ಬೆಳಗಾವಿಯಲ್ಲಿ ವರುಣನ ಅಬ್ಬರಕ್ಕೆ ನೆಲಕ್ಕುರುಳಿದ 8 ಮನೆಗಳು, ಉಟ್ಟ ಬಟ್ಟೆ ಬಿಟ್ಟು ಎಲ್ಲಾ ನೀರುಪಾಲು

Updated on: Jun 09, 2026 | 7:19 PM

ರಾಜ್ಯದ ಹಲವೆಡೆ ಮುಂಗಾರು ಮಳೆ ಅಬ್ಬರ ಜಪರಾಗಿದ್ದು, ಭಾರೀ ಅವಾಂತರ ಸೃಷ್ಟಿಸಿದೆ. ಬೆಳಗಾವಿಯಲ್ಲಂತೂ ವ್ಯಾಪರಸ್ಥರು ವರುಣಾರ್ಭಟಕ್ಕೆ ಹೈರಾಣಾಗಿ ಹೋಗಿದ್ದಾರೆ. ಇನ್ನು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಪಟ್ಟಣದ ಕಲ್ಮಠ ಎಂಬ ಓಣಿಯಲ್ಲಿ ಮಳೆರಾಯ ಅವಾಂತರಗಳನ್ನೇ ಸೃಷ್ಟಿಸಿದ್ದಾನೆ. ವರುಣಾರ್ಭಟಕ್ಕೆ ಒಂದೇ ಕಡೆ ಬರೋಬ್ಬರಿ 8 ಮನೆಗಳು ಧರೆಗುರುಳಿದ್ದು, ಅದೃಷ್ಟವಶಾತ್ 8 ಮನೆಗಳಲ್ಲಿದ್ದ ಜನ ಪವಾಡ ರೀತಿ ಪಾರಾಗಿದ್ದಾರೆ. ಇಲ್ಲಿ ಬಾಡಿಗೆಗೆ ಇದ್ದ ಜನರೆಲ್ಲರೂ ಕೂಲಿಕಾರ್ಮಿಕರು. ಬಟ್ಟೆ, ದವಸ ಧಾನ್ಯ, ದಾಖಲೆಗಳು, ಹಣ ಎಲ್ಲವೂ ಈಗ ಮಣ್ಣುಪಾಲಾಗಿದೆ. ಉಟ್ಟ ಬಟ್ಟೆ ಬಿಟ್ಟು ಎಲ್ಲವನ್ನೂ ಕಳೆದಕೊಂಡ ಜನ ಬೀದಿಗೆ ಬಿದ್ದಿದ್ದು, ಟಿವಿ9 ಬಳಿ ತಮ್ಮ ಅಳಲು ತೋಡಿಕೊಂಡು ಕಣ್ಣೀರಿಟ್ಟಿದ್ದಾರೆ

ಬೆಳಗಾವಿ, (ಜೂನ್ 09): ರಾಜ್ಯದ ಹಲವೆಡೆ ಮುಂಗಾರು ಮಳೆ ಅಬ್ಬರ ಜಪರಾಗಿದ್ದು, ಭಾರೀ ಅವಾಂತರ ಸೃಷ್ಟಿಸಿದೆ. ಬೆಳಗಾವಿಯಲ್ಲಂತೂ ವ್ಯಾಪರಸ್ಥರು ವರುಣಾರ್ಭಟಕ್ಕೆ ಹೈರಾಣಾಗಿ ಹೋಗಿದ್ದಾರೆ. ಇನ್ನು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಪಟ್ಟಣದ ಕಲ್ಮಠ ಎಂಬ ಓಣಿಯಲ್ಲಿ ಮಳೆರಾಯ ಅವಾಂತರಗಳನ್ನೇ ಸೃಷ್ಟಿಸಿದ್ದಾನೆ. ವರುಣಾರ್ಭಟಕ್ಕೆ ಒಂದೇ ಕಡೆ ಬರೋಬ್ಬರಿ 8 ಮನೆಗಳು ಧರೆಗುರುಳಿದ್ದು, ಅದೃಷ್ಟವಶಾತ್ 8 ಮನೆಗಳಲ್ಲಿದ್ದ ಜನ ಪವಾಡ ರೀತಿ ಪಾರಾಗಿದ್ದಾರೆ. ಇಲ್ಲಿ ಬಾಡಿಗೆಗೆ ಇದ್ದ ಜನರೆಲ್ಲರೂ ಕೂಲಿಕಾರ್ಮಿಕರು. ಬಟ್ಟೆ, ದವಸ ಧಾನ್ಯ, ದಾಖಲೆಗಳು, ಹಣ ಎಲ್ಲವೂ ಈಗ ಮಣ್ಣುಪಾಲಾಗಿದೆ. ಉಟ್ಟ ಬಟ್ಟೆ ಬಿಟ್ಟು ಎಲ್ಲವನ್ನೂ ಕಳೆದಕೊಂಡ ಜನ ಬೀದಿಗೆ ಬಿದ್ದಿದ್ದು, ಟಿವಿ9 ಬಳಿ ತಮ್ಮ ಅಳಲು ತೋಡಿಕೊಂಡು ಕಣ್ಣೀರಿಟ್ಟಿದ್ದಾರೆ.

ಇದನ್ನೂ ಓದಿ: Karnataka Weather Forecast: ರಾಜ್ಯದ ಎರಡು ಜಿಲ್ಲೆಗಳಿಗೆ ನಾಳೆ ಆರೆಂಜ್​​ ಅಲರ್ಟ್​​; ಎಲ್ಲೆಲ್ಲಿ ವರುಣಾರ್ಭಟ?

Follow Us
ರಮೇಶ್ ಬಿ. ಜವಳಗೇರಾ

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More