ಮಹಾಕುಂಭದಲ್ಲಿ ಹೂವಿನ ಹಾರ ಮಾರುವ ಯುವತಿ ಸೌಂದರ್ಯಕ್ಕೆ ಫ್ಯಾನ್ ಆಗದವರೇ ಇಲ್ಲ!

|

Updated on: Jan 17, 2025 | 7:45 PM

ಉತ್ತರ ಪ್ರದೇಶದ ಪ್ರಯಾಗರಾಜ್​ನಲ್ಲಿ ನಡೆಯುತ್ತಿರುವ ಮಹಾಕುಂಭದಲ್ಲಿ ಭಾಗವಹಿಸಲು ದೇಶಾದ್ಯಂತ ಅನೇಕ ಭಾಗಗಳಿಂದ ಭಕ್ತರು ಬಂದಿದ್ದಾರೆ. ಅದೇರೀತಿ, ಎಲ್ಲೆಡೆಯಿಂದ ವ್ಯಾಪಾರಿಗಳು ಕೂಡ ಬಂದಿದ್ದಾರೆ. ಅವರಲ್ಲಿ ಹೂವಿನ ಹಾರ ಮಾರುವ ಕಪ್ಪು ಸುಂದರಿಯೊಬ್ಬಳು ಇದೀಗ ಭಾರೀ ಸುದ್ದಿಯಲ್ಲಿದ್ದಾಳೆ. ಆಕೆಯ ಸ್ನಿಗ್ಧ ಸೌಂದರ್ಯವನ್ನು ಕಂಡ ನೆಟ್ಟಿಗರು ಆಕೆಯನ್ನು ಸೊನಾಕ್ಷಿ ಸಿನ್ಹಾ, ಮೊನಾಲಿಸಾಗೆ ಹೋಲಿಸಿದ್ದಾರೆ.

ಪ್ರಯಾಗರಾಜ್: ಉತ್ತರ ಪ್ರದೇಶದ ಪ್ರಯಾಗರಾಜ್​ನಲ್ಲಿ ನಡೆಯುತ್ತಿರುವ ಮಹಾ ಕುಂಭದಲ್ಲಿ ಅನಿರೀಕ್ಷಿತ ಯುವತಿಯೊಬ್ಬಳು ಗಮನ ಸೆಳೆದಿದ್ದು, ಆಕೆ ಇಂಟರ್ನೆಟ್‌ನಾದ್ಯಂತ ಗಮನ ಸೆಳೆದಿದ್ದಾಳೆ. ಇಂದೋರ್‌ನ ಹೂವಿನ ಹಾರ ಮಾರುವ ಯುವತಿಯ ಅದ್ಭುತ ಸೌಂದರ್ಯವು ಭಾರೀ ಚರ್ಚೆಯಾಗುತ್ತಿದೆ. ಕಪ್ಪು ಮೈಬಣ್ಣದ ಈ ಸುಂದರಿಯ ಫೋಟೋ, ವಿಡಿಯೋಗಳು ವೈರಲ್ ಆಗಿದ್ದು, ಕೆಲವರು ಆಕೆಯನ್ನು ಬಾಲಿವುಡ್ ನಟಿ ಸೊನಾಕ್ಷಿ ಸಿನ್ಹಾಗೆ ಹೋಲಿಸಿದರೆ ಇನ್ನು ಕೆಲವರು ಮೊನಾಲಿಸಾಗೆ ಹೋಲಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ