ಮೈಸೂರಿನ ಸಿದ್ದಾರ್ಥ ನಗರದಲ್ಲಿ ಮನೆಗೆ ನುಗ್ಗಿ ಮಂಚದ ಕೆಳಗೆ ಅವಿತು ಕುಳಿತ ಚಿರತೆ; ಹೌಹಾರಿದ ಕುಟುಂಬಸ್ಥರು!

Edited By:

Updated on: Apr 17, 2026 | 3:20 PM

ಮೈಸೂರಿನ ಸಿದ್ದಾರ್ಥ ನಗರದ ಸುರೇಶ್ ಎಂಬುವವರ ಮನೆಗೆ ಚಿರತೆ ನುಗ್ಗಿರುವ ಘಟನೆ ನಡೆದಿದೆ. ಅವರ ಪತ್ನಿ ಮತ್ತು ತಾಯಿ ಇಬ್ಬರೇ ಇರುವ ಹೊತ್ತಲ್ಲಿ ಮನೆಗೆ ಚಿರತೆ ನುಗ್ಗಿದ್ದು, ಕೋಣೆಯೊಂದರ ಮಂಚದ ಕೆಳಗೆ ಅಡಗಿ ಕುಳಿತಿದೆ. ಕುಟುಂಬಸ್ಥರು ಸಮಯಪ್ರಜ್ಞೆಯಿಂದ ಪಾರಾಗಿದ್ದು, ಸದ್ಯ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಸೆರೆಹಿಡಿಯಲು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಘಟನೆ ಸ್ಥಳೀಯರನ್ನು ಬೆಚ್ಚಿ ಬೀಳಿಸಿದೆ.

ಮೈಸೂರು, ಏಪ್ರಿಲ್​​ 17: ಸಿದ್ದಾರ್ಥ ನಗರದ ಮನೆಯೊಂದರಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ಸುರೇಶ್ ಎಂಬುವವರ ಮನೆಯ ಮಂಚದ ಕೆಳಗೆ ಅವಿತು ಕುಳಿತಿರೋದು ಕಂಡುಬಂದಿದೆ. ಸುರೇಶ್ ಪತ್ನಿ ಸುಜಾತಾ, ತಾಯಿ ಶೈಲಜಾ ಮನೆಯಲ್ಲಿದ್ದಾಗ ಏಕಾಏಕಿ ಮನೆಗೆ ಎಂಟ್ರಿಕೊಟ್ಟ ಚಿರತೆ ವೃದ್ಧೆ ಶೈಲಜಾ ಮಲಗಿದ್ದ ಕೊಠಡಿಯೊಳಗೆ ಪ್ರವೇಶಿಸಿದೆ. ಸಮಯಪ್ರಜ್ಞೆಯಿಂದ ಅತ್ತೆ ಶೈಲಜಾರನ್ನು ಈ ವೇಳೆ ಸುಜಾತಾ ರಕ್ಷಣೆ ಮಾಡಿದ್ದು, ಏಕಾಏಕಿ ಚಿರತೆ ನುಗ್ಗಿದ್ದರಿಂದ ಮನೆಯವರು ಆತಂಕಕ್ಕೀಡಾದ ಪ್ರಸಂಗ ನಡೆದಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸಿಬ್ಬಂದಿಯಿಂದ ಚಿರತೆ ಸೆರೆ ಹಿಡಿಯುವ ಕಾರ್ಯಾಚರಣೆ ನಡೆಯುತ್ತಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Follow Us
Ram

ರಾಮ್ ಮೈಸೂರು ಪತ್ರಕರ್ತನಾಗಿ 20 ವರ್ಷದ ಅನುಭವ. ಕಳೆದ 14 ವರ್ಷಗಳಿಂದ ಟಿವಿ9 ಕನ್ನಡದ ಮೈಸೂರು ಜಿಲ್ಲಾ ಪ್ರತಿನಿಧಿಯಾಗಿ ಕೆಲಸ ನಿರ್ವಹಣೆ. ರಾಜ್ಯದ ವಿಧಾನಸಭಾ ಲೋಕಸಭಾ ಚುನಾವಣೆಯ ವಿಶೇಷ ವರದಿ ಹಾಗೂ ರಾಜ್ಯದ ವಿವಿಧ ಕ್ಷೇತ್ರಗಳ ಉಪಚುನಾವಣಾ ವರದಿ, ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ರಾಹುಲ್ ಗಾಂಧಿ ಸ್ಪರ್ಧೆ ಮಾಡಿದ್ದ ಚುನಾವಣಾ ವರದಿ ಸೇರಿದಂತೆ ಹಲವು ಚುನಾವಣೆಯ ವರದಿಯ ಅನುಭವ. ಮುಂಬೈ ಮಹಾಮಳೆಯ ಕವರೇಜ್, ಕೊಡಗು ಜಿಲ್ಲೆಯ ಗುಡ್ಡ ಕುಸಿತ, ಸೇರಿದಂತೆ ಹಲವು ಸ್ಟಿಂಗ್ ಕಾರ್ಯಾಚರಣೆ, ಸಾಮಾಜಿಕ‌ ಸಮಸ್ಯೆ ಹಾಗೂ ಮಾನವೀಯ ಕಳಕಳಿಯುಳ್ಳ ವರದಿ ಮಾಡಿದ ಅನುಭವ.

Read More