ಸಚಿವ ಅಶೋಕ ಬೀದರ್​ನಲ್ಲಿ ಜಾಸ್ತಿ ಸ್ಪೈಸಿಯಾಗಿದ್ದ ಆಹಾರವನ್ನು ಮುಖದ ಮೇಲಿನ ಬೆವರು ಒರೆಸಿಕೊಳ್ಳುತ್ತಾ ಸವಿದರು!

ಸಚಿವ ಅಶೋಕ ಅವರು ಔರಾದ ತಾಲ್ಲೂಕಿನ ಬಿಬಾನಾಯಕ್ ತಾಂಡಾದ ಶಿವಾಜಿ ಎನ್ನುವವರ ಮನೆಯಲ್ಲಿ ಬಂಜಾರಾ ಶೈಲಿಯ ಊಟ ಮಾಡುತ್ತಿದ್ದಾರೆ. ಬಂಜಾರಾ ಸಮುದಾಯದವರ ಅಡುಗೆ ಮತ್ತೂ ಸ್ಪೈಸಿ ಆಗಿರುತ್ತದೆ.

TV9kannada Web Team

| Edited By: Arun Belly

May 28, 2022 | 4:10 PM

Bidar: ರಾಗಿಮುದ್ದೆ, ಕಡಿಮೆ ಖಾರ ಇರುವ ಬಸ್ಸಾರು ಊಟ ಮಾಡಿ ಅಭ್ಯಾಸವಿರುವ ರಾಜ್ಯದ ಕಂದಾಯ ಸಚಿವ ಆರ್ ಅಶೋಕ (R Ashoka) ಅವರು ಶನಿವಾರ ಬೀದರ್ ತಾಂಡಾವೊಂದಲ್ಲಿ ಮೈಯೆಲ್ಲ ಬೆವರವಷ್ಟು ಖಾರವಿರುವ ಪಲ್ಯಗಳ ಜೊತೆ ಜೋಳದ ರೊಟ್ಟಿ ಊಟವನ್ನು ಖುಷಿಯಿಂದಲೇ ತಿಂದರು ಮಾರಾಯ್ರೇ. ನಾವು ಶುಕ್ರವಾರ ವರದಿ ಮಾಡಿದ ಹಾಗೆ ಸಚಿವರು ಬೀದರ್ (Bidar) ಜಿಲ್ಲೆ ಪ್ರವಾಸದಲ್ಲಿದ್ದಾರೆ. ಸಚಿವರೇ ಘೋಷಿಸಿದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯ್ರಕ್ರಮದ ಭಾಗವಾಗಿ ಔರಾದ ತಾಲ್ಲೂಕಿನ (Aurad Taluk) ವಡಗಾಂವ್ ನಲ್ಲಿ ಗ್ರಾಮ ವಾಸ್ತವ್ಯ ಮಾಡಿದ ಅವರು ಸ್ಥಳೀಯ ಭಕ್ಷ್ಯಗಳನ್ನು ಬಾಯಿ ಮತ್ತು ಹೊಟ್ಟೆಯುರಿಯುವ ಖಾರದ ಹೊರತಾಗಿಯೂ ಅಡುಗೆ ಮಾಡಿದವರನ್ನು ಶ್ಲಾಘಿಸುತ್ತಾ ಊಟ ಮಾಡಿದರು.
ದಕ್ಷಿಣ ಕರ್ನಾಟಕ ಭಾಗಕ್ಕೆ ಹೋಲಿಸಿದರೆ ಕಲ್ಯಾಣ ಕರ್ನಾಟಕ ಭಾಗದ ಜನ ಹೆಚ್ಚು ಖಾರವಿರುವ ಅಡುಗೆ ತಯಾರಿಸಿ ಉಣ್ಣುತ್ತಾರೆ. ಮಾಂಸದ ಅಡುಗೆಗಳಲ್ಲಂತೂ ಭಯಂಕರ ಅನ್ನುವಷ್ಟು ಖಾರ ಇರುತ್ತದೆ. ಈ ಭಾಗದ ಪ್ರಮುಖ ಆಹಾರವಾಗಿರುವ ರೊಟ್ಟಿಯ ಜೊತೆ ತಿನ್ನಲು ಮಹಿಳೆಯರು ತಯಾರಿಸುವ ಪಲ್ಯ, ಸೊಪ್ಪು ಮತ್ತು ಸಾಂಬಾರುಗಳಲ್ಲೂ ಅಧಿಕ ಪ್ರಮಾಣದ ಖಾರವಿರುತ್ತದೆ.

ಸಚಿವ ಅಶೋಕ ಅವರು ಔರಾದ ತಾಲ್ಲೂಕಿನ ಬಿಬಾನಾಯಕ್ ತಾಂಡಾದ ಶಿವಾಜಿ ಎನ್ನುವವರ ಮನೆಯಲ್ಲಿ ಬಂಜಾರಾ ಶೈಲಿಯ ಊಟ ಮಾಡುತ್ತಿದ್ದಾರೆ. ಬಂಜಾರಾ ಸಮುದಾಯದವರ ಅಡುಗೆ ಮತ್ತೂ ಸ್ಪೈಸಿ ಆಗಿರುತ್ತದೆ.

ಅಶೋಕ ಅವರೊಂದಿಗೆ ಇದೇ ಭಾಗದವರಾಗಿರುವ ಸಚಿವ ಪ್ರಭು ಚೌಹಾನ್ ಇದ್ದಾರೆ. ಅವರಿಗೆ ಖಾರದ ಊಟವೇ ಆಗಬೇಕು. ಹಾಗಾಗಿ ಅವರು ನಗುತ್ತಾ ಆಶೋಕ ಅವರೊಂದಿಗೆ ಹರಟುತ್ತಾ ಊಟ ಮಾತಾಡುತ್ತಿದ್ದಾರೆ. ಆದರೆ ಕಂದಾಯ ಸಚಿವರು ಮುಖದ ಮೇಲಿನ ಬೆವರು ಒರೆಸಿಕೊಳ್ಳುತ್ತಾ ಹಾ ಹೂ ಅನ್ನುತ್ತಾ ಊಟ ಮಾಡುತ್ತಿದ್ದ್ದಾರೆ! ಶನಿವಾರ ಸಚಿವರ ಪ್ರವಾಸದ ಮೂರನೇ ದಿನವಾಗಿರುವುದರಿಂದ ಅವರಿಗೆ ಅಲ್ಲಿನ ಊಟದ ಬಗ್ಗೆ ಸಂಪೂರ್ಣ ಚಿತ್ರಣ ಸಿಕ್ಕಿರಬಹುದು.

ಅಶೋಕ ಅವರು ಶನಿವಾರ ಬೀದರ್ ನಿಂದ ಕಲಬುರಗಿಗೆ ಆಗಮಸಿ ಅಲ್ಲಿಂದ ವಿಮಾನದಲ್ಲಿ ಬೆಂಗಳೂರಿಗೆ ವಾಪಸ್ಸಾಗುವ ಯೋಜನೆಯಿದೆ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Follow us on

Click on your DTH Provider to Add TV9 Kannada