Video: ಆಂಧ್ರ ಸಿಎಂ ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲಿ ಪೊಲೀಸ್ ಅಧಿಕಾರಿಯನ್ನು ಎಲ್ಲರೆದುರು ನಿಂದಿಸಿದ ಸಚಿವ; ಪ್ರತಿಪಕ್ಷಗಳಿಂದ ವಿರೋಧ
ಬಿಜೆಪಿಯಷ್ಟೇ ಅಲ್ಲ, ಆಂಧ್ರಪ್ರದೇಶದ ಪ್ರತಿಪಕ್ಷ ತೆಲುಗು ದೇಸಂ ಪಾರ್ಟಿ (ಟಿಡಿಪಿ) ಎಂಎಲ್ಸಿ ನಾರಾ ಲೋಕೇಶ್ ಕೂಡ ಈ ವಿಡಿಯೋ ಟ್ವೀಟ್ ಮಾಡಿಕೊಂಡಿದ್ದಾರೆ. ಸಚಿವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ(Andhra Pradesh CM YS Jagan Mohan Reddy)ನಿನ್ನೆ (ಫೆ.9) ವಿಶಾಖಪಟ್ಟಣದಲ್ಲಿ ಶ್ರೀ ಶಾರದಾ ಪೀಠದ (Sri Sarada Peetham in Visakhapatnam) ವಾರ್ಷಿಕೋತ್ಸವದಲ್ಲಿ ಪಾಲ್ಗೊಂಡಿದ್ದರು. ಅಲ್ಲಿ ಅವರು ಸುಮಾರು ನಾಲ್ಕೂವರೆ ತಾಸುಗಳ ಕಾಲ ಇದ್ದರು. ಆದರೆ ಇದೇ ವೇಳೆ ರಾಜ್ಯ ಪಶುಸಂಗೋಪನಾ ಇಲಾಖೆ ಸಚಿವ ಸೀದಿರಿ ಅಪ್ಪಲರಾಜು ಅವರು ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿಯೊಬ್ಬರನ್ನು ನಿಂದಿಸಿ, ಅವರಿಗೆ ಬೈದಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟೆ ವೈರಲ್ ಆಗುತ್ತಿದೆ. ಬಿಜೆಪಿಯ ಆಂಧ್ರಪ್ರದೇಶ ರಾಜ್ಯ ಪ್ರಧಾನ ಕಾರ್ಯದರ್ಶಿ ವಿಷ್ಣು ವರ್ಧನ್ ರೆಡ್ಡಿ ಕೂಡ್ ಶೇರ್ ಮಾಡಿಕೊಂಡಿದ್ದಾರೆ.
ಮುಖ್ಯಮಂತ್ರಿ ಜಗನ್ ರೆಡ್ಡಿಯವರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ತನ್ನ ಬೆಂಬಲಿಗರಿಗೆ ಪೊಲೀಸ್ ಅಧಿಕಾರಿ ಪ್ರವೇಶ ಕೊಡಲಿಲ್ಲ ಎಂಬ ಕಾರಣಕ್ಕೆ ಸೀದಿರಿ ಅಪ್ಪಲರಾಜು ಪೊಲೀಸ್ ಅಧಿಕಾರಿಯೊಬ್ಬ ಬಳಿ ಜಗಳವಾಡಿದ್ದಾರೆ. ಆ ಅಧಿಕಾರಿಯನ್ನು ನಿಂದಿಸಿದ್ದಾರೆ. ಬಳಿಕ ಅಲ್ಲಿಗೆ ಆಗಮಿಸಿದ ಎಸಿಪಿ ಸಚಿವರನ್ನು ಸಮಾಧಾನ ಮಾಡಿ ಕಳಿಸಿದ್ದಾರೆ. ಆದರೆ ಸಚಿವರ ಈ ಕ್ರಮವನ್ನು ಪ್ರತಿಪಕ್ಷ ಬಿಜೆಪಿ ಖಂಡಿಸಿದೆ. ಅಷ್ಟೇ ಅಲ್ಲ, ನೆಟ್ಟಿಗರೂ ಕೂಡ ವಿರೋಧಿಸಿದ್ದಾರೆ. ವಿಡಿಯೋ ಶೇರ್ ಮಾಡಿರುವ ವಿಷ್ಣು ವರ್ಧನ್ ರೆಡ್ಡಿ, ಸಚಿವರ ಅಹಂಕಾರ ಅದೆಷ್ಟು ಉತ್ತುಂಗದಲ್ಲಿದೆಯೆಂದರೆ, ಅವರು ಈ ರಾಜ್ಯದ ಮೂಲಭೂತ ಕಾನೂನು ಕೂಡ ಮರೆತಿದ್ದಾರೆ. ಪೊಲೀಸ್ ಸಿಬ್ಬಂದಿಯೊಂದಿಗೇ ಹೀಗೆ ವರ್ತಿಸುತ್ತಿದ್ದಾರೆ ಎಂದರೆ, ಸಾಮಾನ್ಯ ಜನರೊಂದಿಗೆ ಇನ್ನು ಹೇಗೆ ವರ್ತಿಸಬಹುದು. ಇವರ ವಿರುದ್ಧ ಯಾಕೆ ಪ್ರಕರಣ ದಾಖಲಿಸಿಲ್ಲ ಎಂದು ಪ್ರಶ್ನಿಸಿದ್ದಾರೆ.
The arrogance of Minister @DrSeediriYSRCP is so high that he even forgot the basic laws by which a state is being governed!
Imagine if they can do with the police personnel then what they would do with the common man?
Why has a case not been booked against the errant minister? pic.twitter.com/l3lbp11wk7
— Vishnu Vardhan Reddy (@SVishnuReddy) February 9, 2022
ಬಿಜೆಪಿಯಷ್ಟೇ ಅಲ್ಲ, ಆಂಧ್ರಪ್ರದೇಶದ ಪ್ರತಿಪಕ್ಷ ತೆಲುಗು ದೇಸಂ ಪಾರ್ಟಿ (ಟಿಡಿಪಿ) ಎಂಎಲ್ಸಿ ನಾರಾ ಲೋಕೇಶ್ ಕೂಡ ಈ ವಿಡಿಯೋ ಟ್ವೀಟ್ ಮಾಡಿಕೊಂಡಿದ್ದಾರೆ. ಕರ್ತವ್ಯದಲ್ಲಿರುವ ಪೊಲೀಸ್ ಅಧಿಕಾರಿಗೆ ಬೆದರಿಕೆಯೊಡ್ಡಿ, ನಿಂದಿಸಿದ ಈ ಸಚಿವರ ವಿರುದ್ಧ ಪೊಲೀಸರು ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: Rohit Sharma: ಮೈದಾನದಲ್ಲೇ ತಾಳ್ಮೆ ಕಳೆದುಕೊಂಡ ರೋಹಿತ್: ಸಿಟ್ಟಿನಲ್ಲಿ ಚಹಲ್ಗೆ ಹೇಳಿದ್ದೇನು ಗೊತ್ತಾ?