Liquor Price Hike: ನಾನು ಬಡವ ಸ್ವಾಮಿ ಎಣ್ಣೆ ರೇಟ್ ಕಡಿಮೆ ಮಾಡಿ

Liquor Price Hike: ನಾನು ಬಡವ ಸ್ವಾಮಿ ಎಣ್ಣೆ ರೇಟ್ ಕಡಿಮೆ ಮಾಡಿ

ಸೂರಜ್​, ಮಹಾವೀರ್​ ಉತ್ತರೆ
| Updated By: ಕಿರಣ್ ಹನುಮಂತ್​ ಮಾದಾರ್

Updated on:Jul 08, 2023 | 3:07 PM

ಬಜೆಟ್​ನಲ್ಲಿ ಆಲ್ಕೋಹಾಲ್​ ಬೆಲೆ ಏರಿಕೆಗೆ ರಾಜ್ಯಾದ್ಯಂತ ಮದ್ಯಪ್ರಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಲೆ ಏರಿಕೆಯಿಂದ ಮದ್ಯಪ್ರಿಯರಿಗೆ ಆಘಾತವಾಗಿದ್ದು, ಹಾವೇರಿಯಲ್ಲಿ ಮದ್ಯಪ್ರಿಯರು ‘ನಾನು ಬಡವ ಸ್ವಾಮಿ, ಎಣ್ಣೆ ರೇಟ್​ ಕಡಿಮೆ ಮಾಡಿ ಎಂದು ತನ್ನ ಅಳಲನ್ನ ತೋಡಿಕೊಂಡಿದ್ದಾರೆ.

ಹಾವೇರಿ: ಕಾಂಗ್ರೆಸ್​ ನಾಯಕರುಗಳು ಚುನಾವಣಾ ಹಿಂದೆ ಘೋಷಿಸಿದ್ದ ಗ್ಯಾರಂಟಿ ಯೋಜನೆಗಳನ್ನು ಒಂದೊಂದಾಗಿ ಜಾರಿ ಮಾಡುತ್ತಾ ಬರುತ್ತಿದೆ. ಅದರಂತೆ ನಿನ್ನೆ(ಜು.7) ನೂತನ ಸರ್ಕಾರದ ಮೊದಲ ಬಜೆಟ್​ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರ 14ನೇ ಬಜೆಟ್​ನ್ನು ಮಂಡನೆ ಮಾಡಿದರು. ಇದಕ್ಕೆ ವಿರೋಧ ಪಕ್ಷಗಳ ನಾಯಕರುಗಳು ತೀವ್ರ ಟೀಕೆ ಮಾಡುತ್ತಿದ್ದು, ಈ ಮಧ್ಯೆ ಆಲ್ಕೋಹಾಲ್​ ಬೆಲೆ ಏರಿಕೆಗೆ ರಾಜ್ಯಾದ್ಯಂತ ಮದ್ಯಪ್ರಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೌದು ಬೆಲೆ ಏರಿಕೆಯಿಂದ ಮದ್ಯಪ್ರಿಯರಿಗೆ ಆಘಾತವಾಗಿದ್ದು, ಹಾವೇರಿ(Haveri)ಯಲ್ಲಿ ಮದ್ಯಪ್ರಿಯರು ‘ನಾನು ಬಡವ ಸ್ವಾಮಿ, ಎಣ್ಣೆ ರೇಟ್​ ಕಡಿಮೆ ಮಾಡಿ, ಅದ್ಯಾಕೆ ಹೆಚ್ಚಾಯ್ತು ಗೊತ್ತಾಗುತ್ತಿಲ್ಲ ಎಂದು ನೋವುನ್ನ ತೋಡಿಕೊಂಡಿದ್ದಾರೆ.

ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Jul 08, 2023 03:06 PM