ಶಿವಕುಮಾರ್ ಸಹ ಕುಮಾರಸ್ವಾಮಿಯಂತೆ ಹಿಟ್ ಅಂಡ್ ರನ್ ಪಾಲಿಸಿಗೆ ಜೋತು ಬಿದ್ದಂತಿದೆ!

ಶಿವಕುಮಾರ್ ಸಹ ಕುಮಾರಸ್ವಾಮಿಯಂತೆ ಹಿಟ್ ಅಂಡ್ ರನ್ ಪಾಲಿಸಿಗೆ ಜೋತು ಬಿದ್ದಂತಿದೆ!

ಅರುಣ್​ ಕುಮಾರ್​ ಬೆಳ್ಳಿ
|

Updated on: Oct 18, 2024 | 6:23 PM

ಚನ್ನಪಟ್ಟಣಕ್ಕೆ ಯಾರು ಸ್ವಾಮಿ ಕಾಂಗ್ರೆಸ್ ಅಭ್ಯರ್ಥಿ ಅಂತ ಕೇಳಿದಾಗ ಪತ್ರಕರ್ತರಿಂದ ದೂರ ಹೊರಟಿದ್ದ ಶಿವಕುಮಾರ್ ವಾಪಸ್ಸು ಬಂದು ನಾನೇ ಅಭ್ಯರ್ಥಿ ಅನ್ನುತ್ತಾ ನಗುತ್ತಾರೆ. ಕುಮಾರಸ್ವಾಮಿ ಸಹ ಇದೇ ಮಾತು ಹೇಳುತ್ತಿದ್ದಾರೆ ಅಂದಾಗ ನಾನು ಹೇಳಿದ ಬಳಿಕ ಅವರು ಹೇಳಿದ್ದಾರೆ ಎನ್ನುತ್ತಾ ಶಿವಕುಮಾರ್ ಅಲ್ಲಿಂದ ಹೊರಡುತ್ತಾರೆ.

ಬೆಂಗಳೂರು: ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಹ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಹಾಗೆ ಹಿಟ್ ಅಂಡ್ ರನ್ ಧೋರಣೆ ಅನುಸರಿಸುತ್ತಿದ್ದಾರೆಯೇ? ಇಂದು ಬೆಂಗಳೂರಲ್ಲಿ ಮಾಧ್ಯಮ ಪ್ರತಿನಿಧಿಗಳು ಕುಮಾರಸ್ವಾಮಿ ಮಾಡಿದ ಆರೋಪದ ಬಗ್ಗೆ ಹೇಳುತ್ತಿದ್ದಾಗ ಅವರನ್ನು ಅರ್ಧಕ್ಕೆ ತಡೆದ ಶಿವಕುಮಾರ್, ಮೊದಲು ಅವರು ಎನ್​ಐಸಿಈ ಮತ್ತು ಬಿಎಂಐಸಿಯಲ್ಲಿ ಎಷ್ಟು ಜಮೀನಿದೆ ಅಂತ ಹೇಳಲಿ ಅನ್ನುತ್ತಾರೆ. ನಿಮ್ಮ ಅಂದಾಜು ಪ್ರಕಾರ ಕುಮಾರಸ್ವಾಮಿಗೆ ಅಲ್ಲಿ ಎಷ್ಟು ಜಮೀನಿರಬಹುದು ಅಂತ ಮಾಧ್ಯಮವರು ಕೇಳಿದರೆ, ಇರ್ಲಿ ಬಿಡಿ ಈಗ್ಯಾಕೆ ಅದಲ್ಲ ಪಾಪ, ಅನ್ನುತ್ತಾ ಸಹಾನುಭೂತಿ ವ್ಯಕ್ತಪಡಿಸುತ್ತಾರೆ. ಪತ್ರಕರ್ತರು ದುಂಬಾಲು ಬಿದ್ದರೂ ಅವರು ಉತ್ತರಿಸದೆ ತಪ್ಪಿಸಿಕೊಳ್ಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಚನ್ನಪಟ್ಟಣ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಲು ಯೋಗೇಶ್ವರ್​ಗೆ ಶಿವಕುಮಾರ್ ಗಾಳ?