ಕಮಲ್ ಪಂತ್ ಹಾಗೂ ಪ್ರವೀಣ್ ಸೂದ್ ವಿರುದ್ಧ ಲೈವ್ನಲ್ಲಿ ಹಿಗ್ಗಾಮುಗ್ಗ ವಾಗ್ದಾಳಿ ನಡೆಸಿದ ವಕೀಲ ಜಗದೀಶ್
40 ಜನಗಳ ಮೇಲೆ ಅಟ್ಯಾಕ್ ಆಗಿದೆ. ರೌಡಿ ಥರ ವರ್ತಿಸಿದ್ದಾರೆ. ವಕೀಲರನ್ನು ಹೇಗೆ ನೋಡ್ತಿದಿರಾ? ಎಲ್ಲಾ ಫೂಟೇಜ್ ಇದೆ. ಕರ್ನಾಟಕದಲ್ಲಿ ಪೊಲೀಸ್, ಕಾನೂನು ಇಲ್ಲ. ಎಲ್ಲಾ ಗೂಂಡಾಗಳೇ ಇರೋದು. ಮೊದಲು ತಂದೆ ನಾನು. ಆಮೇಲೆ ಅಡ್ವೊಕೇಟ್ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಬೆಂಗಳೂರು: ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿ ವಕೀಲ ಜಗದೀಶ್ ಮಗ ಮತ್ತು ಆಪ್ತರ ಮೇಲೆ ವಕೀಲರ ಗುಂಪೊಂದು ಹಲ್ಲೆ ಮಾಡಿದ್ದಾರೆ ಎಂದು ವಕೀಲ ಜಗದೀಶ್ ಆರೋಪಿಸಿದ್ದಾರೆ. ಇಷ್ಟಾದ್ರೂ ಅಲ್ಲಿದ್ದ ಪೊಲೀಸರು ರಕ್ಷಣೆ ಮಾಡಿಲ್ಲ. ಎಲ್ಲರೂ ಗೂಂಡಾಗಳ ರೀತಿ ವರ್ತನೆ ಮಾಡಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಈ ಬಗ್ಗೆ ವಕೀಲ ಜಗದೀಶ್ ಸಾಮಾಜಿಕ ಜಾಲತಾಣದಲ್ಲಿ ಲೈವ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನನ್ನ ಮಗನ ಮೇಲೆ ಹಲ್ಲೆಯಾಗಿದೆ. ಮಗ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ತಗೊಳ್ತಿದ್ದಾನೆ. ಕಮಲ್ ಪಂಥ್, ಪ್ರವೀಣ್ ಸೂದ್ ರಾಜೀನಾಮೆ ತಗೊಂಡು ಮನೆಗೆ ಹೋಗ್ರಯ್ಯಾ. ಕಮಲ್ ಪಂಥ್, ಪ್ರವೀಣ್ ಸೂದ್ ಜೈಲಲ್ಲಿ ಇರ್ತಿಯಾ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ. ನೀವೆಲ್ಲಾ ಯೂನಿಫಾರಂ ಹಾಕೊಂಡಿರೋ ಗೂಂಡಾಗಳು. ಮಗನಿಗೆ ಏನಾದ್ರೂ ಆದ್ರೆ ನಿಮ್ಗೆ ನೇಣು ಹಾಕ್ಸಿಲ್ಲಾ ಅಂದ್ರೆ ನಾನು ಜಗದೀಶ್ ಅಲ್ಲ ಎಂದು ಹೇಳಿದ್ದಾರೆ.
40 ಜನಗಳ ಮೇಲೆ ಅಟ್ಯಾಕ್ ಆಗಿದೆ. ರೌಡಿ ಥರ ವರ್ತಿಸಿದ್ದಾರೆ. ವಕೀಲರನ್ನು ಹೇಗೆ ನೋಡ್ತಿದಿರಾ? ಎಲ್ಲಾ ಫೂಟೇಜ್ ಇದೆ. ಕರ್ನಾಟಕದಲ್ಲಿ ಪೊಲೀಸ್, ಕಾನೂನು ಇಲ್ಲ. ಎಲ್ಲಾ ಗೂಂಡಾಗಳೇ ಇರೋದು. ಮೊದಲು ತಂದೆ ನಾನು. ಆಮೇಲೆ ಅಡ್ವೊಕೇಟ್ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ: Crime News: ಪೊಲೀಸ್ ಇನ್ಸ್‌ಪೆಕ್ಟರ್ ಕಾರಿನ ಗಾಜನ್ನೇ ಒಡೆದು ಬೆಲೆ ಬಾಳುವ ವಸ್ತುಗಳನ್ನು ಕದ್ದ ಖದೀಮರು