AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜಸ್ಥಾನದ ಮಾಹಿ ಬಜಾಜ್ ಸಾಗರ್ ಡ್ಯಾಂನ ಎಲ್ಲ 16 ಗೇಟ್ ಓಪನ್; ವೈಭವದ ವಿಡಿಯೋ ಇಲ್ಲಿದೆ

ರಾಜಸ್ಥಾನದ ಮಾಹಿ ಬಜಾಜ್ ಸಾಗರ್ ಡ್ಯಾಂನ ಎಲ್ಲ 16 ಗೇಟ್ ಓಪನ್; ವೈಭವದ ವಿಡಿಯೋ ಇಲ್ಲಿದೆ

ಸುಷ್ಮಾ ಚಕ್ರೆ
|

Updated on: Sep 04, 2025 | 9:54 PM

Share

ಪಶ್ಚಿಮ ಮಧ್ಯಪ್ರದೇಶ ಮತ್ತು ಆಗ್ನೇಯ ರಾಜಸ್ಥಾನದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಗೇಟ್​ಗಳ್ನು ತೆರೆಯಾಗಿದ್ದು, ರೌದ್ರಾವತಾರ ತಾಳಿ ನುಗ್ಗುತ್ತಿರುವ ನೀರಿನ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಜನಸಾಗರವೇ ಹರಿದುಬರುತ್ತಿದೆ. ಈ ಅಣೆಕಟ್ಟಿನ ಒಟ್ಟು ಸಂಗ್ರಹ 72.93 ಟಿಎಂಸಿ. ಮಾಹಿ ನದಿ 580 ಕಿ.ಮೀ ಉದ್ದದ ನದಿಯಾಗಿದ್ದು, ಮಧ್ಯಪ್ರದೇಶದ ಧಾರ್ ಬಳಿ ಪ್ರಾರಂಭವಾಗಿ, ರಾಜಸ್ಥಾನ ಮತ್ತು ಗುಜರಾತ್ ಮೂಲಕ ಹರಿಯುತ್ತದೆ. ನಂತರ ಅರೇಬಿಯನ್ ಸಮುದ್ರಕ್ಕೆ ಹರಿಯುತ್ತದೆ. ಇದು ರಾಜಸ್ಥಾನ ಮತ್ತು ಮಧ್ಯಪ್ರದೇಶದ ಬುಡಕಟ್ಟು ಪ್ರದೇಶಗಳಲ್ಲಿ ನೀರಾವರಿ ಮತ್ತು ಜಲವಿದ್ಯುತ್ ಶಕ್ತಿಗೆ ಮುಖ್ಯವಾಗಿದೆ.

ಜೈಪುರ, ಸೆಪ್ಟೆಂಬರ್ 4: ರಾಜಸ್ಥಾನದ ಬನ್ಸ್ವಾರಾದಲ್ಲಿರುವ ಮಾಹಿ ನದಿಗೆ ನಿರ್ಮಿಸಲಾಗಿರುವ ಮಾಹಿ ಬಜಾಜ್ ಸಾಗರ್ ಅಣೆಕಟ್ಟಿನ (Mahi Bajaj Sagar Dam) ಎಲ್ಲಾ 16 ಗೇಟ್‌ಗಳನ್ನು ತೆರೆಯಲಾಗಿದೆ. ಪಶ್ಚಿಮ ಮಧ್ಯಪ್ರದೇಶ ಮತ್ತು ಆಗ್ನೇಯ ರಾಜಸ್ಥಾನದಲ್ಲಿ ಸುರಿದ ಭಾರೀ ಮಳೆಯಿಂದಾಗಿ (Rain Updates) ಗೇಟ್​ಗಳ್ನು ತೆರೆಯಾಗಿದ್ದು, ರೌದ್ರಾವತಾರ ತಾಳಿ ನುಗ್ಗುತ್ತಿರುವ ನೀರಿನ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಜನಸಾಗರವೇ ಹರಿದುಬರುತ್ತಿದೆ. ಈ ಅಣೆಕಟ್ಟಿನ ಒಟ್ಟು ಸಂಗ್ರಹ 72.93 ಟಿಎಂಸಿ. ಮಾಹಿ ನದಿ 580 ಕಿ.ಮೀ ಉದ್ದದ ನದಿಯಾಗಿದ್ದು, ಮಧ್ಯಪ್ರದೇಶದ ಧಾರ್ ಬಳಿ ಪ್ರಾರಂಭವಾಗಿ, ರಾಜಸ್ಥಾನ ಮತ್ತು ಗುಜರಾತ್ ಮೂಲಕ ಹರಿಯುತ್ತದೆ. ನಂತರ ಅರೇಬಿಯನ್ ಸಮುದ್ರಕ್ಕೆ ಹರಿಯುತ್ತದೆ. ಇದು ರಾಜಸ್ಥಾನ ಮತ್ತು ಮಧ್ಯಪ್ರದೇಶದ ಬುಡಕಟ್ಟು ಪ್ರದೇಶಗಳಲ್ಲಿ ನೀರಾವರಿ ಮತ್ತು ಜಲವಿದ್ಯುತ್ ಶಕ್ತಿಗೆ ಮುಖ್ಯವಾಗಿದೆ. 1972 ಮತ್ತು 1983ರ ನಡುವೆ ನಿರ್ಮಿಸಲಾದ ಈ ಅಣೆಕಟ್ಟು ಗುಜರಾತ್‌ನೊಂದಿಗೆ ಜಂಟಿ ಬಹುಪಯೋಗಿ ಯೋಜನೆಯ ಪ್ರಮುಖ ಅಂಶವಾಗಿದೆ, ಇದು ಎರಡೂ ರಾಜ್ಯಗಳಿಗೆ ಅಗತ್ಯವಾದ ನೀರಾವರಿ ಮತ್ತು ವಿದ್ಯುತ್ ಅನ್ನು ಒದಗಿಸುತ್ತದೆ. ಇದು ಉದಯಪುರ ವಿಭಾಗದ ಅತಿದೊಡ್ಡ ನೀರಿನ ಜಲಾಶಯವಾಗಿದೆ, ಕೃಷಿ ಮತ್ತು ಆರ್ಥಿಕ ಅಭಿವೃದ್ಧಿಗೆ ಅತ್ಯಗತ್ಯವಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ