ಧರ್ಮಸ್ಥಳ ಮಂಜುನಾಥನ ದರ್ಶನ ಪಡೆದ ಹೆಚ್ ಡಿ ರೇವಣ್ಣ, ಮುಂದುವರಿದ ದೇವಸ್ಥಾನಗಳ ಭೇಟಿ
ಗಮನಿಸಬೇಕಾದ ಸಂಗತಿಯೆಂದರೆ, ರೇವಣ್ಣ ದೇವಸ್ಥಾನಗಳಿಗೆ ಹೋಗುವಾಗ ಸಾಮಾನ್ಯವಾಗಿ ಅವರ ಧರ್ಮಪತ್ನಿ ಭವಾನಿ ರೇವಣ್ಣ ಜೊತೆಗಿರುತ್ತಾರೆ. ಆದರೆ ರೇವಣ್ಣ ಜೈಲಿಂದ ಹೊರಬಂದ ನಂತರ ಭವಾನಿಯವರು ಪತಿಯ ಜೊತೆ ಕಾಣಿಸಿಲ್ಲ. ಕಳೆದ ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಕೆಲ ಬೇರೆ ಸಚಿವರು ಸಹ ಧರ್ಮಸ್ಥಳ ಮಂಜನಾಥನ ದರ್ಶನ ಪಡೆದರು.
ಮಂಗಳೂರು: ತಮ್ಮ ಮೇಲಿದ್ದ ಎರಡೂ ಆರೋಪಗಳಿಗೆ ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡಿರುವ ಹೊಳೆನರಸೀಪುರ ಶಾಸಕ ಹೆಚ್ ಡಿ ರೇವಣ್ಣ (HD Revanna), ಇಂದು ಬೆಳ್ತಂಗಡಿ ತಾಲ್ಲೂಕಿನ ಧರ್ಮಸ್ಥಳದಲ್ಲಿರುವ ಮಂಜುನಾಥನ ದೇವಸ್ಥಾನಕ್ಕೆ (Manjunath temple) ಭೇಟಿ ನೀಡಿ ಪೂಜೆ ಸಲ್ಲಿಸಿದರು. ಕಳೆದ ಸೋಮವಾರ ಕೋರ್ಟ್ ನಿಂದ ಜಾಮೀನು ಪಡೆದ ಬಳಿಕ ರೇವಣ್ಣ, ಒಂದೆರಡು ದಿನ ವಿಧಾನ ಪರಿಷತ್ ದಕ್ಷಿಣ ಶಿಕ್ಷಕರ ಚುನಾವಣೆ ಪ್ರಚಾರದಲ್ಲಿ (campaigning) ತೊಡಗಿಸಿಕೊಂಡು ಆಮೇಲೆ ದೇವಸ್ಥಾಗಳಿಗೆ ಭೇಟಿ ನೀಡಲಾರಂಭಿಸಿದರು. ಕಳೆದ ಶುಕ್ರವಾರ ಕಲಬುರಗಿಯ ಗಾಣಗಾಪುರದಲ್ಲಿರುವ ಪ್ರಸಿದ್ಧ ದತ್ತಾತ್ರೇಯ ಮಂದಿರಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಬೆಂಗಳೂರಲ್ಲಿರುವಾಗಲೂ ಅವರು ಅಲ್ಲಿನ ಕೆಲ ದೇವಸ್ಥಾನಗಳಿಗೆ ಭೇಟಿ ನೀಡಿದ್ದರು. ಗಮನಿಸಬೇಕಾದ ಸಂಗತಿಯೆಂದರೆ, ರೇವಣ್ಣ ದೇವಸ್ಥಾನಗಳಿಗೆ ಹೋಗುವಾಗ ಸಾಮಾನ್ಯವಾಗಿ ಅವರ ಧರ್ಮಪತ್ನಿ ಭವಾನಿ ರೇವಣ್ಣ ಜೊತೆಗಿರುತ್ತಾರೆ. ಆದರೆ ರೇವಣ್ಣ ಜೈಲಿಂದ ಹೊರಬಂದ ನಂತರ ಭವಾನಿಯವರು ಪತಿಯ ಜೊತೆ ಕಾಣಿಸಿಲ್ಲ. ಕಳೆದ ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಕೆಲ ಬೇರೆ ಸಚಿವರು ಸಹ ಧರ್ಮಸ್ಥಳ ಮಂಜನಾಥನ ದರ್ಶನ ಪಡೆದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನ ಓದಿ: ಎರಡು ಪ್ರಕರಣಗಳಲ್ಲಿ ಜಾಮೀನು ಪಡೆದು ಹೊಳೆನರಸೀಪುರಕ್ಕೆ ಬಂದ ರೇವಣ್ಣ ಬೆಂಬಲಿಗರ ಪ್ರೀತಿ ಕಂಡು ಭಾವುಕ!