ಹುದ್ದೆಗಳ ಆಕಾಂಕ್ಷಿಗಳು ರಾಜ್ಯದಲ್ಲಿ ಕಾಂಗ್ರೆಸ್ 140 ಸೀಟು ಪಡೆಯಲು ಪಟ್ಟ ಕಷ್ಟವನ್ನು ಮರೆಯಬಾರದು: ಡಿಕೆ ಸುರೇಶ್

|

Updated on: Jan 07, 2025 | 1:04 PM

ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ತಾನು ಆಕಾಂಕ್ಷಿಯಲ್ಲ ಎಂದು ಹೇಳುವ ಸುರೇಶ್, ಆಯ್ಕೆ ಹೈಕಮಾಂಡ್ ವಿವೇಚನೆಗೆ ಬಿಟ್ಟಿರುವುದರಿಂದ ಅದರ ಬಗ್ಗೆ ಚರ್ಚೆ ಮಾಡುವುದು ವ್ಯರ್ಥ ಎನ್ನುತ್ತಾರೆ. ಸ್ಥಾನ ಖಾಲಿಯಾದಾಗ ವರಿಷ್ಠರು ರಾಜಣ್ಣರನ್ನೇ ಅಯ್ಕೆ ಮಾಡಬಹುದು ಅಥವಾ ಜಾರಕಿಹೊಳಿ; ಸಿದ್ದರಾಮಯ್ಯ ಸೂಕ್ತ ವ್ಯಕ್ತಿ ಅಂತ ಅವರು ತೀರ್ಮಾನಿಸಿದರೂ ಆಶ್ಚರ್ಯವಿಲ್ಲ ಎಂದು ಸುರೇಶ್ ಹೇಳುತ್ತಾರೆ.

ಬೆಂಗಳೂರು: ರಾಜ್ಯದಲ್ಲಿ ಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷನ ಸ್ಥಾನ ಎರಡೂ ಖಾಲಿ ಇಲ್ಲ, ಸತೀಶ್ ಜಾರಕಿಹೊಳಿ ಅವರು ರಾಜ್ಯದ ಮುಖ್ಯಮಂತ್ರಿಯಾಗುವ ಕನಸನ್ನು ಇಟ್ಟುಕೊಂಡಿರಬಹುದು, ಅದರಲ್ಲಿ ತಪ್ಪೇನೂ ಇಲ್ಲ, ಜಾರಕಿಹೊಳಿ ಒಂದು ಪ್ರಬಲ ಸಮುದಾಯದ ಮುಖಂಡರಾಗಿದ್ದಾರೆ ಎಂದು ಮಾಜಿ ಸಂಸದ ಡಿಕೆ ಸುರೇಶ್ ಹೇಳಿದರು. ಆದರೆ, ಯಾರೇನೆ ಆಸೆ ಇಟ್ಟುಕೊಂಡರೂ ಅದಕ್ಕೆ ಪಕ್ಷದ ಹೈಕಮಾಂಡ್​ ಅನುಮೋದನೆ ಬೇಕು, ಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ಯಾರು ಸೂಕ್ತ ಅಂತ ತೀರ್ಮಾನ ತೆಗೆದುಕೊಳ್ಳುವವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಎಂದು ಹೇಳಿದ ಅವರು, ಈ ಹುದ್ದೆಗಳಿಗಾಗಿ ಅಕಾಂಕ್ಷಿಯಾಗಿರುವವರು ರಾಜ್ಯದ ಜನತೆ ಕಾಂಗ್ರೆಸ್​ಗೆ 140 ಸೀಟುಗಳನ್ನು ನೀಡಿದೆ ಮತ್ತು ಅಷ್ಟು ಸೀಟುಗಳನ್ನು ಪಡೆಯಲು ಎಷ್ಟೆಲ್ಲ ಕಷ್ಟಪಡಬೇಕಾಯಿತು ಅನ್ನೋದನ್ನು ಮರೆಯಬಾರದು ಎಂದು ಸುರೇಶ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಸಚಿವ ಸತೀಶ್ ಜಾರಕಿಹೊಳಿ ಮನೆಯಲ್ಲಿ ಡಿನ್ನರ್ ಮೀಟಿಂಗ್: ಸಿಎಂ ಸೇರಿ ಹಲವರು ಭಾಗಿ