ತಮ್ಮ ಹಳೇ ದೋಸ್ತಿ ಶಿವಲಿಂಗೇಗೌಡರ ಪರ ಬ್ಯಾಟ್ ಬೀಸಿ ಮಂತ್ರಿ ಮಾಡಬೇಕೆಂದು ವಿನಂತಿಸಿದ ಜಮೀರ್ ಅಹ್ಮದ್

Updated on: Jul 26, 2025 | 6:50 PM

ಜಮೀರ್ ಅಹ್ಮದ್ ಭಾಷಣ ಮಾಡುವಾಗ ವೇದಿಕೆ ಮೇಲೆ ಆಸೀರಾಗಿದ್ದ ಗಣ್ಯರ ಪೈಕಿ ಸಿದ್ದರಾಮಯ್ಯ ಮತ್ತು ಶಿವಕುಮಾರ್ ಮಾತಿನಲ್ಲಿ ಮಗ್ನರಾಗಿದ್ದರು. ಅಸಲಿಗೆ ಶಿವಕುಮಾರ್ ಯಾವುದೋ ವಿಷಯವನ್ನು ಆರಾಮಾಗಿ, ನಿರ್ಭಾವುಕರಾಗಿ ಹೇಳುತ್ತಿದ್ದರೆ ಸಿದ್ದರಾಮಯ್ಯ ಗಂಭೀರ ಮುಖಮುದ್ರೆ ಅನ್ನೋದಕ್ಕಿಂತ ಮುಖವನ್ನು ಗಂಟಿಕ್ಕಿಕೊಂಡು ಹೌದೋ ಇಲ್ಲವೋ ಎಂಬಂತೆ ಗೋಣು ಅಲಾಡಿಸುತ್ತ ಮೌನವಾಗಿ ಕೇಳಿಸಿಕೊಳ್ಳುತ್ತಿದ್ದರು.

ಹಾಸನ, ಜುಲೈ 26: ಅರಸೀಕೆರೆ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕ ಕೆಎಂ ಶಿವಲಿಂಗೇಗೌಡ (KM Shivalinge Gowda) ಆಯೋಜಿಸಿದ ಗ್ಯಾರಂಟಿ ಯೋಜನೆ ಫಲಾನುಭವಿ ಸಮಾವೇಶದಲ್ಲಿ ಅಬ್ಬರದ ಭಾಷಣ ಮಾಡಿದ ವಸತಿ ಸಚಿವ ಬಿಜೆಡ್ ಜಮೀರ್ ಅಹ್ಮದ್ ಖಾನ್, ತಮ್ಮ ಮಾತುಗಳ ಕೊನೆಯಲ್ಲಿ ಸ್ಥಳೀಯ ಶಾಸಕನ ಪರ ಬ್ಯಾಟ್ ಬೀಸುವುದನ್ನು ಮರೆಯಲಿಲ್ಲ. ನಿಮಗೆ ಗೊತ್ತಿರಬಹುದು, ಜಮೀರ್ ಮತ್ತು ಶಿವಲಿಂಗೇಗೌಡ ಒಂದೇ ಗೂಡಿನ ಹಕ್ಕಿಗಳು, ಅಂದರೆ ಹಿಂದೆ ಜೆಡಿಎಸ್​ನಲ್ಲಿದ್ದವರು! ಹಾಗಾಗಿ, ತಮ್ಮ ಹಳೆಯ ದೋಸ್ತಿಯನ್ನು ಮಂತ್ರಿ ಮಾಡಬೇಕೆಂದು ಜಮೀರ್ ಕೈಜೋಡಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಶಿವಕುಮಾರ್ ಅವರನ್ನು ಕೇಳಿಕೊಂಡಿದ್ದರಲ್ಲಿ ಆಶ್ಚರ್ಯವೇನೂ ಇಲ್ಲ.

ಇದನ್ನೂ ಓದಿ:   ಶಿವಲಿಂಗೇಗೌಡರನ್ನು ಮಂತ್ರಿ ಮಾಡಿ ಎಂದು ಕೂಗಿದ ಬೆಂಬಲಿಗರು, ಸಿಟ್ಟಾದ ಸಿದ್ದರಾಮಯ್ಯ: ಡಿಕೆಶಿ ಏನಂದ್ರು ನೋಡಿ!

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ