AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದೆರಡಲ್ಲ, ಕರ್ನಾಟಕವನ್ನೇ ಬೆಚ್ಚಿ ಬೀಳಿಸಿದ ಹಲವು ಬ್ಯಾಂಕ್ ದರೋಡೆ ಪ್ರಕರಣಗಳ ಮಾಹಿತಿ ಇಲ್ಲಿದೆ ನೋಡಿ!

ಒಂದೆರಡಲ್ಲ, ಕರ್ನಾಟಕವನ್ನೇ ಬೆಚ್ಚಿ ಬೀಳಿಸಿದ ಹಲವು ಬ್ಯಾಂಕ್ ದರೋಡೆ ಪ್ರಕರಣಗಳ ಮಾಹಿತಿ ಇಲ್ಲಿದೆ ನೋಡಿ!

Ganapathi Sharma
|

Updated on: Dec 29, 2025 | 9:33 AM

Share

2025ರಲ್ಲಿ ಬೆಂಗಳೂರು ಸೇರಿದಂತೆ ಕರ್ನಾಟಕ ರಾಜ್ಯಾದ್ಯಂತ ಅನೇಕ ಕಡೆ ದೊಡ್ಡ ದರೋಡೆ ಪ್ರಕರಣಗಳು ನಡೆದಿದ್ದು, ಜನರಲ್ಲಿ ಭಯದ ವಾತಾವರಣ ಸೃಷ್ಟಿಸಿವೆ. ಕೋಟಿಗಟ್ಟಲೆ ಹಣ ಮತ್ತು ಚಿನ್ನಾಭರಣ ದೋಚಲಾಗಿದೆ. ಎಟಿಎಂ ವಾಹನ ಹೈಜಾಕ್‌ನಿಂದ ಬ್ಯಾಂಕ್ ದರೋಡೆಗಳವರೆಗೆ, ಇವು 2025ರ ಕರಾಳ ವರ್ಷವನ್ನಾಗಿ ಮಾಡಿವೆ. ಬ್ಯಾಂಕ್ ದರೋಡೆ ಪ್ರಕರಣಗಳ ಟೈಮ್​ಲೈನ್ ಇಲ್ಲಿದೆ.

ಬೆಂಗಳೂರು, ಡಿಸೆಂಬರ್ 29: 2025ರಲ್ಲಿ ಕರ್ನಾಟಕದಾದ್ಯಂತ ಸರಣಿ ದರೋಡೆ ಪ್ರಕರಣಗಳು ನಡೆದಿವೆ. ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ನಡೆದಿರುವ ಈ ಭಯಾನಕ ಕೃತ್ಯಗಳು ಜನರ ಮನಸ್ಸಿನಲ್ಲಿ ಭೀತಿ ಹುಟ್ಟಿಸಿದ್ದು, ಅದರಲ್ಲೂ ಬ್ಯಾಂಕ್​ ದರೋಡೆ ಪ್ರಕರಣಗಳೇ ಹೆಚ್ಚು ಗಮನ ಸೆಳೆದಿವೆ. ರಾಷ್ಟ್ರೀಕೃತ ಬ್ಯಾಂಕ್​ಗಳಿಂದಲೇ ಡಕಾಯಿತರು ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಮತ್ತು ನಗದನ್ನು ದೋಚಿದ್ದಾರೆ.

ಬೆಂಗಳೂರಿನಲ್ಲಿ 7.11 ಕೋಟಿ ರೂಪಾಯಿ ಮೌಲ್ಯದ ಎಟಿಎಂ ವಾಹನ ಹೈಜಾಕ್ ಪ್ರಕರಣ, ವಿಜಯಪುರದ ಚಡಚಣದಲ್ಲಿ ಎಸ್‌ಬಿಐ ಬ್ಯಾಂಕ್‌ನಲ್ಲಿ 20 ಕೋಟಿ ರೂ. ಮೌಲ್ಯದ ಚಿನ್ನಾಭರಣ ಮತ್ತು 1.5 ಕೋಟಿ ರೂ. ನಗದು ದರೋಡೆ, ದಾವಣಗೆರೆಯ ನಾಯಕತಿಯಲ್ಲಿ ಎಸ್‌ಬಿಐ ಬ್ಯಾಂಕ್‌ನಿಂದ 13 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿದ ಪ್ರಕರಣಗಳು ಪ್ರಮುಖವಾಗಿವೆ. ಕಲಬುರಗಿಯಲ್ಲಿ ಎಟಿಎಂ ಯಂತ್ರಿಂದ 18 ಲಕ್ಷ ರೂಪಾಯಿ ಕಳ್ಳತನ ಮತ್ತು ರಾಮ್ ಜ್ಯುವೆಲ್ಲರಿ ಶಾಪ್‌ನಲ್ಲಿ 18 ಲಕ್ಷ ಮೌಲ್ಯದ ಚಿನ್ನಾಭರಣ ಲೂಟಿ ಇತರೆ ಪ್ರಮುಖ ಪ್ರಕರಣಗಳಾಗಿವೆ. ಈ ಘಟನೆಗಳು 2025 ಅನ್ನು ಹಲವರ ಪಾಲಿಗೆ ಕರಾಳ ವರ್ಷವನ್ನಾಗಿ ಮಾಡಿವೆ. ಇಂತಹ ಘಟನೆಗಳು ಪುನರಾವರ್ತನೆಯಾಗದಂತೆ ತಡೆಯಲು ಸರಕಾರ ಮತ್ತು ಪೊಲೀಸ್‌ ಇಲಾಖೆ ಎಚ್ಚರಿಕೆ ವಹಿಸಬೇಕಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ