ಮಸೂದ್, ಪ್ರವೀಣ್ ಮತ್ತು ಫಾಜಿಲ್-ಎಲ್ಲರ ಕೊಲೆಗಳನ್ನು ಸರ್ಕಾರ ಸಮಾನದೃಷ್ಟಿಯಿಂದ ನೋಡಬೇಕು: ಯುಟಿ ಖಾದರ್

ಮಸೂದ್, ಪ್ರವೀಣ್ ಮತ್ತು ಫಾಜಿಲ್-ಎಲ್ಲರ ಕೊಲೆಗಳನ್ನು ಸರ್ಕಾರ ಸಮಾನದೃಷ್ಟಿಯಿಂದ ನೋಡಬೇಕು: ಯುಟಿ ಖಾದರ್

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jul 29, 2022 | 10:51 AM

ಮುಖ್ಯಮಂತ್ರಿಗಳು ಈ ಭಾಗದಲ್ಲಿರುವಾಗಲೇ ಫಾಜಿಲ್ ಹತ್ಯೆ ನಡೆಯುತ್ತದೆ ಅಂದರೆ ಜನರಿಗೆ ಸರ್ಕಾರದಿಂದ ನ್ಯಾಯ ಸಿಗುವ ಬಗ್ಗೆ ವಿಶ್ವಾಸವಿಲ್ಲ ಅನ್ನೋದು ಸಾಬೀತಾಗುತ್ತದೆ ಎಂದು ಖಾದರ್ ಹೇಳಿದರು.

ಮಂಗಳೂರು ಹೊರವಲಯದ ಸುರತ್ಕಲ್ ನಲ್ಲಿ (Surathkal) ಗುರವಾರ ಸಾಯಂಕಾಲ ಫಾಜಿಲ್ (Fazil) ಹೆಸರಿನ ಯುವಕನ ಹತ್ಯೆ ನಡೆದಿದ್ದು ಶುಕ್ರವಾರ ಬೆಳಗ್ಗೆ ಮಂಗಳೂರಲ್ಲಿ ಸುದ್ದಗಾರರೊಂದಿಗೆ ಮಾತಾಡಿದ ಕಾಂಗ್ರೆಸ್ ಶಾಸಕ ಯುಟಿ ಖಾದರ್ (UT Khader), ಕರಾವಳಿ ಭಾಗದಲ್ಲಿ ಇತ್ತೀಚಿಗೆ ಮಸೂದ್, ಪ್ರವೀಣ್ ನೆಟ್ಟಾರು ಮತ್ತು ಫಾಜಿಲ್-ಮೂವರ ಕೊಲೆ ನಡೆದಿದೆ. ಸರ್ಕಾರ ಎಲ್ಲ ಹತ್ಯೆಗಳನ್ನು ಸಮಾನ ದೃಷ್ಟಿಯಿಂದ ನೋಡಬೇಕು, ತಾರತಮ್ಯ ಧೋರಣೆ ಪ್ರದರ್ಶಿಸಬಾರದು ಎಂದು ಹೇಳಿದರು. ಮುಖ್ಯಮಂತ್ರಿಗಳು ಈ ಭಾಗದಲ್ಲಿರುವಾಗಲೇ ಫಾಜಿಲ್ ಹತ್ಯೆ ನಡೆಯುತ್ತದೆ ಅಂದರೆ ಜನರಿಗೆ ಸರ್ಕಾರದಿಂದ ನ್ಯಾಯ ಸಿಗುವ ಬಗ್ಗೆ ವಿಶ್ವಾಸವಿಲ್ಲ ಅನ್ನೋದು ಸಾಬೀತಾಗುತ್ತದೆ ಎಂದು ಖಾದರ್ ಹೇಳಿದರು.