‘ಯಲಾ ಕುನ್ನಿ’ ಚಿತ್ರದಲ್ಲಿ ಕೋಮಲ್ ಜೊತೆ ಮಿತ್ರಾಗೆ ಸಿಕ್ಕಿದೆ ಡಿಫರೆಂಟ್ ಪಾತ್ರ
‘ಯಲಾ ಕುನ್ನಿ’ ಎಂಬ ವಜ್ರಮುನಿ ಅವರ ಡೈಲಾಗ್ನಲ್ಲೇ ಸಿನಿಮಾ ಬರುತ್ತಿದೆ. ಈ ಶೀರ್ಷಿಕೆಯ ಸಿನಿಮಾಗೆ ಕೋಮಲ್ ಅವರು ಹೀರೋ ಆಗಿದ್ದಾರೆ. ಅವರ ಜೊತೆ ನಟ ಮಿತ್ರ ಕೂಡ ಅಭಿನಯಿಸಿದ್ದಾರೆ. ಹಾಸ್ಯ ನಟನಾಗಿ ಗುರುತಿಸಿಕೊಂಡ ಮಿತ್ರ ಅವರು ಈ ಸಿನಿಮಾದಲ್ಲಿ ನೆಗೆಟಿವ್ ಶೆಡ್ ಇರುವ ಪಾತ್ರವನ್ನು ಮಾಡಿದ್ದಾರೆ ಎಂಬುದು ವಿಶೇಷ. ಆ ಬಗ್ಗೆ ಅವರೇ ಮಾತನಾಡಿದ್ದಾರೆ.
‘ಈ ಸಿನಿಮಾದಲ್ಲಿ ಯಲಾ ಕುನ್ನಿ ಯಾರು ಎಂಬ ಪ್ರಶ್ನೆ ಕಾಡುತ್ತದೆ. ಒಳ್ಳೆಯ ಪಾತ್ರ ನನಗೆ ಸಿಕ್ಕಿದೆ. ಹಾಸ್ಯದಲ್ಲೇ ನೆಗೆಟಿವ್ ಶೇಡ್ ಇರುವ ಪಾತ್ರವಿದು. ಸುಗಂಧರಾಜ ಎಂಬುದು ಪಾತ್ರದ ಹೆಸರು. ನಾನು ಖುಷಿಯಿಂದ ಈ ಸಿನಿಮಾವನ್ನು ಮಾಡಿದ್ದೇನೆ. ಗ್ರಾಮ ಪಂಚಾಯಿತಿಯ ರಾಜಕಾರಣಿಯಾಗಿ ಕಾಣಿಸಿಕೊಳ್ಳುತ್ತಿದ್ದೇನೆ. ಹಾಸ್ಯ ಮತ್ತು ವಿಲನ್ ಶೇಡ್ ಸಿಕ್ಕಿದ್ದಕ್ಕೆ ಖುಷಿ ಆಗಿದೆ. ಕನ್ನಡ ಭಾಷೆಯ ಬಗ್ಗೆಯೂ ಈ ಸಿನಿಮಾದಲ್ಲಿ ಸಂದೇಶ ಇದೆ’ ಎಂದು ಮಿತ್ರಾ ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್ಪೋರ್ಟ್ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
