‘ಮಾರ್ಟಿನ್’ ತಂಡದಲ್ಲಿ ಮನಸ್ತಾಪ; ಕಮಿಷನ್ ಆರೋಪಕ್ಕೆ ಎ.ಪಿ. ಅರ್ಜುನ್ ಸುದ್ದಿಗೋಷ್ಠಿ
ಬಹುನಿರೀಕ್ಷಿತ ‘ಮಾರ್ಟಿನ್’ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಈ ನಡುವೆ ಕೆಲವು ಶಾಕಿಂಗ್ ಸಂಗತಿಗಳ ಬಗ್ಗೆ ಸುದ್ದಿ ಪ್ರಕಟ ಆಗಿವೆ. ಧ್ರುವ ಸರ್ಜಾ ನಟನೆಯ ಈ ಚಿತ್ರದ ನಿರ್ದೇಶಕ ಎ.ಪಿ. ಅರ್ಜುನ್ ಅವರು ಕಮಿಷನ್ ತೆಗೆದುಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಆರೋಪವನ್ನು ಎ.ಪಿ. ಅರ್ಜುನ್ ತಳ್ಳಿ ಹಾಕಿದ್ದಾರೆ. ತಮ್ಮ ಮೇಲೆ ಬಂದ ಆರೋಪಕ್ಕೆ ಸ್ಪಷ್ಟನೆ ನೀಡಲು ಸುದ್ದಿಗೋಷ್ಠಿ ನಡೆಸಿದ್ದಾರೆ.
ಧ್ರುವ ಸರ್ಜಾ ನಟನೆಯ ‘ಮಾರ್ಟಿನ್’ ಚಿತ್ರತಂಡದಲ್ಲಿ ಮನಸ್ತಾಪ ಆಗಿದೆ ಎನ್ನಲಾಗಿದೆ. ನಿರ್ದೇಶಕ ಎ.ಪಿ. ಅರ್ಜುನ್ ಅವರ ಮೇಲೆ ಕೆಲವು ಆರೋಪಗಳು ಕೇಳಿಬಂದಿವೆ. ನಿರ್ದೇಶಕರಿಂದಲೇ ನಿರ್ಮಾಪಕರಿಗೆ ಮೋಸ ಆಗಿದೆ ಎನ್ನುವ ಸುದ್ದಿಗಳು ಹರಿದಾಡಿವೆ. ಇದಕ್ಕೆ ಸ್ಪಷ್ಟನೆ ನೀಡಲು ಎ.ಪಿ. ಅರ್ಜುನ್ ಅವರು ಇಂದು (ಜುಲೈ 26) ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ಕರೆದಿದ್ದಾರೆ. ಸಿನಿಮಾದ ಸಿಜಿ ವರ್ಕ್ಗಾಗಿ ಕೊಟ್ಟಿದ್ದ ಹಣದಲ್ಲಿ ನಿರ್ದೇಶಕರಿಗೂ ಕಮಿಷನ್ ಹೋಗಿತ್ತಾ ಎಂಬ ಅನುಮಾನ ಇದೆ. ಈ ವಿಚಾರದ ಬಗ್ಗೆ ಎ.ಪಿ. ಅರ್ಜುನ್ ಅವರು ತಮ್ಮ ವಕೀಲರ ಜೊತೆ ಬಂದು ಸುದ್ದಿಗೋಷ್ಠಿಯಲ್ಲಿ ಸಂಪೂರ್ಣ ವಿವರ ನೀಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Loading...
Unable to load recommendations.
Follow Us
