Karnataka Assembly Session: ಬಂಗಾರಪ್ಪನವರ ಹಾಗೆ ಮಧು ಬಂಗಾರಪ್ಪ ಸಹ ದಿಟ್ಟತನದ ನಿರ್ಧಾರ ತೆಗೆದುಕೊಳ್ಳಬೇಕು: ಸುನೀಲ ಕುಮಾರ

|

Updated on: Dec 19, 2024 | 12:21 PM

Karnataka Assembly Session: ಮಧುಬಂಗಾರಪ್ಪ ಉತ್ತರದಿಂದ ತೃಪ್ತರಾಗದ ಸುನೀಲ ಕುಮಾರ್, ಸಚಿವರೇ ನೀವು ಬಂಗಾರಪ್ಪನವರ ಮಗ, ಅವರು ದಿಟ್ಟತನದಿಂದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದರು, ಅವರಂತೆ ನೀವೂ ಗಟ್ಟಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಕೆಂದಾಗ ಮಧು ಬಂಗಾರಪ್ಪ ನಗುತ್ತಾ, ಸಿದ್ದರಾಮಯ್ಯ ಸಹ ಬಂಗಾರಪ್ಪನವರ ಹಾಗೆ ನಿರ್ಧಾರ ತೆಗೆದುಕೊಳ್ಳುವ ವಿಶ್ವಾಸ ತನಗಿದೆ ಎನ್ನುತ್ತಾರೆ.

ಬೆಳಗಾವಿ: ಗೌರವ ಶಿಕ್ಷಕರಿಗೆ ಸರ್ಕಾರ ನೀಡುತ್ತಿರುವ ಸಂಬಳ ಕಡಿಮೆ, ಅವರಿಗೆ ಕೇವಲ 8-9 ತಿಂಗಳು ಮಾತ್ರ ಸಂಬಳ ನೀಡಲಾಗುತ್ತಿದೆ ಮತ್ತು ಅದರಲ್ಲೂ ಅವರಿಗೆ ಫೆಬ್ರುವರಿ ತಿಂಗಳು ಸಂಬಳ ಕಡಿತ ಮಾಡಲಾಗಿದೆ- ಈ ತಪ್ಪುಗಳನ್ನೆಲ್ಲ ಸರಿಮಾಡಲು ಸರ್ಕಾರ ಯಾವ ಕ್ರಮ ತೆಗೆದುಕೊಳ್ಳಲಿದೆ ಅಂತ ಸದನದಲ್ಲಿ ಬಿಜೆಪಿ ಶಾಸಕ ಸುನೀಲ ಕುಮಾರ್ ಕೇಳಿದಾಗ ಉತ್ತರಿಸಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಸಂಬಳ ಹೆಚ್ಚಿಸಲು ಆರ್ಥಿಕ ಇಲಾಖೆಗೆ ಮನವಿ ಮಾಡಲಾಗಿತ್ತು, ಅವರು ಪ್ರಸ್ತಾವನೆ ವಾಪಸ್ಸು ಕಳಿಸಿದ್ದಾರೆ, ಮುಖ್ಯಮಂತ್ರಿಯವರ ಜೊತೆ ಮಾತಾಡಿ ಪುನಃ ಪ್ರಸ್ತಾವನೆ ಕಳಿಸಿ ಸಂಬಳ ಹೆಚ್ಚಿಸಲು ಪ್ರಯತ್ನಿಸಲಾಗುವುದು ಎನ್ನುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  Karnataka Assembly Session: ಸರ್ಕಾರದ ಧೋರಣೆ ವಿರೋಧಿಸಿ ಬಿಜೆಪಿ ಸಭಾತ್ಯಾಗ, ತಡೆಯುವ ವ್ಯರ್ಥ ಪ್ರಯತ್ನ ಮಾಡಿದ ಸ್ಪೀಕರ್