ಮಂಡ್ಯ ಎಳನೀರು ವ್ಯಾಪಾರಿಗಳಿಗೆ ಮಹಾ ದೋಖಾ: ದೆಹಲಿ ವರ್ತಕನಿಂದ 25 ಲಕ್ಷಕ್ಕೂ ಹೆಚ್ಚು ಹಣ ವಂಚನೆ
ಮುಖ್ಯಾಂಶಗಳು
- ಸುಂಡಹಳ್ಳಿ ಎಳನೀರು ಮಾರುಕಟ್ಟೆಯಲ್ಲಿ ಮಹಾ ದೋಖಾ
- ಸ್ಥಳೀಯ ವ್ಯಾಪಾರಿಗಳಿಗೆ 25 ಲಕ್ಷ ರೂಪಾಯಿಗೂ ಅಧಿಕ ಹಣ ವಂಚನೆ
- ಮಂಡ್ಯ ಎಸ್ಪಿ ಕಚೇರಿ ಮುಂದೆ ಎಳನೀರು ವ್ಯಾಪಾರಿಗಳಿಂದ ಪ್ರತಿಭಟನೆ
ಮಂಡ್ಯದ ಎಳನೀರು ಮಾರುಕಟ್ಟೆಯಲ್ಲಿ ಹೊರ ರಾಜ್ಯದ ವ್ಯಾಪಾರಸ್ಥರಿಂದ ರೈತರು ಮತ್ತು ಮಧ್ಯವರ್ತಿಗಳು ಭಾರಿ ವಂಚನೆಗೊಳಗಾಗಿದ್ದಾರೆ. 25 ಲಕ್ಷ ರೂಪಾಯಿಗೂ ಅಧಿಕ ಹಣ ಮೋಸವಾಗಿದ್ದು, ರೈತರ ಆದಾಯಕ್ಕೆ ತೀವ್ರ ಹೊಡೆತ ಬಿದ್ದಿದೆ. ಬರಗಾಲದ ನಡುವೆ ಈ ವಂಚನೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಹಣಕಾಸಿನ ವಂಚನೆ ತಡೆಯಲು ಸೂಕ್ತ ಕಾನೂನು ರೂಪಿಸಲು ರೈತರು ಆಗ್ರಹಿಸಿದ್ದಾರೆ.
ಮಂಡ್ಯ, ಅಕ್ಟೋಬರ್ 14: ಜಿಲ್ಲೆಯ ರೈತರು ತೀವ್ರ ಬರಗಾಲದ ಸಂಕಷ್ಟದಿಂದ ನಲುಗಿದ್ದು, ಅದರ ಬೆನ್ನಲ್ಲೇ ಇದೀಗ ಎಳನೀರು ವ್ಯಾಪಾರದಲ್ಲಿ ನಡೆದ ಬೃಹತ್ ವಂಚನೆ ದೊಡ್ಡ ಆಘಾತ ನೀಡಿದೆ. ದೆಹಲಿ ಮೂಲದ ವರ್ತಕ ಸ್ಥಳೀಯ ವ್ಯಾಪಾರಿಗಳಿಗೆ 25 ಲಕ್ಷ ರೂ ಅಧಿಕ ಹಣ ವಂಚಿಸಿರುವ ಘಟನೆ ನಡೆದಿದೆ. ಅನಾಮ್ ಎನ್ನುವ ವ್ಯಕ್ತಿಯಿಂದ ಎಳನೀರು ವ್ಯಾಪಾರಿಗಳಿಗೆ ಮಹಾ ದೋಖಾ ಉಂಟಾಗಿದ್ದು, ಸದ್ಯ ಫೋನ್ ಸ್ವಿಚ್ ಆಫ್ ಮಾಡಿಕೊಂಡು ತಲೆಮರೆಸಿಕೊಂಡಿದ್ದಾನೆ. ಹಣ ಕೇಳಿದರೆ ‘ನಾನೊಬ್ಬನೇ ಮೋಸ ಮಾಡಿಲ್ಲ, ಎಲ್ಲರೂ ಮಾಡಿದ್ದಾರೆ’ ಎಂದು ದೆಹಲಿಯಿಂದಲೇ ಬೆದರಿಕೆ ಹಾಕಿದ್ದಾನೆ. ಹಬ್ಬದ ಸಮಯದಲ್ಲಿ ರೈತರು ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ. ಕಾಯ್ದೆ ಮೀರಿ ಹೊರ ರಾಜ್ಯದವರು ವ್ಯಾಪಾರ ಮಾಡುತ್ತಿದ್ದರು ಮೌನ ವಹಿಸಿರುವ ಅಧಿಕಾರಿಗಳ ವಿರುದ್ಧ ಮಂಡ್ಯ ಎಸ್ಪಿ ಕಚೇರಿ ಮುಂದೆ ಎಳನೀರು ವ್ಯಾಪಾರಿಗಳು ಪ್ರತಿಭಟನೆ ಮಾಡಿದರು.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Loading...
Unable to load recommendations.
Follow Us
