Loading video

ಹಿಂದಿನದೆಲ್ಲವನ್ನು ಮರೆತು ಯೋಗೇಶ್ವರ್​ಗೆ ಟಿಕೆಟ್ ನೀಡಲು ಕುಮಾರಣ್ಣ ತಯಾರಾಗಿದ್ದರು: ಸಾರಾ ಮಹೇಶ್

|

Updated on: Nov 25, 2024 | 1:13 PM

ಜೆಡಿಎಸ್ ಒಂದು ಪ್ರಾದೇಶಿಕ ಪಕ್ಷವಾದರೂ ಅದರ ಅಸ್ತಿತ್ವಕ್ಕೆ ಏನೂ ತೊಂದರೆಯಿಲ್ಲ, ಉಪ ಚುನಾವಣೆಯಲ್ಲಿ ಸೋತ ಮಾತ್ರಕ್ಕೆ ಪಕ್ಷವೇನೂ ದುರ್ಬಲಗೊಳ್ಳಲ್ಲ, ಹೆಚ್ ಡಿ ದೇವೇಗೌಡ ಮತ್ತು ಕುಮಾರಣ್ಣನ ಸಾಮರ್ಥ್ಯದ ಮೇಲೆ ನಂಬಿಕೆಯಿದೆ, ಸಾಯೋವರೆಗೂ ಅವರ ಜೊತೆ ಇರುತ್ತೇವೆ ಎಂದು ಮಹೇಶ್ ಹೇಳಿದರು.

ಮೈಸೂರು: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಜೆಡಿಸ್ ಶಾಸಕ ಸಾರಾ ಮಹೇಶ್, ಮುಖ್ಯಮಂತ್ರಿಯಾಗಿದ್ದ ಹೆಚ್ ಡಿ ಕುಮಾರಸ್ವಾಮಿಯವರ ಸಮ್ಮಿಶ್ರ ಸರ್ಕಾರವನ್ನು ಉರುಳಿಸುವಲ್ಲಿ ಸಿಪಿ ಯೋಗೇಶ್ವರ್ ಪ್ರಮುಖ ಪಾತ್ರ ನಿರ್ವಹಿಸಿದ್ದರು ಅಂತ ಗೊತ್ತಿದ್ದರೂ ಚನ್ನಪಟ್ಟಣ ವಿಧಾನಸಭಾ ಉಪ ಚುನಾವಣೆಯಲ್ಲಿ ಅವರಿಗೆ ಜೆಡಿಎಸ್ ಪಕ್ಷದ ಬಿ ಫಾರ್ಮ್ ಕೊಡಲು ವರಿಷ್ಠರು ರೆಡಿಯಿದ್ದರು, ಅವರು ಕಾಂಗ್ರೆಸ್ ಸೇರಿ ಗೆದ್ದಿದ್ದಾರೆ, ಮುಂದಿನ 3 ವರ್ಷ ಕಾಲ ಕ್ಷೇತ್ರದ ಅಭಿವೃದ್ಧಿ ಕಡೆ ಅವರು ಗಮನ ಹರಿಸಲಿ ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಚನ್ನಪಟ್ಟಣ ಫಲಿತಾಂಶ: ನಿಖಿಲ್ ಸೋಲಿನ ಬೆನ್ನಲ್ಲೇ ಜೆಡಿಎಸ್​ಗೆ ಶುರುವಾಯ್ತು ಹೊಸ ಆತಂಕ!