ತ್ರಿವೇಣಿ ಸಂಗಮದಲ್ಲಿ ಅಪ್ಪು ಫೋಟೋ ಹಿಡಿದು ಪುಣ್ಯ ಸ್ನಾನ ಮಾಡಿದ ಅಭಿಮಾನಿ: ವಿಡಿಯೋ ನೋಡಿ

ತ್ರಿವೇಣಿ ಸಂಗಮದಲ್ಲಿ ಅಪ್ಪು ಫೋಟೋ ಹಿಡಿದು ಪುಣ್ಯ ಸ್ನಾನ ಮಾಡಿದ ಅಭಿಮಾನಿ: ವಿಡಿಯೋ ನೋಡಿ

ಶಿವಕುಮಾರ್ ಪತ್ತಾರ್. ಹುಬ್ಬಳ್ಳಿ
| Updated By: ಗಂಗಾಧರ​ ಬ. ಸಾಬೋಜಿ

Updated on:Feb 05, 2025 | 8:01 PM

ಹುಬ್ಬಳ್ಳಿಯ ಅಭಿಮಾನಿ ಕುಂಭಮೇಳದಲ್ಲಿ ಪುನೀತ್ ರಾಜಕುಮಾರ್ ಅವರ ಫೋಟೋದೊಂದಿಗೆ ಪವಿತ್ರ ಸ್ನಾನ ಮಾಡುವ ಮೂಲಕ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ. ಪುನೀತ್ ಅವರ ಫೋಟೋವನ್ನು ನೀರಿನಲ್ಲಿ ಮುಳುಗಿಸಿ ಅವರ ಪರ ಘೋಷಣೆ ಕೂಡ ಕೂಗಿದ್ದಾರೆ. ಇದು ದಿವಂಗತ ನಟನ ಅಪಾರ ಜನಪ್ರಿಯತೆಗೆ ಸಾಕ್ಷಿಯಾಗಿದೆ.

ಹುಬ್ಬಳ್ಳಿ, ಫೆಬ್ರವರಿ 05: ಅಪ್ಪು, ಪವರ್​​ ಸ್ಟಾರ್​​, ಯುವರತ್ನ, ನಗುಮೊಗದೊಡೆಯ ಹೀಗೆ ಸಾಕಷ್ಟು ಹೆಸರುಗಳಿಂದ ಕರೆಸಿಕೊಳ್ಳುತ್ತಿದ್ದ ದಿವಗಂತ ಪುನೀತ್​​ ರಾಜ್​​​ಕುಮಾರ್ (Puneeth Rajkumar)
​​ ಅಭಿಮಾನಿಗಳ ಪಾಲಿಗೆ ಎಂದಿಗೂ ಜೀವಂತ​.​ ಪುನೀತ್​​ ರಾಜ್‌ಕುಮಾರ್​ ನಮ್ಮನ್ನು ಅಗಲಿ ಸುಮಾರು ವರ್ಷಗಳಾಗಿವೆ. ಆದರೂ ಇಂದಿಗೂ ಅವರ ಮೇಲಿನೆ ಅಭಿಮಾನ ಕಡಿಮೆ ಆಗಿಲ್ಲ. ಅದಕ್ಕೆ ಸಾಕ್ಷಿಯೆಂಬಂತೆ ಹುಬ್ಬಳ್ಳಿಯ ಅಭಿಮಾನಿಗಳು  ಕುಂಭಮೇಳದಲ್ಲೂ ಪುನೀತ್ ರಾಜಕುಮಾರ್ ಮೇಲಿನ ಅಭಿಮಾನ ಮೆರೆದಿದ್ದಾರೆ. ಅಪ್ಪು ಫೋಟೋದೊಂದಿಗೆ ಪವಿತ್ರ ತ್ರೀವೆಣಿ ಸಂಗಮದಲ್ಲಿ ಅಭಿಮಾನಿ ರಘು ಸ್ನಾನ ಮಾಡಿದ್ದಾರೆ. ಅಪ್ಪು ಫೋಟೋ ನೀರಿನಲ್ಲಿ ಮುಳುಗಿಸಿ ಪವರ್ ಸ್ಟಾರ್ ಪುನೀತ್ ಪರ ಘೋಷಣೆ ಮಾಡಿದ್ದಾರೆ. ವಿಡಿಯೋ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Published on: Feb 05, 2025 07:56 PM