ಲಾಕ್ ಡೌನ್ ಲವ್, 5 ವರ್ಷ ಪ್ರಿಯಕರನನ್ನು ಸಾಕಿದ್ದ ಪ್ರಿಯತಮೆ: ಮದುವೆಯಾದ ವರ್ಷದಲ್ಲೇ ಗಂಡ ಪರಸ್ತ್ರೀಯೊಂದಿಗೆ ಪರಾರಿ!

Edited By:

Updated on: Jul 21, 2026 | 12:43 PM

ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಪ್ರೀತಿಯಾಗಿ, ನಂತರ ಪ್ರಿಯಕರನನ್ನು 5 ವರ್ಷ ಸಾಕಿ, ಮದುವೆಯಾದ ಮಹಿಳೆ ಲೋಲಾಕ್ಷಿಗೆ ಆಕೆಯ ಪತಿ ಪ್ರಜ್ವಲ್ ಕೈಕೊಟ್ಟಿದ್ದಾರೆ. 10 ತಿಂಗಳ ಮಗುವಿದ್ದರೂ, ಪ್ರಜ್ವಲ್ ಮತ್ತೊಬ್ಬ ಮಹಿಳೆ ಶರ್ಮಿಳಾ ಎಂಬಾಕೆಯ ಜೊತೆ ಪರಾರಿಯಾದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಕುಟುಂಬದ ಕಷ್ಟಗಳನ್ನು ಲೆಕ್ಕಿಸದೆ ಪತಿ ಬಿಟ್ಟುಹೋದ ನೋವಿನಲ್ಲಿ ಲೋಲಾಕ್ಷಿ ನ್ಯಾಯಕ್ಕಾಗಿ ಪೋಲಿಸ್ ಠಾಣೆ ಮೆಟ್ಟಿಲೇರಿದ್ದಾರೆ.

ಮಂಗಳೂರು, ಜುಲೈ 21: ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಪರಿಚಯವಾಗಿ ಅದು ಪ್ರೇಮಕ್ಕೆ ತಿರುಗಿ ಜೋಡಿಯೊಂದು ಮದುವೆಯಾದ ಪ್ರಕರಣವೊಂದು, ಇದೀಗ ಗಂಡ ಪರಸ್ತ್ರೀಯೊಂದಿಗೆ ಪರಾರಿಯಾಗುವುದರೊಂದಿಗೆ ಕಲಹಕ್ಕೆ ಕಾರಣವಾಗಿದೆ. ಈ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮಂಗಳೂರಿನ ಕಾವೂರು ನಿವಾಸಿ ಲೋಲಾಕ್ಷಿ ಅವರ ಪತಿ ಪ್ರಜ್ವಲ್, 10 ತಿಂಗಳ ಮಗು ಇರುವಾಗಲೇ ಬೇರೊಬ್ಬ ಮಹಿಳೆಯೊಂದಿಗೆ ಪರಾರಿಯಾಗಿದ್ದಾರೆ. ಕೋವಿಡ್ ಅವಧಿಯಲ್ಲಿ ಅಪಘಾತಕ್ಕೀಡಾಗಿದ್ದ ಪ್ರಜ್ವಲ್‌ಗೆ ಲೋಲಾಕ್ಷಿ ಐದು ವರ್ಷಗಳ ಕಾಲ ಚಿಕಿತ್ಸೆ ಕೊಡಿಸಿ, ತಮ್ಮ ಮನೆಯಲ್ಲೇ ಸಾಕಿ ನಂತರ 2025ರಲ್ಲಿ ಮದುವೆಯಾಗಿದ್ದರು.

ಆದರೆ, ಮದುವೆಯಾಗಿ ಸುಮಾರು ಒಂದೂವರೆ ವರ್ಷದಲ್ಲಿ, 10 ತಿಂಗಳ ಮಗು ಇರುವಾಗಲೇ ಪ್ರಜ್ವಲ್ ಬೇರೊಬ್ಬ ಮಹಿಳೆ ಶರ್ಮಿಳಾ ಜೊತೆ ಜೂನ್ 30ರಂದು ಪರಾರಿಯಾಗಿದ್ದಾರೆ. ಶರ್ಮಿಳಾ, ಪ್ರಜ್ವಲ್‌ಗೆ 2 ಲಕ್ಷ ರೂಪಾಯಿ ಹಣ ನೀಡಿದ್ದ ಬಗ್ಗೆಯೂ ಮಾಹಿತಿ ಇದೆ. ಲೋಲಾಕ್ಷಿ ಅವರು ತಮ್ಮ ಪತಿ ಪ್ರಜ್ವಲ್‌ನನ್ನು ಶರ್ಮಿಳಾ ಕರೆದುಕೊಂಡು ಹೋಗಿದ್ದಾರೆ ಎಂದು ಬಜಪೆ ಪೋಲಿಸ್ ಠಾಣೆಗೆ ದೂರು ನೀಡಿದ್ದಾರೆ. ಆದರೆ ಪೋಲಿಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಲೋಲಾಕ್ಷಿ ಆರೋಪಿಸಿದ್ದಾರೆ. ತಮಗೆ ಮತ್ತು ತಮ್ಮ ಮಗುವಿಗೆ ನ್ಯಾಯ ಒದಗಿಸಬೇಕು ಎಂದು ಲೋಲಾಕ್ಷಿ ಮನವಿ ಮಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Jul 21, 2026 12:40 PM
Loading...
Unable to load recommendations.
Follow Us
ಪೃಥ್ವಿರಾಜ್​ ಬಿ.ಯು. ಮಂಗಳೂರು

ಬಿ.ಯು.ಪೃಥ್ವಿರಾಜ್. ಮೂಲತಹ ಹಾಸನ ಜಿಲ್ಲೆ ಸಕಲೇಶಪುರ ತಾಲೂಕು. ಪತ್ರಿಕೋದ್ಯಮದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಮಾಡಿದ್ದೇನೆ. ವಿದ್ಯಬ್ಯಾಸ ಆದ ತಕ್ಷಣ ಟಿವಿ9 ಕರ್ನಾಟಕದ ಬೆಂಗಳೂರು ಕಚೇರಿಯಲ್ಲಿ ಜಾಯಿನ್ ಆದೆ. ಕಳೆದ 13 ವರ್ಷಗಳಿಂದ ಟಿವಿ9 ನಲ್ಲಿ ಕಾರ್ಯನಿರ್ವಹಿಸುತ್ತಿದ್ದ, ಚಾಮರಾಜನಗರ ಜಿಲ್ಲೆ, ಬೆಂಗಳೂರು ಕೇಂದ್ರ ಕಚೇರಿಯ ಕ್ರೈಂ ಬೀಟ್ ನಲ್ಲಿ ಕಾರ್ಯನಿರ್ವಹಿಸಿ 2016 ರಿಂದ ಮಂಗಳೂರು ಬ್ಯೂರೋದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದಲ್ಲಿ ಹರಕೆ ಗೋವುಗಳು ಕಸಾಯಿಕಾನೆಗೆ ಹೋಗುತ್ತಿದ್ದ ಬಗ್ಗೆ ಸ್ಟಿಂಗ್ ಆಪರೇಷನ್ ಮಾಡಲು ತಮಿಳುನಾಡಿನಲ್ಲಿ ಕಾರ್ಯನಿರ್ವಹಿಸಿದ ಅನುಭವ. ಈ ಸ್ಟಿಂಗ್ ಆಪರೇಷನ್ ಸ್ಟೋರಿಗೆ ರಾಮನಾಥ ಗೋಯಾಂಕ ಪ್ರಶಸ್ತಿಗೆ ನಾಮಿನಿಯಾಗಿದ್ದೆ. ರಾಜಕೀಯ, ಪ್ರವಾಹ, ರಾಷ್ಟ್ರ ಮಟ್ಟದ ಅಪರಾಧ ಪ್ರಕರಣಗಳು, ಎನ್.ಐ.ಎ ತನಿಖೆಗಳು, ಭಯೋತ್ಪಾದಕ ಚಚುವಟಿಕೆಗಳು ಆದಾಗ ಅಲ್ಲಿ ವರದಿಗಾರಿಕೆ. ಮಂಗಳೂರು ಗೋಲಿಬಾರ್, ಬೆಂಗಳೂರು ಕರ್ಫ್ಯೂ, ಏರ್ಪೋರ್ಟ್ ನಲ್ಲಿ ಜೀವಂತ ಬಾಂಬ್ ಆಪರೇಷನ್ ಗಳಲ್ಲಿ ವರದಿ ಮಾಡಿದ ಅನುಭವ.

Read More