ಸಾಧನೆಗೈದಿರುವ ಅಲ್ಪಸಂಖ್ಯಾತ ಸಮುದಾಯ ವಿದ್ಯಾರ್ಥಿಗಳಿಗೆ ಲ್ಯಾಪ್​ಟಾಪ್ ಉಡುಗೊರೆಯಾಗಿ ನೀಡಿದ ಜಮೀರ್

Updated on: Aug 06, 2025 | 2:02 PM

ಅಲ್ಪಸಂಖ್ಯಾತ ಸಮುದಾಯಗಳಲ್ಲಿ ಸಾಮೂಹಿಕ ವಿವಾಹ ನಡೆದರೆ ಪ್ರತಿ ಜೋಡಿಗೆ ರೂ. 50,000 ನೀಡುವ ಭರವಸೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಜೆಟ್ ಮಂಡಿಸುವಾಗ ಘೋಷಣೆ ಮಾಡಿದ್ದರು, ಈಗ ಅದನ್ನು ಆದೇಶವಾಗಿ ಜಾರಿಗೊಳಿಸಲಾಗಿದೆ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದರು. ಅಲ್ಪಸಂಖ್ಯಾತ ಸಮುದಾಯದ ಕೆಲ ಮುಖಂಡರು ಸಚಿವರೊಂದಿಗಿದ್ದರು.

ಬೆಂಗಳೂರು, ಆಗಸ್ಟ್ 6: ಅಲ್ಪಸಂಖ್ಯಾತ ಶಾಲೆ ಮತ್ತು ಪಿಯು ಕಾಲೇಜುಗಳಲ್ಲಿ ಓದಿ ಶೇಕಡ 90 ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದಿರುವ ಅಲ್ಪಸಂಖ್ಯಾತ ಸಮುದಾಯಗಳ (minority community) ವಿದ್ಯಾರ್ಥಿಗಳಿಗೆ ಇಲಾಖೆ ವತಿಯಿಂದ ನಡೆದ ಸನ್ಮಾನ ಸಮಾರಂಭಧಲ್ಲಿ ಭಾಗವಹಿಸಿದ ಬಳಿಕ ಮಾತಾಡಿದ ಸಚಿವ ಬಿಜೆಡ್ ಜಮೀರ್ ಅಹ್ಮದ್ ಖಾನ್ (BZ Zameer Ahmed Khan), ಎಸ್ಎಸ್​ಎಲ್​ಸಿ ಯಲ್ಲಿ ಟಾಪರ್​ಗಳಾಗಿರುವ ವಿದ್ಯಾರ್ಥಿಗಳಿಗೆ ₹10,000 ಮತ್ತು ಪಿಯುನಲ್ಲಿ ಟಾಪರ್ ಆಗಿರುವ ವಿದ್ಯಾರ್ಥಿಗಳಿಗೆ ₹ 15,000 ಪ್ರೋತ್ಸಾಹ ಧನ ನೀಡಿ ಗೌರವಿಸಲಾಯಿತು ಎಂದರು. ಅದಲ್ಲದೆ ವೈಯಕ್ತಿಕವಾಗಿ ತಾನು ಒಟ್ಟು 214 ವಿದ್ಯಾರ್ಥಿಗಳಿಗೆ ಲ್ಯಾಪ್​ಟಾಪ್​ಅನ್ನು ಉಡುಗೊರೆಯಗಿ ಕೊಟ್ಟಿರುವುದನ್ನು ಅವರು ಹೇಳಿದರು. ಕಳೆದ ವರ್ಷ ವಿದ್ಯಾರ್ಥಿಗಳಿಗೆ ದ್ವಿಚಕ್ರವಾಹನ ನೀಡಿದ್ದೆ, ಆದರೆ ಲೆಸೆನ್ಸ್ ಸಂಬಂಧವಾಗಿ ಸಮಸ್ಯೆಯಾಗಿದ್ರಿಂದ ವೆಹಿಕಲ್ ಬದಲು ಲ್ಯಾಪ್​ಟಾಪ್ ಕೊಟ್ಟಿರುವುದಾಗಿ ಜಮೀರ್ ಹೇಳಿದರು.

ಇದನ್ನೂ ಓದಿ:  ಜಮೀರ್ ಅಹ್ಮದ್ ಮನೆ ಮುತ್ತಿಗೆ ಹಾಕಲು ಬಂದ ರೂಪೇಶ್ ರಾಜಣ್ಣ ಮತ್ತು ಪೊಲೀಸರ ನಡುವೆ ವಾಗ್ವಾದ, ತಳ್ಳಾಟ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ