ಕುಮಾರಸ್ವಾಮಿಯವರೇ, ದಾರಿ ತಪ್ಪಿದ್ದು ನಮ್ಮ ಮಹಿಳೆಯರಲ್ಲ, ನಿಮ್ಮ ಮಗ ಪ್ರಜ್ವಲ್ ರೇವಣ್ಣ: ಬೇಳೂರು ಗೋಪಾಲಕೃಷ್ಣ
ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳ ಫಲಾನುಭವಿ ಮಹಿಳೆಯರನ್ನು ಕುಮಾರಸ್ವಾಮಿ ದಾರಿ ತಪ್ಪಿದ್ದಾರೆ ಅಂತ ಹೇಳುತ್ತಾರೆ, ಕುಮಾರಸ್ವಾಮಿಯವರೇ ದಾರಿ ತಪ್ಪಿರುವುದು ನಮ್ಮ ಮಹಿಳೆಯರಲ್ಲ, ನಿಮ್ಮ ಮಗ ಪ್ರಜ್ವಲ್ ರೇವಣ್ಣ ಎಂದು ಹೇಳಿದ ಶಾಸಕ, ಆ ಪಾಪಿ ಕೆಟ್ಟ ಕೆಲಸಗಳನ್ನು ಮಾಡಿ ರಾಷ್ಟ್ರವ್ಯಾಪಿ ಖ್ಯಾತನಾಗಿದ್ದಾನೆ ಎಂದರು.
ಶಿವಮೊಗ್ಗ: ನಗರದ ಪ್ರೆಸ್ ಕ್ಲಬ್ ನಲ್ಲಿ ಮಾಧ್ಯಮ ಗೋಷ್ಟಿ ನಡೆಸಿ ಮಾತಾಡಿದ ಸಾಗರದ ಕಾಂಗ್ರೆಸ್ ಶಾಸಕ ಬೇಳೂರು ಗೋಪಾಲಕೃಷ್ಣ (Belur Gopalakrishna) ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಮೇಲೆ ಹರಿಹಾಯ್ದರು. ವಿಧಾನಸಭಾ ಅಧಿವೇಶನ ನಡೆಯುತ್ತಿದ್ದಾಗ ಕುಮಾರಸ್ವಾಮಿ ತಮ್ಮ ಜೇಬಲ್ಲಿದ್ದ ಪೆನ್ ಡ್ರೈವ್ ಅನ್ನು (pendrive) ತೋರಿಸುತ್ತಿದ್ದರೇ ಹೊರತು ಯಾವತ್ತೂ ಅದನ್ನು ಸಾರ್ವಜನಿಕಗೊಳಿಸಲಿಲ್ಲ. ಆದರೆ ಈಗ, ಪೆನ್ ಡ್ರೈವ್ ಮಾಡಿದವರರೆಲ್ಲರ ವಿರುದ್ಧ ಕೇಸ್ ಜಡಿದು ಜೈಲಿಗೆ ಕಳಿಸಬೇಕು ಅನ್ನುತ್ತಾರೆ, ಆಡುವ ಮಾತಿಗೆ ಅರ್ಥ ಬೇಡ್ವಾ? ಕುಮಾರಸ್ವಾಮಿ ಹುಡುಗಾಟವಾಡುತ್ತಿದ್ದಾರೆಯೇ ಎಂದು ಗೋಪಾಲಕೃಷ್ಣ ಹೇಳಿದರು. ಕುಮಾರಸ್ವಾಮಿ ಧೋರಣೆ ನೋಡುತ್ತಿದ್ದರೆ, ಅವರು ಮಾಧ್ಯಮಗಳಿಗೆ ತೋರಿಸುತ್ತಿದ್ದ ಪೆನ್ ಡ್ರೈವ್ ಪ್ರಜ್ವಲ್ ರೇವಣ್ಣದಾಗಿರಬಹುದು ಮತ್ತು ಅವರೇ ಪೆನ್ ಡ್ರೈವ್ ಗಳನ್ನು ರಿಲೀಸ್ ಮಾಡಿದ್ದಾರೆ ಅಂತ ತನಗನ್ನಿಸುತ್ತಿದೆ ಎಂದು ಗೋಪಾಲಕೃಷ್ಣ ಹೇಳಿದರು. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳ ಫಲಾನುಭವಿ ಮಹಿಳೆಯರನ್ನು ಕುಮಾರಸ್ವಾಮಿ ದಾರಿ ತಪ್ಪಿದ್ದಾರೆ ಅಂತ ಹೇಳುತ್ತಾರೆ, ಕುಮಾರಸ್ವಾಮಿಯವರೇ ದಾರಿ ತಪ್ಪಿರುವುದು ನಮ್ಮ ಮಹಿಳೆಯರಲ್ಲ, ನಿಮ್ಮ ಮಗ ಪ್ರಜ್ವಲ್ ರೇವಣ್ಣ ಎಂದು ಹೇಳಿದ ಶಾಸಕ, ಆ ಪಾಪಿ ಕೆಟ್ಟ ಕೆಲಸಗಳನ್ನು ಮಾಡಿ ರಾಷ್ಟ್ರವ್ಯಾಪಿ ಖ್ಯಾತನಾಗಿದ್ದಾನೆ ಎಂದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ