ಜಮೀನು ಬೆಲೆ ₹ 62 ಕೋಟಿ ಆಗುತ್ತೆ, ಅಷ್ಟು ಹಣವನ್ನು ಮುಡಾ ನಮಗೆ ಕೊಡಲಿ, ಸೈಟು ಬೇಡ: ಸಿದ್ದರಾಮಯ್ಯ

|

Updated on: Jul 04, 2024 | 5:51 PM

ಸಿದ್ದರಾಮಯ್ಯ ಮಾತಾಡುವಾಗ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಸಮಾಜ ಕಲ್ಯಾಣ ಖಾತೆ ಸಚಿವ ಹೆಚ್ ಸಿ ಮಹದೇವಪ್ಪ ಜೊತೆಗಿದ್ದರು. ಮೊನ್ನೆ ಮೈಸೂರಲ್ಲಿ ತಾನು ಮಾತಾಡುತ್ತಿದ್ದಾಗ ಅಡ್ಡಬಾಯಿ ಹಾಕುತ್ತಿದ್ದ ಮುಡಾ ಅಧ್ಯಕ್ಷ ಕೆ ಮರಿಗೌಡರನ್ನು ನಯವಾಗಿ ಗದರಿದ್ದ ಸುರೇಶ್ ಇವತ್ತು ಮುಖ್ಯಮಂತ್ರಿ ಹಿಂದೆ ನಿಂತು ಅವರಿಗೆ ಪ್ರಾಮ್ಟಿಂಗ್ ಮಾಡುತ್ತಿದ್ದರು!

ಬೆಂಗಳೂರು: ವಿಧಾನಸೌಧದೊಳಗೆ ಹೋಗುವಾಗ ಮುಡಾ ಅಕ್ರಮ ಸೈಟು ಹಂಚಿಕೆ ಸಂಬಂಧಿಸಿದಂತೆ ಅಸ್ಪಷ್ಟ ಪ್ರತಿಕ್ರಿಯೆ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಹೊರಬಂದ ಮೇಲೆ ವಿಸ್ತಾರವಾಗಿ ಮಾತಾಡಿದರು. ತಮ್ಮ ಜಮೀನು ಮುಡಾ ಸ್ವಾಧೀನ ಮಾಡಿಕೊಂಡ ಬಳಿಕ ನಿರ್ದಿಷ್ಟವಾದ ಪ್ರದೇಶದಲ್ಲಿಯೇ ಸೈಟು ಬೇಕೆಂದು ತಾವು ಕೇಳಿಲ್ಲ, ಎಲ್ಲಕ್ಕಿಂತ ಮುಖ್ಯವಾಗಿ ತಮಗೆ ಸೈಟು ಮಂಜೂರಾಗಿದ್ದು 2019ರಲ್ಲಿ ಮತ್ತು ಆವಾಗ ಬಿಜೆಪಿ ಸರ್ಕಾರ ಅಧಿಕಾರದಲ್ಲಿತ್ತು, ಆಗ ಅವರು ನಿಯಮಾನುಸಾರ ಸೈಟು ಹಂಚಿಕೆ ಮಾಡಿ ಈಗ ಅಕ್ರಮ, ಕಾನೂನುಬಾಹಿರ ಅಂದರೆ ಹೇಗಾದೀತು ಎಂದು ಸಿದ್ದರಾಮಯ್ಯ ಕೇಳಿದರು. ಲ್ಯಾಂಡ್ ಟು ಲ್ಯಾಂಡ್ ನಿಯಮದಡಿ ಪರ್ಯಾಯ ನಿವೇಶನಗಳನ್ನು ನೀಡಲಾಗಿದೆ ಅದರಲ್ಲಿ ತಪ್ಪೇನು ಬಂತು ಎಂದು ಪ್ರಶ್ನಿಸಿದ ಅವರು ತಪ್ಪು ಜರುಗಿದ್ದೇಯಾದರೆ ಅದು ಮುಡಾದಿಂದ ಮಾತ್ರುತ್ತಾ ಎಂದರು. ಅದೆಲ್ಲ ಹೋಗಲಿ, ಮುಡಾ ತಮ್ಮ 3.16 ಎಕರೆ ಜಮೀನು ಸ್ವಾಧೀನ ಮಾಡಿಕೊಂಡಿರುವುದಕ್ಕೆ ಮಾರುಕಟ್ಟೆ ಬೆಲೆ ಕೊಡಲಿ ರಗಳೇನೇ ಇರೋದಿಲ್ಲ, ಮುಖ್ಯಮಂತ್ರಿ ಎಂಬ ಕಾರಣಕ್ಕೆ ತಾನು ಜಮೀನು ಬಿಟ್ಟುಕೊಡಲಾಗುತ್ತಾ? ಆ ಜಮೀನಿನ ಮಾರ್ಕೆಟ್ ಬೆಲೆ ₹ 62 ಕೋಟಿ ಆಗುತ್ತದೆ, ಅದರ ಪ್ರಕಾರ ತಮಗೆ ಹಣ ಕೊಟ್ಟು ಬಿಡಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

 

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ನನ್ನ ವಿರುದ್ಧ ಸೋತಿದ್ದಕ್ಕೆ ಸೋಮಣ್ಣಗೆ ಕೇಂದ್ರದಲ್ಲಿ ಮಂತ್ರಿಯಾಗುವ ಯೋಗ ಸಿಕ್ಕಿತು! ಮುಖ್ಯಮಂತ್ರಿ ಸಿದ್ದರಾಮಯ್ಯ

Published On - 5:02 pm, Thu, 4 July 24

Follow us on