ಮಂಡ್ಯ: BJP-JDS ಬಾವುಟದ ಜೊತೆ ಸೂರ್ಯ-ಚಂದ್ರ ಇರುವ ತುಳುನಾಡಿನ ಧ್ವಜ ಹಾರಾಟ

| Updated By: ಆಯೇಷಾ ಬಾನು

Updated on: Aug 07, 2024 | 12:32 PM

ಮುಡಾ ಹಗರಣ ವಿರುದ್ಧ ಬಿಜೆಪಿ ಮತ್ತು ಜೆಡಿಎಸ್ ನಡೆಸುತ್ತಿರುವ ಮೈಸೂರು ಚಲೋ ಪಾದಯಾತ್ರೆ 6ನೇ ದಿನಕ್ಕೆ ಕಾಲಿಟ್ಟಿದೆ. ಇಂದು ಮಂಡ್ಯದಲ್ಲಿ ನಡೆದ ಪಾದಯಾತ್ರೆಯಲ್ಲಿ ಬಿಜೆಪಿ-ಕಾಂಗ್ರೆಸ್ ಬಾವುಟದ ಜೊತೆ ತುಳುನಾಡ ಬಾವುಟ ಕೂಡ ಹಾರಾಡಿದೆ. ಪಾದಯಾತ್ರೆ ವೇಳೆ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಎತ್ತಿನ ಗಾಡಿ ಓಡಿಸಿದರು.

ಮಂಡ್ಯ, ಆಗಸ್ಟ್.07: ಮುಡಾ ಹಗರಣ ವಿರುದ್ಧ ಮತ್ತು ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ಮತ್ತು ಜೆಡಿಎಸ್ ನಡೆಸುತ್ತಿರುವ ಮೈಸೂರು ಚಲೋ ಪಾದಯಾತ್ರೆ 6ನೇ ದಿನಕ್ಕೆ ಕಾಲಿಟ್ಟಿದೆ. ಮಂಡ್ಯದಲ್ಲಿ ಪಾದಯಾತ್ರೆ ವೇಳೆ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಮತ್ತು ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಅವರು ಸುಮಾರು ಎರಡು ಕಿ.ಮೀ ದೂರ ಎತ್ತಿನ ಗಾಡಿ ಹೊಡೆದು ಪ್ರತಿಭಟನೆ ಮಾಡಿದ್ದಾರೆ. ಇನ್ನು ಪಾದಯಾತ್ರೆಯಲ್ಲಿ BJP-JDS ಬಾವುಟದ ಜೊತೆ ಸೂರ್ಯ-ಚಂದ್ರ ಇರುವ ತುಳುನಾಡಿನ ಧ್ವಜ ಹಾರಾಡಿದೆ.

ಇನ್ನು ಈ ಹಿಂದೆ ನಡೆದ ವಿಧಾನಸಭೆಯ ಸೂಚನಾ ಕಲಾಪದಲ್ಲಿ ತುಳು ಭಾಷೆ ಬಗ್ಗೆ ಪ್ರಸ್ತಾಪವಾಗಿತ್ತು. ರಾಜ್ಯದಲ್ಲಿ ತುಳು ಭಾಷೆಯನ್ನು ರಾಜ್ಯದ ಎರಡನೇ ಹೆಚ್ಚುವರಿ ಅಧಿಕೃತ ಭಾಷೆಯನ್ನಾಗಿ ಘೋಷಿಸುವ ಬಗ್ಗೆ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು ಸರ್ಕಾರದ ಗಮನ ಸೆಳೆದಿದ್ದರು. ಕಲಾಪದಲ್ಲಿ ಶಾಸಕ ಅಶೋಕ್ ರೈ ಅವರು ತುಳು ಭಾಷೆಯಲ್ಲೇ ಮಾತನಾಡಿದ್ದರು. ಈ ವೇಳೆ ವಿಪಕ್ಷ ನಾಯಕ ಆರ್. ಅಶೋಕ್ ಅವರು​ ಇದೇನು ಮಂಗಳೂರು ಅಧಿವೇಶನವಾ ಎಂದು ತಮಾಷೆ ಮಾಡಿದ್ದರು.

ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ

Published on: Aug 07, 2024 12:30 PM