಕಕಟ್ಟಿ ನಿಂತಿದ್ದಾರೆ: ಸಿಪಿ ಯೋಗೇಶ್ವರ್
ನಿಖಿಲ್ ಕಣ್ಣೀರು ಹಾಕಿರುವುದಕ್ಕೆ ಪ್ರತಿಕ್ರಿಯೆ ನೀಡಿದ ಯೋಗೇಶ್ವರ್, ಯುದ್ಧಭೂಮಿಯಲ್ಲಿ ಸೋಲುತ್ತಿರುವ ಸೈನಿಕನೊಬ್ಬ ಬಳಸುವ ಕೊನೆಯ ಅಸ್ತ್ರವೇ ಕಣ್ಣೀರು, ತಂದೆ ಮಾಡಿದ ಅವ್ಯವಸ್ಥೆಗಳಿಗೆ ಮಗ ಕಣ್ಣೀರು ಹಾಕುತ್ತಿದ್ದಾರೆ, ನಾಯಕನಾದವರನು ಕಣ್ಣೀರು ಒರೆಸಬೇಕೇ ಹೊರತು ಕಣ್ಣೀರು ಹಾಕಬಾರದು ಎಂದರು.
ಚನ್ನಪಟ್ಟಣ: ಹೆಚ್ಡಿ ಕುಮಾರಸ್ವಾಮಿಯವರು ಎರಡು ಬಾರಿ ಶಾಸಕ ಮತ್ತು ಮುಖ್ಯಮಂತ್ರಿಯಾಗಿದ್ದರೂ ಕ್ಷೇತ್ರಕ್ಕಾಗಿ ಏನೂ ಮಾಡಿಲ್ಲ, ಅವರ ನಿಷ್ಕ್ರಿಯತೆ, ಉದಾಸೀನತೆಯಿಂದ ಜನ ಭ್ರಮನಿರಸನಗೊಂಡಿದ್ದಾರೆ, ಅವರು ಕ್ಷೇತ್ರವನ್ನು ಯಾಕೆ ಬಿಟ್ಟು ಹೋದರು ಮತ್ತು ಮಗನನ್ನು ಯಾಕೆ ತಂದಿದ್ದಾರೆ ಅಂತ ಗೊತ್ತಿಲ್ಲ, ಮೊದಲು ಪತ್ನಿಯನ್ನು ತಂದರು ಈಗ ಮಗ, ಅವರಿಗೆ ಸ್ವಾರ್ಥದ ರಾಜಕಾರಣ ಬಿಟ್ಟರೆ ಬೇರೇನೂ ಗೊತ್ತಿಲ್ಲ, ತಾಲೂಕಿನಲ್ಲಿ ಅರಾಜಕತೆ ಮನೆ ಮಾಡಿದೆ, ತನ್ನ ಗೆಲುವಿಗೆ ಎರಡೂ ಪಕ್ಷಗಳ ಕಾರ್ಯಕರ್ತರು ಟೊಂಕಕಟ್ಟಿ ನಿಂತಿದ್ದಾರೆ ಎಂದು ಚನ್ನಪಟ್ಟಣ ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಕೋಟೆಹೊಲೆ ಗ್ರಾಮದಲ್ಲಿ ತಿರುಗಾಡುತ್ತಾ ಮತಯಾಚಿಸಿದ ಕಾಂಗ್ರೆಸ್ ಅಭ್ಯರ್ಥಿ ಯೋಗೇಶ್ವರ್
Published on: Nov 01, 2024 01:40 PM