ಸಿಟಿ ರವಿ ಬಂಧನ: ಠಾಣೆ ಬಳಿ ತಮ್ಮನ್ನು ತಡೆಯಲೆತ್ನಿಸಿದ ಪೊಲೀಸ್ ಅಧಿಕಾರಿಗಳ ಮೇಲೆ ರೇಗಾಡಿದ ಆರ್ ಅಶೋಕ

|

Updated on: Dec 20, 2024 | 10:29 AM

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ವಿರುದ್ಧ ವಿಧಾನ ಪರಿಷತ್​ನಲ್ಲಿ ಅಶ್ಲೀಲ ಪದ ಬಳಸಿದ ಆರೋಪ ಮತ್ತು ತತ್ಸಂಬಂಧ ದೂರಿನ ಅನ್ವಯ ಸಿಟಿ ರವಿಯವರನ್ನು ಬಂಧಿಸಲಾಗಿದೆ. ಪೊಲೀಸ್ ಕಸ್ಟಡಿಯಲ್ಲಿ ತನ್ನ ತಲೆಗೆ ರಕ್ತ ಸುರಿಯುವಂಥ ಪೆಟ್ಟಾಗಿದೆ ಎಂದು ರವಿ ತಮ್ಮ ಎಕ್ಸ್ ಹ್ಯಾಂಡಲ್​ನಲ್ಲಿ ಹೇಳಿಕೊಂಡಿದ್ದು, ಬೆಂಗಳೂರಿಗೆ ಶಿಫ್ಟ್ ಮಾಡಿಸುವ ನೆಪದಲ್ಲಿ ಪೊಲೀಸರು ತನ್ನನ್ನು 3-4 ತಾಸು ಬೆಳಗಾವಿಯಲ್ಲೇ ಸುತ್ತಾಡಿಸಿದ್ದಾರೆ ಎಂದಿದ್ದಾರೆ.

ಬೆಳಗಾವಿ: ಬಿಜೆಪಿ ವಿಧಾನ ಪರಿಷತ್ ಸದಸ್ಯ ಮತ್ತು ಹಿರಿಯ ಬಿಜೆಪಿ ನಾಯಕ ಸಿಟಿ ರವಿ ಅವರ ಬಂಧನ ರಾಜ್ಯದಾದ್ಯಂತ ಕೋಲಾಹಲ ಸೃಷ್ಟಿಸಿದೆ. ನಿನ್ನೆ ರಾತ್ರಿ ವಿರೋಧ ಪಕ್ಷದ ನಾಯಕ ಆರ್ ಅಶೋಕ ಮತ್ತು ಶಾಸಕ ಅರವಿಂದ್ ಬೆಲ್ಲದ್, ರವಿಯವರನ್ನು ಕಾಣಲು ಬಂದಾಗ ಅವರನ್ನು ಒಳಗಡೆ ಬಿಡದೆ ಗೇಟಿನ ಬಳಿಯೇ ತಡೆಯಲಾಯಿತು. ಪೊಲೀಸರ ವರ್ತನೆಯಿಂದ ತಾಳ್ಮೆ ಕಳೆದುಕೊಂಡ ಅಶೋಕ ಕೋಪದಿಂದ ರೇಗಾಡಿದರು. ಮೆಟ್ಟಿಲುಗಳ ಬಳಿ ಅಶೋಕ ಅವರಿಗೆ ಅಡ್ಡ ಹಾಕಲು ಪ್ರಯತ್ನಿಸಿದ ಪೊಲೀಸ್ ಅಧಿಕಾರಿಯನ್ನು, ನಾಚಿಕೆ ಆಗಲ್ವಾ ನಿಂಗೆ? ನನ್ನನ್ನ ಯಾರು ಅನ್ಕೊಂಡಿದ್ದೀಯಾ? ಅಂತ ಜರಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  “ನನ್ನ ಕೊಲೆ ಮಾಡುವ ಸಂಚು ನಡೆಸಿದ್ದೀರಿ, ಇಲ್ಲದಿದ್ದರೆ ಯಾಕೆ ಹೀಗೆ ರಾತ್ರಿವಿಡೀ ಸುತ್ತಾಡಿಸುತ್ತಿದ್ದೀರಿ?” ಪೊಲೀಸರ ವಿರುದ್ಧ ಸಿಟಿ ರವಿ ಗರಂ