ಬೆಂಗಳೂರಲ್ಲಿ ಮಧ್ಯಾಹ್ನ ಸುರಿದ ಮಳೆಗೆ ರಸ್ತೆಗಳು ಜಲಾವೃತ, ಗುಂಡಿ ಕಾಣದೆ ನೆಲಕ್ಕೆ ಬಿದ್ದ ವಾಹನ ಸವಾರ

|

Updated on: Oct 22, 2024 | 7:17 PM

ಮಳೆ ಹೆಚ್ಚು ಸುರಿದರೆ ಆದಿ ಕಬೀರ್ ಆಶ್ರಮದ ರಸ್ತೆ ಹೀಗೆ ಹರಿಯುವ ಹಳ್ಳದ ರೂಪ ಪಡೆದುಕೊಳ್ಳುತ್ತದೆ ಎಂದು ಸ್ಥಳೀಯರು ದೂರುತ್ತಾರೆ. ಮಳೆಗಾಲ ಶುರುವಾಗುವ ಮೊದಲು ಸಿಎಂ, ಡಿಸಿಎಂ, ಸಾರಿಗೆ ಸಚಿವ ಮತ್ತು ಅಧಿಕಾರಿಗಳು ಸಿಟಿ ರೌಂಡ್ಸ್ ಅಂತ ಮಾಡಿದರೂ ರಸ್ತೆಗಳ ಸುಧಾರಣೆಯಾಗಲಿಲ್ಲ. ಗಣ್ಯರು ಬಸ್ಸಲ್ಲಿ ಸುತ್ತಿ ಡೀಸೆಲ್ ಹಾಳು ಮಾಡಿದ್ದಷ್ಟೇ ಬಂತು!

ಬೆಂಗಳೂರು: ನಗರದಲ್ಲಿ ಇಂದು ಮಧ್ಯಾಹ್ನವೂ ಜೋರಾಗಿ ಮಳೆ ಸುರಿದಿದೆ. ರಸ್ತೆಗಳು ಎಂದಿನಂತೆ ಜಲಾವೃತಗೊಂಡ ಕಾರಣ ವಾಹನ ಸವಾರರು ಮುಂದೆ ಸಾಗಲು ಪಡಬಾರದ ಕಷ್ಟಪಟ್ಟರು. ರಸ್ತೆ ಮೇಲೆ ನದಿಯಂತೆ ಹರಿಯುತ್ತಿರುವ ಈ ರಸ್ತೆಯಲ್ಲಿ ಸ್ಕೂಟರ್ ಓಡಿಸಿಕೊಂಡು ಬರುತ್ತಿರುವ ಯುವಕನೊಬ್ಬ ನೀರಲ್ಲಿ ಮುಳುಗಿದ ಗುಂಡಿ ಕಾಣದೆ ಮುಗ್ಗುರಿಸಿ ಬೀಳುತ್ತಾನೆ. ಅದೃಷ್ಟಕ್ಕೆ ರಸ್ತೆ ಪಕ್ಕದ ವ್ಯಾಪಾರಸ್ಥರು ಮತ್ತು ಜನ ಅವನ ನೆರವಿಗೆ ಧಾವಿಸುತ್ತಾರೆ. ನಗರದ ಮೋತಿನಗರದ ಆದಿ ಕಬೀರ್ ಆಶ್ರಮ ರಸ್ತೆಯ ಸ್ಥಿತಿ ಇದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಬೆಂಗಳೂರು ಮಳೆ ಅವಾಂತರ: ಸಿಲ್ಕ್​ಬೋರ್ಡ್​ ಜಂಕ್ಷನ್​​ನಲ್ಲಿ ರಸ್ತೆಯಲ್ಲಿ ಮೊಣಕಾಲಿನವರೆಗೆ ನೀರು

Follow us on