ತೆಲಂಗಾಣದಲ್ಲಿ ಮಿತಿ ಮೀರಿದ ಕೋಳಿಗಳ ಕಳ್ಳತನ
ಕೋಳಿಗಳನ್ನು ಕಳ್ಳತನ ಮಾಡುತ್ತಿದ್ದಾಗ ಪೆದ್ದಪಲ್ಲಿ ಜಿಲ್ಲೆಯಲ್ಲಿ ಕಳ್ಳ ಓಡಿಹೋಗಿದ್ದಾನೆ. ಒಂದೊಂದು ಕೋಳಿ 2,000 ರೂ.ಗೂ ಹೆಚ್ಚು ಬೆಲೆ ಬಾಳುತ್ತಿದ್ದು, ಕೋಳಿಗಳನ್ನು ಕಳ್ಳತನ ಮಾಡಿದವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಮನವಿ ಮಾಡಿದ್ದಾರೆ. ಕೋಳಿಯ ಮಾಲೀಕ ತನಗೆ ನ್ಯಾಯ ಕೊಡಿಸಿ ಎಂದು ಪೊಲೀಸರ ಮೊರೆ ಹೋಗಿದ್ದಾನೆ.
ಹೈದರಾಬಾದ್: ಪೆಡಪದಳ್ಳಿ ಜಿಲ್ಲೆಯ ಸುಲ್ತಾನಾಬಾದ್‌ನಲ್ಲಿ ಕೋಳಿ ಕಳ್ಳರ ಹಾವಳಿ ಹೆಚ್ಚಾಗಿದೆ. ಒಂದಲ್ಲ ಎರಡಲ್ಲ 30 ಕೋಳಿಗಳನ್ನು ತೆಗೆದುಕೊಂಡು ಕದ್ದುಕೊಂಡು ಹೋಗಿದ್ದಾರೆ. ಸುಲ್ತಾನಾಬಾದ್‌ನ ಆರೆಳ್ಳಿ ಚಂದ್ರಯ್ಯ ಎಂಬುವವರು ತಮ್ಮ ಜಮೀನಿನಲ್ಲಿ ಶೆಡ್‌ನಲ್ಲಿ 100 ಕೋಳಿಗಳನ್ನು ಸಾಕಿದ್ದರು. ಆದರೆ ಕೆಲವು ಕಳ್ಳರು ಹಗಲು- ರಾತ್ರಿ ಎನ್ನದೆ ಕೋಳಿಗಳ ಕಳ್ಳತನ ಮಾಡುತ್ತಿದ್ದಾರೆ. ಈವರೆಗೆ 30 ಕೋಳಿಗಳನ್ನು ತೆಗೆದುಕೊಂಡು ಹೋಗಲಾಗಿದೆ ಎಂದು ಕೋಳಿಗಳ ಮಾಲೀಕ ಚಂದ್ರಯ್ಯ ಪೊಲೀಸರಿಗೆ ದೂರು ನೀಡಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Latest Videos