ಬಾಗಲಕೋಟೆಯಲ್ಲಿ ಯತ್ನಾಳ್ ಪ್ರಚಾರ ಮಾಡಿದ್ರೂ ಬಿಜಿಪಿ ಏಕೆ ಗೆಲ್ಲಲಿಲ್ಲ: ಸಚಿವ ತಿಮ್ಮಾಪುರ್ ಹೇಳಿದ್ದಿಷ್ಟು
ಬಾಗಲಕೋಟೆ ಉಪಚುನಾವಣೆಯಲ್ಲಿ ಉಮೇಶ್ ಮೇಟಿ ಅವರ ಭರ್ಜರಿ ಗೆಲುವಿನ ಕುರಿತು ಸಚಿವ ಆರ್. ಬಿ. ತಿಮ್ಮಾಪುರ್ ಪ್ರತಿಕ್ರಿಯಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಸಾಮೂಹಿಕ ಶ್ರಮ, ಸಿದ್ದರಾಮಯ್ಯರ ಅಭಿವೃದ್ಧಿ ಕಾರ್ಯಗಳು, ಡಿಕೆ ಶಿವಕುಮಾರ್ ಸಂಘಟನೆ, ಗ್ಯಾರಂಟಿ ಯೋಜನೆಗಳು ಮತ್ತು ಉಮೇಶ್ ಮೇಟಿ ಅವರ ವ್ಯಕ್ತಿತ್ವವೇ ಗೆಲುವಿಗೆ ಪ್ರಮುಖ ಕಾರಣ ಎಂದು ಅವರು ಹೇಳಿದರು. ಬಿಜೆಪಿ ಹಿಂದುತ್ವದ ತಂತ್ರ ಫಲ ನೀಡಲಿಲ್ಲ ಎಂದರು.
ಬಾಗಲಕೋಟೆ, ಮೇ 04: ಬಾಗಲಕೋಟೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಗಳಿಸಿದ್ದಾರೆ. ಈ ಮಾಧ್ಯಮದವರೊಂದಿಗೆ ಮಾತನಾಡಿದ ಬಾಗಲಕೋಟೆ ಉಸ್ತುವಾರಿ ಸಚಿವ ಆರ್ ಬಿ ತಿಮ್ಮಾಪುರ್, ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಎಲ್ಲ ಮತದಾರರಿಗೆ ನಾನು ಧನ್ಯವಾದಗಳನ್ನು ತಿಳಿಸುತ್ತೇನೆ. ಮಾಜಿ ಸಚಿವರು, ಮಾಜಿ ಶಾಸಕರು ನಿರಂತರವಾಗಿ ಪ್ರಚಾರ ಮಾಡಿದ್ದಾರೆ. ಜೊತೆಗೆ ಕಾಂಗ್ರೆಸ್ ಕಾರ್ಯಕರ್ತರ ಶ್ರಮದಿಂದ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ ಎಂದರು. ಬಿಜೆಪಿಯು ಹಿಂದುತ್ವದ ಟ್ರಂಪ್ ಕಾರ್ಡ್ ಬಳಸಿ, ಯತ್ನಾಳ್ರನ್ನ ಕರೆತಂದಿದ್ದರು ಎಂಬ ಪ್ರಶ್ನಗೆ ಉತ್ತರಿಸಿ ಅವರು, ಪದೇ ಪದೇ ಹಿಂದುತ್ವ, ಹಿಂದೂ ಎಂದು ಭಾಷಣ ಮಾಡುತ್ತಿದ್ದರು. ನಾವು, ಉಮೇಶ್ ಮೇಟಿ ಹಿಂದೂ ಅಲ್ಲವಾ ಎಂದು ಪ್ರಚಾರ ಮಾಡಿದ್ದೇವು. ಎಲ್ಲರ ಶ್ರಮದಿಂದ ಕಾಂಗ್ರೆಸ್ ಗೆದ್ದಿದೆ. ನಮ್ಮ ಸರಕಾರದ ಅಭಿವೃದ್ಧಿ ಕಾರ್ಯ ಗ್ಯಾರಂಟಿಗಳನ್ನು ಜನರು ಮೆಚ್ಚಿಕೊಂಡಿದ್ದಾರೆ. ಬಿಜೆಪಿಯವರನ್ನು ಜನ ತಿರಸ್ಕಾರ ಮಾಡಿದ್ದಾರೆ ಎಂಬುದಕ್ಕೆ ಈ ಚುನಾವಣೆ ಫಲಿತಾಂಶವೇ ಸಾಕ್ಷಿ ಎಂದು ಹೇಳಿದ್ದಾರೆ.
ಚುನಾವಣಾ ಫಲಿತಾಂಶದ ಲೈವ್ ಅಪ್ಡೇಟ್ಗಾಗಿ ಇಲ್ಲಿ ಕ್ಲಿಕ್ ಮಾಡಿ.
