‘ಲವ್ ಯೂ ರಚ್ಚು’ ಟ್ರೇಲರ್​ ಲಾಂಚ್​ ಕಾರ್ಯಕ್ರಮಕ್ಕೆ ಧ್ರುವ ಸರ್ಜಾ ಅತಿಥಿ; ಲೈವ್​ ವೀಕ್ಷಿಸಿ

| Updated By: ರಾಜೇಶ್ ದುಗ್ಗುಮನೆ

Updated on: Dec 16, 2021 | 7:05 PM

ರಚಿತಾ ರಾಮ್​ ಅವರು ಅಜಯ್​ ರಾವ್​ ಜತೆಗೆ ‘ಲವ್​ ಯೂ ರಚ್ಚು’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಆರಂಭದಲ್ಲಿಯೇ ಸಾಕಷ್ಟು ಸುದ್ದಿ ಮಾಡಿತ್ತು.

ರಚಿತಾ ರಾಮ್​ ಮತ್ತು ಅಜಯ್​ ರಾವ್ ಮುಖ್ಯಭೂಮಿಕೆ ನಿಭಾಯಿಸುತ್ತಿರುವ ‘ಲವ್ ಯೂ ರಚ್ಚು’ ಸಿನಿಮಾದ ಟ್ರೇಲರ್​ ರಿಲೀಸ್​ ಆಗಿದೆ. ಶೂಟಿಂಗ್​ ಸಂದರ್ಭದಲ್ಲಿಯೇ ಸಾಕಷ್ಟು ವಿವಾದ ಸೃಷ್ಟಿಸಿದ್ದ ‘ಲವ್​ ಯೂ ರಚ್ಚು’ ಸಿನಿಮಾಗಾಗಿ ರಚಿತಾ ಬೋಲ್ಡ್​ ಆಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರ ಸಸ್ಪೆನ್ಸ್​ ಥ್ರಿಲ್ಲರ್​ ಕಥಾಹಂದರ ಹೊಂದಿದೆ ಎಂಬುದಕ್ಕೆ ಟ್ರೇಲರ್​ ಸಾಕ್ಷ್ಯ ನೀಡಿದೆ. ಈ ಕಾರ್ಯಕ್ರಮಕ್ಕೆ ಅತಿಥಿಯಾಗಿ ಧ್ರುವ ಸರ್ಜಾ ಆಗಮಿಸಿದ್ದಾರೆ.

ರಚಿತಾ ರಾಮ್​ ಅವರು ಅಜಯ್​ ರಾವ್​ ಜತೆಗೆ ‘ಲವ್​ ಯೂ ರಚ್ಚು’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಆರಂಭದಲ್ಲಿಯೇ ಸಾಕಷ್ಟು ಸುದ್ದಿ ಮಾಡಿತ್ತು. ಫೈಟರ್​ ವಿವೇಕ್​ ಅವರು ಶೂಟಿಂಗ್​ ವೇಳೆ ಹೈ ವೋಲ್ಟೇಜ್​ ತಂತಿ ಸ್ಪರ್ಶಿಸಿ ಮೃತಪಟ್ಟಿದ್ದರು. ಈ ಪ್ರಕರಣದಿಂದ ಸಿನಿಮಾ ತಂಡದ ಕೆಲವರು ಅರೆಸ್ಟ್​ ಕೂಡ ಆಗಿದ್ದರು. ಈ ಘಟನೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಈಗ ಸಿನಿಮಾ ಟ್ರೇಲರ್​ ಮೂಲಕ ಸದ್ದು ಮಾಡುತ್ತಿದೆ.

ಇದನ್ನೂ ಓದಿ: ಚಂದನ್ ಶೆಟ್ಟಿ ಜತೆ ರಚಿತಾ ರಾಮ್​ ‘ಲಕ ಲಕ ಲ್ಯಾಂಬೋರ್ಗಿನಿ’; ಪೋಸ್ಟರ್​ ಮೂಲಕ ಹೆಚ್ಚಿತು ಕ್ರೇಜ್​

‘ಮಾರ್ಟಿನ್’​ ಚಿತ್ರಕ್ಕೆ ವೈಭವಿ ಶಾಂಡಿಲ್ಯ ನಾಯಕಿ; ಧ್ರುವ ಸರ್ಜಾಗೆ ಜೋಡಿಯಾದ ಬಹುಭಾಷಾ ನಟಿ