ನನಗಿಂತ ಮುಂಚೆ ಮಾತಾಡಿದವರು ಎಲ್ಲವನ್ನೂ ಹೇಳಿದ್ದರಿಂದ ಮಾತಾಡಲು ತನಗೇನೂ ಉಳಿದಿಲ್ಲ: ಸಿದ್ದರಾಮಯ್ಯ

Updated on: Jun 16, 2025 | 7:43 PM

ದಾವಣಗೆರೆ ಸಭೆಗೆ ಸಾಕಷ್ಟು ತಡವಾಗಿತ್ತು ಮತ್ತು ಅದಕ್ಕೆ ಕಾರಣವನ್ನು ಸಿದ್ದರಾಮಯ್ಯ ವಿವರಿಸಿದರು. ತಾವು ಅಸಲಿಗೆ ಹೆಲಿಕಾಪ್ಟರ್​ನಲ್ಲಿ ಬರಬೇಕಿತ್ತು ಆದರೆ ಪ್ರತಿಕೂಲ ಹವಾಮಾನದ ಕಾರಣ ಚಾಪರ್​​ ಬಿಟ್ಟು ಕಾರಲ್ಲಿ ಬಂದಿದ್ದು, ರಸ್ತೆಯ ಮೂಲಕ ಬೆಂಗಳೂರಿಂದ ದಾವಣಗೆರೆಗೆ ಬರಬೇಕೆಂದರೆ ಕನಿಷ್ಠ ಮೂರೂವರೆ ಗಂಟೆ ಬೇಕು, ಮತ್ತು ಸಭೆಯ ನಂತರ ವಾಪಸ್ಸು ಹೋಗಲು ಸಹ ಅಷ್ಟೇ ಸಮಯ ಬೇಕು ಎಂದು ಸಿದ್ದರಾಮಯ್ಯ ಹೇಳಿದರು.

ದಾವಣಗೆರೆ, ಜೂನ್ 16: ಜಿಲ್ಲೆಯಲ್ಲಿ ರೂ. 1356 ಕೋಟಿ ವೆಚ್ಚದ ಕಾಮಗಾರಿಗಳನ್ನು ಉದ್ಘಾಟಿಸಿದ ನಂತರ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ತನಗಿಂತ ಮೊದಲು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಗೃಹ ಸಚಿವ ಜಿ ಪರಮೇಶ್ವರ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ ಮಾತಾಡಿದ ಕಾರಣ ತನ್ನ ಮೇಲಿನ ಜವಾಬ್ದಾರಿ ಕಡಿಮೆಯಾಗಿದೆ ಎಂದರು. ತಾನು ಏನಾದರೂ ಮಾತಾಡಬೇಕೆಂದರೆ ಅವರು ಹೇಳದೆ ಬಿಟ್ಟಿರುವುದನ್ನು ಹೇಳಬೇಕು, ಅದರೆ ಅವರು ಎಲ್ಲವನ್ನೂ ಹೇಳಿರುವುದರಿಂದ ತನಗೆ ಹೇಳಲೇನೂ ಉಳಿದಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ಇದನ್ನೂ ಓದಿ:  ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಭೇಷ್ ಅನಿಸಿಕೊಂಡಿದ್ದನ್ನು ಹೆಮ್ಮೆಯಿಂದ ಹೇಳಿಕೊಂಡ ಮಧು ಬಂಗಾರಪ್ಪ

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ