ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ರಾಸಾಯನಿಕ ಟ್ಯಾಂಕರ್ ಪಲ್ಟಿ; ಭಾರೀ ಟ್ರಾಫಿಕ್ ಜಾಮ್
ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ನಿನ್ನೆ ಸಂಜೆ ಕೆಮಿಕಲ್ ಟ್ಯಾಂಕರ್ ಪಲ್ಟಿಯಾಗಿ ಬಿದ್ದಿದೆ. ಇದರಿಂದ ಇಂದು ವಾಹನಗಳು ರಸ್ತೆಯುದ್ದಕ್ಕೂ ಸಾಲುಗಟ್ಟಿ ನಿಂತಿದ್ದು ಭಾರೀ ಟ್ರಾಫಿಕ್ ಜಾಮ್ ಉಂಟಾಗಿತ್ತು. ಸಾವಿರಾರು ಪ್ರಯಾಣಿಕರು ಗಂಟೆಗಟ್ಟಲೆ ಕಾಯುವಂತಾಯಿತು. ಅಪಘಾತದ ನಂತರ, ಟ್ಯಾಂಕರ್‌ನಿಂದ ಗ್ಯಾಸ್ ಸೋರಿಕೆ ಪತ್ತೆಯಾಗಿದ್ದು, ತಕ್ಷಣದ ತುರ್ತು ಕ್ರಮಗಳನ್ನು ಕೈಗೊಳ್ಳಲಾಗಿದೆ.
ಮುಂಬೈ, ಫೆಬ್ರವರಿ 4: ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ನಿನ್ನೆ ಸಂಜೆ ಕೆಮಿಕಲ್ ಟ್ಯಾಂಕರ್ ಪಲ್ಟಿಯಾಗಿ ಬಿದ್ದಿದೆ. ಇದರಿಂದ ಇಂದು ವಾಹನಗಳು ರಸ್ತೆಯುದ್ದಕ್ಕೂ ಸಾಲುಗಟ್ಟಿ ನಿಂತಿದ್ದು ಭಾರೀ ಟ್ರಾಫಿಕ್ ಜಾಮ್ ಉಂಟಾಗಿತ್ತು. ಸಾವಿರಾರು ಪ್ರಯಾಣಿಕರು ಗಂಟೆಗಟ್ಟಲೆ ಕಾಯುವಂತಾಯಿತು. ಅಪಘಾತದ (Accident) ನಂತರ, ಟ್ಯಾಂಕರ್‌ನಿಂದ ಗ್ಯಾಸ್ ಸೋರಿಕೆ ಪತ್ತೆಯಾಗಿದ್ದು, ತಕ್ಷಣದ ತುರ್ತು ಕ್ರಮಗಳನ್ನು ಕೈಗೊಳ್ಳಲಾಗಿದೆ. ಹೀಗಾಗಿ, ಮುನ್ನೆಚ್ಚರಿಕಾ ಕ್ರಮವಾಗಿ ಬೇರೆ ವಾಹನಗಳನ್ನು ಆ ರಸ್ತೆಯಲ್ಲಿ ಹೋಗದಂತೆ ನಿರ್ಬಂಧಿಸಲಾಗಿತ್ತು.
ಎಕ್ಸ್‌ಪ್ರೆಸ್‌ವೇ ಪೊಲೀಸ್ ಮತ್ತು ಸ್ಥಳೀಯ ಆಡಳಿತದ ಸುಮಾರು 40 ಸಿಬ್ಬಂದಿಗಳ ತಂಡವು ಸ್ಥಳಕ್ಕೆ ಧಾವಿಸಿ ಸೋರಿಕೆಯನ್ನು ತಡೆಗಟ್ಟಲು ಪ್ರಯತ್ನಗಳನ್ನು ಪ್ರಾರಂಭಿಸಿತು. ಆ ಟ್ಯಾಂಕರ್ ಪ್ರೊಪಿಲೀನ್ ಅನ್ನು ಹೊತ್ತೊಯ್ಯುತ್ತಿತ್ತು. ಇದು ಹೆಚ್ಚು ಸುಡುವ ರಾಸಾಯನಿಕವಾಗಿದ್ದು, ಸಣ್ಣ ಕಿಡಿ ಕೂಡ ದುರಂತ ಸ್ಫೋಟಕ್ಕೆ ಕಾರಣವಾಗಬಹುದು ಎಂದು ಅಧಿಕಾರಿಗಳು ಎಚ್ಚರಿಸಿದರು. ಹೀಗಾಗಿಯೇ ಆ ಟ್ಯಾಂಕರ್ ತೆರವು ಕಾರ್ಯಾಚರಣೆ ತಡವಾಯಿತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಮುಂದಿನ 30 ದಿನಗಳಲ್ಲಿ 56,432 ಹುದ್ದೆ ಭರ್ತಿಗೆ ಅನುಮೋದನೆ
ಯುವಕನ ಶವ ತಂದು ಹೆದ್ದಾರಿಯಲ್ಲಿ ಹಾಕಿದ್ದ ಕೇಸ್: ಕೊಲೆ ರಹಸ್ಯ ಬಿಚ್ಚಿಟ್ಟ SP
ಅಧಿಕಾರ ಹಂಚಿಕೆ ತಿಕ್ಕಾಟ ಮಧ್ಯೆ ಬೆಂಗಳೂರಿನಲ್ಲಿ ರಾಬರ್ಟ್ ವಾದ್ರ ಪ್ರತ್ಯಕ್ಷ
9 ರೂ 34 ಪೈಸೆ ಸಾಲಕ್ಕಾಗಿ ಬೆನ್ನುಬಿದ್ದ ಬ್ಯಾಂಕ್ಗೆ ಚಳಿ ಬಿಡಿಸಿದ ಗ್ರಾಹಕ

