ಕಾಂಗ್ರೆಸ್ ಪಕ್ಷದಲ್ಲೂ ನನ್ನ ಬಗ್ಗೆ ಪ್ರೀತಿ, ಅಭಿಮಾನವಿರುವ ಬಹಳಷ್ಟು ನಾಯಕರಿದ್ದಾರೆ: ಬಿ ಶ್ರೀರಾಮುಲು
ತಾನು ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ಸಮಕಾಲೀನರು ಎಂದು ಹೇಳುವ ಶ್ರೀರಾಮುಲು ವಿಜಯಪುರ ಶಾಸಕ ಹಿಂದೆ ಅಟಲ ಬಿಹಾರಿ ವಾಜಪೇಯಿ ಅವರ ಸರ್ಕಾರದಲ್ಲಿ ಮಿನಿಸ್ಟ್ರಾಗಿದ್ದವರು ಎನ್ನುತ್ತಾರೆ. ಯತ್ನಾಳ್, ಅನಂತಕುಮಾರ್, ಯಡಿಯೂರಪ್ಪ, ಶಿವಪ್ಪ ಮತ್ತು ತಮ್ಮ ಭಾಗದ ಡಾ ಎಂ ಆರ್ ತಂಗಾ ಮೊದಲಾದವರೆಲ್ಲ ಪಕ್ಷದ ಸಂಘಟನೆಗಾಗಿ ದುಡಿದವರು ಎಂದು ಶ್ರೀರಾಮುಲು ಹೇಳುತ್ತಾರೆ.
ಕೋಲಾರ: ಮಾಜಿ ಸಚಿವ ಮತ್ತು ಬಿಜೆಪಿ ನಾಯಕ ಬಿ ಶ್ರೀರಾಮುಲು ಅವರಿಗೆ ಯಾವ ಪ್ರಶ್ನೆ ಕೇಳಿದರೂ ನೇರವಾಗಿ ಉತ್ತರ ನೀಡದೆ ಸುತ್ತುಬಳಸಿ ನೀಡುತ್ತಾರೆ. ಬಿಜೆಪಿಯ ಕೆಲ ನಾಯಕರ ವಿರುದ್ಧ ಅವರು ಅಸಮಾಧಾನ ಹೊರಹಾಕಿದಾಗ ಕಾಂಗ್ರೆಸ್ ಪಕ್ಷದವರು ಸಂಪರ್ಕಿಸಿದ್ದರೆ ಅಂತ ಕೇಳಿದರೆ ಅವರು, ರಾಮುಲು ಒಳ್ಳೆಯವನು ಪಕ್ಷಕ್ಕೆ ಬಂದರೆ ಒಳ್ಳೆಯದಾಗುತ್ತದೆ ಎಂದು ಭಾವಿಸುವವರು ಆ ಪಕ್ಷದಲ್ಲಿದ್ದಾರೆ, ರಾಜಕೀಯ ಪಕ್ಷಗಳಲ್ಲಿ ಇಂಥ ಸಂದರ್ಭಗಳು ಸಂಕಷ್ಟಗಳು ಎದುರಾದಾಗ ಬೇರೆ ಪಕ್ಷದ ನಾಯಕರು ಸಂಪರ್ಕಿಸಿ ನೆರವಿನ ಅವಶ್ಯಕತೆಯಿದೆಯಾ ಅಂತ ಕೇಳುತ್ತಾರೆ, ಅವರಿಗೆ ತೊಂದರೆಯಾದಾಗ ತಾನು ಕೂಡ ಸಂಪರ್ಕಿಸಿದುಂಟು ಎಂದು ಹೇಳುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಶ್ರೀರಾಮುಲುಗೂ ವಿಜಯೇಂದ್ರ ಮುಂದುವರಿಯುವುದು ಬೇಕಿಲ್ಲ, ಅದನ್ನು ಚಾಣಾಕ್ಷತೆಯಿಂದ ಹೇಳುತ್ತಾರೆ!