ಇಸ್ರೇಲ್ ಸಂಸತ್​​ನಲ್ಲಿ ಪ್ರತಿಧ್ವನಿಸಿದ ‘ಮೋದಿ, ಮೋದಿ’ ಘೋಷಣೆ; ಭಾರತದ ಪ್ರಧಾನಿಗೆ ಎದ್ದುನಿಂತು ಸ್ವಾಗತ

Updated on: Feb 25, 2026 | 11:01 PM

ಪ್ರಧಾನಿ ಮೋದಿ ಅವರು ಇಂದು ಸಂಜೆ ನೆಸ್ಸೆಟ್‌ಗೆ ಆಗಮಿಸಿದರು. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಅವರ ಪತ್ನಿ ಸಾರಾ ನೆತನ್ಯಾಹು ಅಧಿಕೃತ ಸ್ವಾಗತ ಸಮಾರಂಭದಲ್ಲಿ ಭಾಗವಹಿಸಿದ್ದರು. ಮೋದಿ ಇಂದು ಇಸ್ರೇಲ್ ಸಂಸತ್ತಿನ ನೆಸ್ಸೆಟ್ ಸದಸ್ಯರನ್ನು ಉದ್ದೇಶಿಸಿ ಮಾತನಾಡಲು ಆಗಮಿಸುತ್ತಿದ್ದಂತೆ ಇಸ್ರೇಲ್ ಸಂಸತ್ತಿನ ಸದಸ್ಯರು ಎದ್ದು ನಿಂತು ಚಪ್ಪಾಳೆ ತಟ್ಟುತ್ತಾ ಗೌರವ ಸಲ್ಲಿಸಿದರು.

ಜೆರುಸಲೇಂ, ಫೆಬ್ರವರಿ 25: ಪ್ರಧಾನಿ ನರೇಂದ್ರ ಮೋದಿ (PM Modi) ಇಂದು ಇಸ್ರೇಲ್ ಸಂಸತ್ತಿನ ನೆಸ್ಸೆಟ್ ಸದಸ್ಯರನ್ನು ಉದ್ದೇಶಿಸಿ ಮಾತನಾಡಲು ಆಗಮಿಸುತ್ತಿದ್ದಂತೆ ಇಸ್ರೇಲ್ ಸಂಸತ್ತಿನ ಸದಸ್ಯರು ಎದ್ದು ನಿಂತು ಚಪ್ಪಾಳೆ ತಟ್ಟುತ್ತಾ ಗೌರವ ಸಲ್ಲಿಸಿದರು. ಈ ವೇಳೆ ಸಂಸತ್ ತುಂಬ “ಮೋದಿ, ಮೋದಿ” ಘೋಷಣೆಗಳು ಮೊಳಗಿದವು. ನೆಸ್ಸೆಟ್ ಸ್ಪೀಕರ್ ಅಮೀರ್ ಒಹಾನಾ “ನಮಸ್ತೆ ಮೋದಿ” ಎಂದು ಹೇಳುವ ಮೂಲಕ ವಿಶೇಷ ರೀತಿಯಲ್ಲಿ ಭಾರತದ ಪ್ರಧಾನಿಗೆ ಸ್ವಾಗತ ಕೋರಿದರು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Follow Us
Sushma Chakre

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More