ಮೈಸೂರು ಕಾಡಾ ಕಚೇರಿ ಆವರಣದಲ್ಲಿ ಹೊಸ ಕಚೇರಿ ಮಾಡಿಕೊಂಡು ಪೂಜೆ ನೆರವೇರಿಸಿದರು ಪರಿಷತ್ ಸದಸ್ಯ ಹೆಚ್ ವಿಶ್ವನಾಥ

ಅವರ ಹೊಸ ಕಚೇರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಮಹಾತ್ಮಾ ಗಾಂಧಿ, ಡಾ ಬಿ ಆರ್ ಅಂಬೇಡ್ಕರ್, ದೇವರಾಜ ಅರಸು ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಭಾವಚಿತ್ರಗಳನ್ನು ನೋಡಬಹುದು

TV9kannada Web Team

| Edited By: Arun Belly

Jun 30, 2022 | 3:56 PM

Mysuru: ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಹೆಚ್ ವಿಶ್ವನಾಥ್ (H Vishwanath) ಅವರು ಮೈಸೂರು ಕಾಡಾ ಕಚೇರಿ (CADA Office) ಆವರಣದಲ್ಲಿ ಹೊಸಕಚೇರಿಯೊಂದನ್ನು ಮಾಡಿಕೊಂಡಿದ್ದು ಸೋಮವಾರ ಪೂಜೆ ಸಲ್ಲಿಸಿ ಅಫೀಸಿನೊಳಗೆ ಕಾಲಿಟ್ಟರು. ಅವರು ತಮ್ಮ ಕುರ್ಚಿಯಲ್ಲಿ ಆಸೀನರಾಗುವ ಮುನ್ನ ಅರ್ಚಕರೊಬ್ಬರು ಪೂಜಾ ಕೈಂಕರ್ಯಗಳನ್ನು ನೆರವರಿಸಿದರು. ಅವರ ಹೊಸ ಕಚೇರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಮಹಾತ್ಮಾ ಗಾಂಧಿ (Mahatma Gandhi), ಡಾ ಬಿ ಆರ್ ಅಂಬೇಡ್ಕರ್, ದೇವರಾಜ ಅರಸು ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಭಾವಚಿತ್ರಗಳನ್ನು ನೋಡಬಹುದು. ಕಚೇರಿಯನ್ನು ತಳಿರು-ತೋರಣ ಮತ್ತು ಬಲೂನುಗಳಿಂದ ಸಿಂಗರಿಸಲಾಗಿತ್ತು.

 ಇದನ್ನೂಓದಿ: ಪ್ರೀತಿಸಿದ ಹುಡುಗಿ ಮೋಸ ಮಾಡಿದ್ದಕ್ಕೆ ಮನನೊಂದ ಯುವಕ; ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣು

Follow us on

Click on your DTH Provider to Add TV9 Kannada