ಮೋದಿ, ಹೆಚ್​ಡಿಕೆ ಫೋಟೋಗೆ ಟೇಪ್‌ ಅಂಟಿಸಿದ ಕೇಸ್: ಮಿಮ್ಸ್ ನಿರ್ದೇಶಕರಿಗೆ ಶಾಕ್

ಮೋದಿ, ಹೆಚ್​ಡಿಕೆ ಫೋಟೋಗೆ ಟೇಪ್‌ ಅಂಟಿಸಿದ ಕೇಸ್: ಮಿಮ್ಸ್ ನಿರ್ದೇಶಕರಿಗೆ ಶಾಕ್

Edited By:

Updated on: Nov 27, 2026 | 6:27 PM

ಮಂಡ್ಯ ಮಿಮ್ಸ್‌ನಲ್ಲಿ ​ಪ್ರಧಾನಿ ಮೋದಿ, ಕೇಂದ್ರ ಸಚಿವ ಕುಮಾರಸ್ವಾಮಿ ಫೋಟೋಗೆ ಟೇಪ್‌ ಅಂಟಿಸಿರುವುದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಪ್ರಧಾನಿ ಮೋದಿ, ಹೆಚ್​ಡಿಕೆ ಫೋಟೋಗೆ ಟೇಪ್‌ ಅಂಟಿಸುವ ಮೂಲಕ ಅಗೌರವ ಮಾಡಲಾಗಿದೆ ಎಂದು ಆರೋಪಗಳು ಕೇಳಿಬಂದಿದೆ. ಇನ್ನು ಈ ಪ್ರಕರಣವನ್ನು ಮಂಡ್ಯ ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದ್ದು, ಫೋಟೋಗಳಿಗೆ ಟೇಪ್ ಅಂಟಿಸಿರುವ ಬಗ್ಗೆ ಕಾರಣ ಕೇಳಿ ಮಿಮ್ಸ್ ನಿರ್ದೇಶಕ ನರಸಿಂಹಮೂರ್ತಿಗೆ ಮಂಡ್ಯ ಡಿಸಿ ನೋಟಿಸ್ ಜಾರಿ ಮಾಡಿದ್ದಾರೆ.

ಮಂಡ್ಯ, ನವೆಂಬರ್ 27: ಮಂಡ್ಯ ಮಿಮ್ಸ್‌ನಲ್ಲಿ ​ಪ್ರಧಾನಿ ಮೋದಿ, ಕೇಂದ್ರ ಸಚಿವ ಕುಮಾರಸ್ವಾಮಿ ಫೋಟೋಗೆ ಟೇಪ್‌ ಅಂಟಿಸಿರುವುದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಪ್ರಧಾನಿ ಮೋದಿ, ಹೆಚ್​ಡಿಕೆ ಫೋಟೋಗೆ ಟೇಪ್‌ ಅಂಟಿಸುವ ಮೂಲಕ ಅಗೌರವ ಮಾಡಲಾಗಿದೆ ಎಂದು ಆರೋಪಗಳು ಕೇಳಿಬಂದಿದೆ. ಇನ್ನು ಈ ಪ್ರಕರಣವನ್ನು ಮಂಡ್ಯ ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದ್ದು, ಫೋಟೋಗಳಿಗೆ ಟೇಪ್ ಅಂಟಿಸಿರುವ ಬಗ್ಗೆ ಕಾರಣ ಕೇಳಿ ಮಿಮ್ಸ್ ನಿರ್ದೇಶಕ ನರಸಿಂಹಮೂರ್ತಿಗೆ ಮಂಡ್ಯ ಡಿಸಿ ನೋಟಿಸ್ ಜಾರಿ ಮಾಡಿದ್ದಾರೆ.

​ಮಂಡ್ಯ ಮಿಮ್ಸ್ ಆಸ್ಪತ್ರೆ ನಿರ್ದೇಶಕ ನರಸಿಂಹಮೂರ್ತಿಗೆ ಡಿಸಿಯಿಂದ ಕಾರಣ ಕೇಳಿ ನೋಟಿಸ್ ಜಾರಿ. ಬೋರ್ಡ್‌ನಲ್ಲಿದ್ದ ಪ್ರಧಾನಮಂತ್ರಿ ಹಾಗೂ ಕೇಂದ್ರ ಸಚಿವರ ಭಾವಚಿತ್ರಗಳಿಗೆ ಏಕೆ ಟೇಪ್ ಅಂಟಿಸಲಾಗಿದೆ? ಈ ಬಗ್ಗೆ 24 ಗಂಟೆಯೊಳಗೆ ಲಿಖಿತ ಸಮಜಾಯಿಷಿ ನೀಡುವಂತೆ ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ್​ ನೋಟಿಸ್ ನೀಡಿದ್ದಾರೆ. ಒಂದು ವೇಳೆ ​ಸಮರ್ಪಕ ವಿವರಣೆ ನೀಡದಿದ್ದರೆ ಶಿಸ್ತು ಕ್ರಮಕ್ಕೆ ಸರ್ಕಾರಕ್ಕೆ ಶಿಫಾರಸು ಮಾಡುವುದಾಗಿ ಎಚ್ಚರಿಕೆ ಸಹ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ದಿಲೀಪ್​, ಚೌಡಹಳ್ಳಿ

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಚೌಡಹಳ್ಳಿ ಗ್ರಾಮದವನು. ಕಳೆದ 13 ವರ್ಷದಿಂದ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ.‌ಪತ್ರಿಕೋಧ್ಯಮ ಪದವಿದರನಾಗಿದ್ದೇನೆ.ಮೊದಲಿಗೆ ಮೈಸೂರಿನ ಸ್ಥಳಿಯ ವಾಹಿನ ಹಾಗೂ ಪತ್ರಿಕೆಯಲ್ಲಿ ಕೆಲಸ ನಿರ್ವಹಿಸಿದ್ದೆ.ನಂತರ ಪಬ್ಲಿಕ್ ಟಿವಿಯಲ್ಲಿ ಚಾಮರಾಜನಗರ ಜಿಲ್ಲಾವರದಿಗಾರನಾಗುವ ಅವಕಾಶ ಸಿಕ್ಕಿತು. ಅದಾದ ಬಳಿಕ ಐದು ವರ್ಷಗಳ ಕಾಲ ಚಾಮರಾಜನಗರದಲ್ಲಿ ಕೆಲಸ ನಿರ್ವಹಿಸಿದ್ದೇನೆ. ಬಳಿಕ 2018 ರಲ್ಲಿ ಟಿರ್ವಿ ಮೈಸೂರು ವರದಿಗಾರನಾಗುವ ಅವಕಾಶ ಸಿಕ್ಕಿತು. ಅಂದಿನಿಂದ ಮೈಸೂರು ಜಿಲ್ಲಾ ವರದಿಗಾರರನಾಗಿ ಕೆಲಸ ನಿರ್ವಹಿಸಿದ್ದೇನೆ. ಸಧ್ಯ ಮಂಡ್ಯ ಜಿಲ್ಲಾ ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಕೃಷಿ, ಸಾಹಿತ್ಯ ಆಸಕ್ತಿ ಇದೆ.

Read More