ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಬಿ ಟಿ ಶ್ರೀಧರ್ಗೆ ಸಂಸದೆ ಸುಮಲತಾ ಅಂಬರೀಶ್ರಿಂದ ಸಾರ್ವಜನಿಕ ತರಾಟೆ!
ಹೆದ್ದಾರಿ ಕಳಪೆ ಕಾಮಗಾರಿಯನ್ನು ಪರಿಶೀಲಿಸಲೆಂದು ಸುಮಲತಾ ಅವರು ತೆರಳಿದಾಗ ಶ್ರೀಧರ್ ಸೇರಿದಂತೆ ಹೆದ್ದಾರಿ ಪ್ರಾಧಿಕಾರದ ಒಬ್ಬೇ ಒಬ್ಬ ಸಿಬ್ಬಂದಿ ಅಲ್ಲಿ ಇರಲಿಲ್ಲ.
ಮಂಡ್ಯ ಸಂಸದೆ ಸುಮಲತಾ ಅಂಬರೀಷ್ (Sumalatha Ambareesh) ಅವರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (NHAI) ಯೋಜನಾ ನಿರ್ದೇಶಕ ಶ್ರೀಧರ್ ರನ್ನು (BT Sridhar) ಫೋನಲ್ಲಿ ಸಾರ್ವವಜನಿಕವಾಗಿ ತರಾಟೆಗೆ ತೆಗೆದುಕೊಂಡರು. ಮಂಡ್ಯ ತಾಲ್ಲೂಕಿನ ಬೂದನೂರು ಗ್ರಾಮದಲ್ಲಿ ಹೆದ್ದಾರಿಯು ಕಳಪೆ ಹಾಗೂ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಎಕ್ಕುಟ್ಟಿ ಹೋಗಿದೆ. ಅದನ್ನು ಪರಿಶೀಲಿಸಲೆಂದು ಸುಮಲತಾ ಅವರು ತೆರಳಿದಾಗ ಶ್ರೀಧರ್ ಸೇರಿದಂತೆ ಹೆದ್ದಾರಿ ಪ್ರಾಧಿಕಾರದ ಒಬ್ಬೇ ಒಬ್ಬ ಸಿಬ್ಬಂದಿ ಅಲ್ಲಿ ಇರಲಿಲ್ಲ. ಅವರ ಬೇಜವಾಬ್ದಾರಿಯಿಂದ ವೀಪರೀತ ಕೋಪಗೊಂಡ ಸಂಸದೆ, ಶ್ರೀಧರ್ಗೆ ಫೋನಾಯಿಸಿ ಕ್ಲಾಸ್ ತೆಗೆದುಕೊಂಡರು.
Latest Videos