ನಾಲ್ಕು ವರ್ಷದ ಪ್ರೀತಿಗೆ ಸಾಕ್ಷಿಯಾಯ್ತು ಅಂಬೇಡ್ಕರ್ ಜಯಂತಿ: ಪ್ರತಿಮೆ ಎದುರೇ ವಿವಾಹ

Edited By:

Updated on: Apr 14, 2025 | 2:55 PM

ಅಂಬೇಡ್ಕರ್ ಜಯಂತಿ ಹಿನ್ನೆಲೆ ಆನೇಕಲ್​​​ ಒಂದು ವಿಶೇಷ ಮದುವೆಗೆ ಸಾಕ್ಷಿಯಾಗಿದೆ. ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದ ಕಿರಣ್ ಮತ್ತು ಪ್ರಿಯಾಂಕ, ಕುಟುಂಬದ ವಿರೋಧದ ಹೊರತಾಗಿಯೂ, ಅಂಬೇಡ್ಕರ್ ಜಯಂತಿಯಂದು ಸರಳವಾಗಿ ವಿವಾಹವಾಗಿದ್ದಾರೆ. ಸಂವಿಧಾನ ಪೀಠಿಕೆ ಮತ್ತು ಪಂಚಶೀಲವನ್ನು ಪಠಿಸುವ ಮೂಲಕ ಗಣ್ಯರ ಸಮ್ಮುಖದಲ್ಲಿ ಸರಳವಾಗಿ ಮದುವೆಯಾದರು.

ಆನೇಕಲ್​​, ಏಪ್ರಿಲ್​ 14: ಇಂದು ಕರ್ನಾಟಕದಲ್ಲಿ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್​ ಡಾ. ಬಿ.ಆರ್​ ಅಂಬೇಡ್ಕರ್ ಜಯಂತಿ (Ambedkar Jayanti). ಬೆಂಗಳೂರು ಹೊರವಲಯದ ಆನೇಕಲ್ ಪಟ್ಟಣದ ಅಂಬೇಡ್ಕರ್ ಪ್ರತಿಮೆ ಮುಂಭಾಗ ಪ್ರೇಮಿಗಳು ವಿವಾಹ ಮಾಡಿಕೊಳ್ಳುವ ಮೂಲಕ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಮೈಸೂರಿನ ಟಿ.ನರಸೀಪುರ ಮೂಲದ ಕಿರಣ್ (27) ಮತ್ತು ಪ್ರಿಯಾಂಕ (20) ನಾಲ್ಕು ವರ್ಷದಿಂದ ಪ್ರೀತಿಸುತ್ತಿದ್ದರು. ಮನೆಯಲ್ಲಿ ಪ್ರೀತಿಗೆ ವಿರೋಧ ವ್ಯಕ್ತವಾಗಿತ್ತು. ಇಂದು  ಅಂಬೇಡ್ಕರ್ ಜಯಂತಿ ಹಿನ್ನೆಲೆ ಸಂವಿಧಾನ ಪೀಠಿಕೆ ಮತ್ತು ಪಂಚಶೀಲ ಪಡೆದು ಸರಳವಾಗಿ ನವಜೋಡಿ ಮದುವೆ ಮಾಡಿಕೊಂಡಿದ್ದಾರೆ. ಜೋಡಿಗೆ ತಹಶೀಲ್ದಾರ್, ಕಾರ್ಯನಿರ್ವಹಣಾಧಿಕಾರಿ ಮತ್ತು ಇತರ ಗಣ್ಯರು ಶುಭ ಹಾರೈಸಿದರು. ವಿಡಿಯೋ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.