‘ಮಾರ್ಟಿನ್’​ ಚಿತ್ರಕ್ಕೆ ವೈಭವಿ ಶಾಂಡಿಲ್ಯ ನಾಯಕಿ; ಧ್ರುವ ಸರ್ಜಾಗೆ ಜೋಡಿಯಾದ ಬಹುಭಾಷಾ ನಟಿ

Vaibhavi Shandilya: ಹಲವು ಕಾರಣಗಳಿಂದಾಗಿ ‘ಮಾರ್ಟಿನ್’​ ಸಿನಿಮಾ ಹೈಪ್​ ಸೃಷ್ಟಿ ಮಾಡಿದೆ. ಈ ಚಿತ್ರದಲ್ಲಿ ಧ್ರುವ ಸರ್ಜಾಗೆ ನಾಯಕಿಯಾಗಿ ವೈಭವಿ ಶಾಂಡಿಲ್ಯ ಆಯ್ಕೆ ಆಗಿದ್ದಾರೆ.

‘ಮಾರ್ಟಿನ್’​ ಚಿತ್ರಕ್ಕೆ ವೈಭವಿ ಶಾಂಡಿಲ್ಯ ನಾಯಕಿ; ಧ್ರುವ ಸರ್ಜಾಗೆ ಜೋಡಿಯಾದ ಬಹುಭಾಷಾ ನಟಿ
ವೈಭವಿ ಶಾಂಡಿಲ್ಯ, ಧ್ರುವ ಸರ್ಜಾ
Follow us
TV9 Web
| Updated By: ಮದನ್​ ಕುಮಾರ್​

Updated on: Dec 08, 2021 | 3:37 PM

ಸಿನಿಮಾಗಳ ಆಯ್ಕೆಯಲ್ಲಿ ನಟ ಧ್ರುವ ಸರ್ಜಾ (Dhruva Sarja) ತುಂಬ ಚ್ಯೂಸಿ. ‘ಪೊಗರು’ ಸಿನಿಮಾದ ಗೆಲುವಿನ ಬಳಿಕ ಅವರು ‘ಮಾರ್ಟಿನ್​’ ಸಿನಿಮಾ (Martin Movie) ಒಪ್ಪಿಕೊಂಡರು. ಸದ್ಯ ಆ ಚಿತ್ರಕ್ಕೆ ಶೂಟಿಂಗ್​ ನಡೆಯುತ್ತಿದೆ. ಧ್ರುವ ಸರ್ಜಾಗೆ ನಾಯಕಿಯಾಗಿ ನಟಿಸುವುದು ಯಾರು ಎಂಬ ಬಗ್ಗೆ ಚಿತ್ರತಂಡದಿಂದ ಈವರೆಗೆ ಮಾಹಿತಿ ಸಿಕ್ಕಿರಲಿಲ್ಲ. ಆ ಕುರಿತು ಈ ‘ಮಾರ್ಟಿನ್​’ ಬಳಗ ಬ್ರೇಕಿಂಗ್ ನ್ಯೂಸ್​ ನೀಡಿದೆ. ಧ್ರುವ ಸರ್ಜಾಗೆ ಜೋಡಿಯಾಗಿಸಲು ಬಹುಭಾಷಾ ನಟಿ ವೈಭವಿ ಶಾಂಡಿಲ್ಯ (Vaibhavi Shandilya) ಅವರನ್ನು ಆಯ್ಕೆ ಮಾಡಲಾಗಿದೆ. ಕೆಲವೇ ಕೆಲವು ಸಿನಿಮಾಗಳಲ್ಲಿ ನಟಿಸಿದ್ದರೂ ಕೂಡ ವೈಭವಿ ಅವರು ತುಂಬ ಫೇಮಸ್​ ಆಗಿದ್ದಾರೆ. ಒಳ್ಳೊಳ್ಳೆಯ ಪ್ರಾಜೆಕ್ಟ್​ಗಳು ಅವರ ಪಾಲಿಗೆ ಒಲಿದು ಬರುತ್ತಿವೆ. ಈಗ ಅವರು ‘ಮಾರ್ಟಿನ್​’ ಚಿತ್ರಕ್ಕೆ ನಾಯಕಿ ಆಗಿದ್ದಾರೆ. ಅವರ ಪಾತ್ರ ಹೇಗಿರಲಿದೆ ಎಂಬ ಬಗ್ಗೆ ಇನ್ನಷ್ಟೇ ಅಪ್​ಡೇಟ್​ ಸಿಗಬೇಕಿದೆ.

ವೈಭವಿ ಶಾಂಡಿಲ್ಯ ಮೊದಲು ನಟಿಸಿದ್ದು ಮರಾಠಿಯ ‘ಎಕ್​ ಅಲ್ಬೇಲಾ’ ಸಿನಿಮಾದಲ್ಲಿ. ನಂತರ ಅವರಿಗೆ ತಮಿಳು ಮತ್ತು ತೆಲುಗು ಚಿತ್ರರಂಗದಿಂದ ಅವಕಾಶಗಳು ಬರಲಾರಂಭಿಸಿದವು. ‘ರಾಜ್​ ವಿಷ್ಣು’ ಸಿನಿಮಾದಲ್ಲಿ ನಟಿಸುವ ಮೂಲಕ ಅವರು ಕನ್ನಡಕ್ಕೂ ಕಾಲಿಟ್ಟರು. ಅದಲ್ಲದೇ, ಬಹುನಿರೀಕ್ಷಿತ ‘ಗಾಳಿಪಟ 2’ ಚಿತ್ರದಲ್ಲೂ ಅವರು ನಟಿಸುತ್ತಿದ್ದಾರೆ. ಈಗ ಅವರಿಗೆ ‘ಮಾರ್ಟಿನ್​’ ಸಿನಿಮಾದಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿದೆ.

ಹಲವು ಕಾರಣಗಳಿಂದಾಗಿ ‘ಮಾರ್ಟಿನ್’​ ಸಿನಿಮಾ ಹೈಪ್​ ಸೃಷ್ಟಿ ಮಾಡಿದೆ. ಚಿತ್ರೀಕರಣ ಆರಂಭ ಆಗುವುದಕ್ಕೂ ಮುನ್ನವೇ ಫೋಟೋಶೂಟ್​ ಮಾಡಿಸಲಾಗಿತ್ತು. ಟೈಟಲ್​ ಲಾಂಚ್​ ವೇಳೆಗೆ ಧ್ರುವ ಅವರ ಫಸ್ಟ್​ಲುಕ್​ ಕೂಡ ಬಿಡುಗಡೆ ಆಗಿತ್ತು. ಮೋಷನ್​ ಪೋಸ್ಟರ್​ ​ ನೋಡಿ ಫ್ಯಾನ್ಸ್​ ಫಿದಾ ಆಗಿದ್ದರು. ಈ ಚಿತ್ರಕ್ಕಾಗಿ ಧ್ರುವ ಸಾಕಷ್ಟು ವರ್ಕೌಟ್​ ಮಾಡುತ್ತಿದ್ದಾರೆ. ಜಿಮ್​ನಲ್ಲಿ ಕಸರತ್ತ ನಡೆಸುತ್ತಿರುವ ವಿಡಿಯೋವನ್ನು ಅವರು ಇತ್ತೀಚೆಗೆ ಶೇರ್​ ಮಾಡಿಕೊಂಡಿದ್ದಾರೆ.

‘ಮಾರ್ಟಿನ್’ ಚಿತ್ರಕ್ಕೆ ಎ.ಪಿ. ಅರ್ಜುನ್ ನಿರ್ದೇಶನ ಮಾಡುತ್ತಿದ್ದಾರೆ. ಧ್ರುನ ನಟನೆಯ ಮೊದಲ ಸಿನಿಮಾ ‘ಅದ್ದೂರಿ’ಗೆ ಆ್ಯಕ್ಷನ್​-ಕಟ್​ ಹೇಳಿದ್ದ ಅವರು ಈಗ ಮತ್ತೊಮ್ಮೆ ಧ್ರುವ ಜತೆ ಕೈ ಜೋಡಿಸಿದ್ದಾರೆ.

ಯಾರು ಇಲ್ಲಿ ಮಾರ್ಟಿನ್​?

ಸಾಮಾನ್ಯವಾಗಿ ಹೀರೋ ಪಾತ್ರದ ಹೆಸರನ್ನೇ ಚಿತ್ರದ ಶೀರ್ಷಿಕೆಯನ್ನಾಗಿ ಇಡಲಾಗುತ್ತದೆ. ಅದೇ ರೀತಿ ‘ಮಾರ್ಟಿನ್​’ ಚಿತ್ರದಲ್ಲಿ ಧ್ರುವ ಸರ್ಜಾ ಅವರ ಪಾತ್ರದ ಹೆಸರು ಮಾರ್ಟಿನ್​ ಆಗಿರುತ್ತದೆ ಎಂಬುದು ಬಹುತೇಕರ ಊಹೆ. ಆದರೆ ಅದು ನಿಜವಲ್ಲ ಎಂದು ಧ್ರುವ ಸರ್ಜಾ ಈಗಾಗಲೇ ಸ್ಪಷ್ಟಪಡಿಸುತ್ತಿದ್ದಾರೆ. ‘ಮಾರ್ಟಿನ್​ ಎಂಬುದು ಒಂದು ಹೆಸರು. ಆದರೆ ಈ ಚಿತ್ರದಲ್ಲಿ ನಾನು ಮಾರ್ಟಿನ್​ ಅಲ್ಲ. ಅದು ಯಾರು ಎಂಬುದು ಸಿನಿಮಾ ನೋಡಿದ ಮೇಲೆ ತಿಳಿಯಲಿದೆ. ಅದಕ್ಕಾಗಿಯೇ ಈ ಟೀಸರ್​ನಲ್ಲಿ Who is Martin ಎಂಬ ಡೈಲಾಗ್​ ಇದೆ’ ಎಂದು ಸಿನಿಮಾ ಸೆಟ್ಟೇರಿದ ದಿನವೇ ಧ್ರುವ ಸರ್ಜಾ ಹೇಳಿದ್ದರು.

ಇದನ್ನೂ ಓದಿ:

ಮೀಟೂ ಕೇಸ್​: ಶ್ರುತಿ ಹರಿಹರನ್​ಗೆ ಹಿನ್ನಡೆ ಬಳಿಕ ಧ್ರುವ ಸರ್ಜಾ, ಮೇಘನಾ ರಾಜ್​ ಪ್ರತಿಕ್ರಿಯೆ ಏನು?

ಪುನೀತ್ ಸರ್ ನಮಗೆಲ್ಲ ಪ್ರೇರಣೆಯಾಗಿದ್ದರು, ಅವರು ಮಾಡುವ ಕಸರತ್ತು ಕಲಿಸಬೇಕೆಂದು ದುಂಬಾಲು ಬೀಳುತ್ತಿದ್ದೆ: ಧ್ರುವ ಸರ್ಜಾ

ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್