ಅಧಿಕಾರ ಹಂಚಿಕೆ ಜಟಾಪಟಿ ಮಧ್ಯೆ ಅಮಿತ್ ಶಾ ಭೇಟಿಯಾದ ರಾಜಣ್ಣ ಪುತ್ರ ರಾಜೇಂದ್ರ

Edited By:

Updated on: Nov 22, 2025 | 2:52 PM

ಕಾಂಗ್ರೆಸ್ ಎಂಎಲ್‌ಸಿ ರಾಜೇಂದ್ರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದಾರೆ. ಇಂಟರ್ನ್ಯಾಷನಲ್ ಕೋ ಆಪರೇಟಿವ್ ಚುನಾವಣೆ ಇದೆ. ಆ ಸಂಬಂಧ ಭೇಟಿ ಮಾಡಿರುವುದಾಗಿ ತಿಳಿಸಿದ್ದಾರೆ. ಅಧ್ಯಕ್ಷರನ್ನ ನೋಡಿ ವಾಪಸ್ ಹೋಗುತ್ತಿದ್ದೇನೆ ರಾಜಕೀಯ ಏನಿಲ್ಲ ಎಂದು ಅವರು ಹೇಳಿದ್ದಾರೆ. ವಿಡಿಯೋ ನೋಡಿ.

ದೆಹಲಿ, ನವೆಂಬರ್​ 22: ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ಅಧಿಕಾರ ಹಂಚಿಕೆ ಕದನ ತಾರಕಕ್ಕೇರಿದೆ. ದಿನಕ್ಕೊಂದು ಮಿಂಚಿನ ಬೆಳವಣಿಗೆಗಳು ನಡೆಯುತ್ತಿವೆ. ಈ ಮಧ್ಯೆ ಮಾಜಿ ಸಚಿವ ಕೆಎನ್​ ರಾಜಣ್ಣ ಅವರ ಪುತ್ರ ಎಂಎಲ್‌ಸಿ ರಾಜೇಂದ್ರ ಕೇಂದ್ರ ಗೃಹ ಸಚಿವ ಅಮಿತ್​ ಶಾ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿದ್ದಾರೆ. ಸದ್ಯ ಇದು ಹೊಸ ಚರ್ಚೆಗೆ ಗ್ರಾಸವಾಗಿದೆ. ವಿಡಿಯೋ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.