ಬಸನಗೌಡ ಯತ್ನಾಳ್​ಗೆ ಉತ್ತರ ಕರ್ನಾಟಕದ ಬಗ್ಗೆಯಿರುವ ಕಾಳಜಿ ಕೊಂಡಾಡಿದ ಮುರುಗೇಶ್ ನಿರಾಣಿ

Updated on: Apr 02, 2025 | 5:16 PM

ಹೊಸ ಪಕ್ಷ ಕಟ್ಟುವ ಬಗ್ಗೆ ಅವರು ಮಾತಾಡಿದ್ದನ್ನು ಟಿವಿಯಲ್ಲಿ ನೋಡಿದ್ದೇನೆ, ಆದರೆ ಪ್ರಾಯಶಃ ಅವರು ಅಂಥ ದುಸ್ಸಾಹಸಕ್ಕೆ ಕೈ ಹಾಕಲಿಕ್ಕಿಲ್ಲ, ಹಿಂದೆ ಹೊಸ ಪಕ್ಷ ಕಟ್ಟಿದವರೆಲ್ಲ ಎಂಥ ಸ್ಥಿತಿ ಅನುಭವಿಸಬೇಕಾಯಿತು ಅಂತ ಎಲ್ಲರಿಗೂ ಗೊತ್ತಿರುವ ವಿಚಾರ, ಅದರೆ ಅವರ ಮನಸ್ಸಿನಲ್ಲಿ ಏನಿದೆಯೋ ಗೊತ್ತಿಲ್ಲ, ಉತ್ತರ ಕರ್ನಾಟಕದ ಅಭಿವೃದ್ಧಿಯ ಬಗ್ಗೆ ಅವರ ಕಾಳಜಿ ಕಡಿಮೆಯಾಗದಿದ್ದರೆ ಸಾಕು ಎಂದು ನಿರಾಣಿ ಹೇಳಿದರು.

ಬಾಗಲಕೋಟೆ, ಏಪ್ರಿಲ್ 2: ದಿ ಜಮಖಂಡಿ ಅರ್ಬನ್ ಕೋಆಪರೇಟಿವ್ ಬ್ಯಾಂಕ್ ನೂತನ ಕಟ್ಟಡದ ಉದ್ಘಾಟನೆ ಕಾರ್ಯಕ್ರಮದ ನಂತರ ಮಾಧ್ಯಮಗಳೊಡನೆ ಮಾತಾಡಿದ ಮಾಜಿ ಸಚಿವ ಮುರುಗೇಶ್ ನಿರಾಣಿ (Murugesh Nirani), ಉಚ್ಚಾಟಿತ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಉತ್ತರ ಕರ್ನಾಟಕದ ಬಗ್ಗೆ ಇಟ್ಟುಕೊಂಡಿರುವ ಕಾಳಜಿಯನ್ನು ಕೊಂಡಾಡಿದರು. ಅವರಿಗೆ ಸಲಹೆ ಕೊಡುವಂಥದ್ದೇನೂ ಇಲ್ಲ ಯಾಕೆಂದರೆ, ಅವರು ಯಾರ ಮಾತನ್ನೂ ಕೇಳಲ್ಲ, ಆದರೆ ತಾನು ಸಹ ಇದೇ ಭಾಗದವನಾಗಿರುವುದರಿಂದ ಹೇಳುತ್ತೇನೆ, ಉತ್ತರ ಕರ್ನಾಟಕದ ಅಭಿವೃದ್ಧಿಗೆ ಅವರು ಇಟ್ಟುಕೊಂಡಿರುವ ಆಶಯಗಳು ಶ್ಲಾಘನೀಯ ಆದರೆ ಹೋರಾಟಕ್ಕೆ ಅರಿಸಿಕೊಂಡಿರುವ ಮಾರ್ಗ ಮಾತ್ರ ಸರಿಯಿಲ್ಲ ಎಂದು ನಿರಾಣಿ ಹೇಳಿದರು.

ಇದನ್ನೂ ಓದಿ:  ಬೇರೆಯವರ ಭ್ರಷ್ಟಾಚಾರವನ್ನು ಮಾತಾಡುವ ಯತ್ನಾಳ್ ಖುದ್ದು ಒಬ್ಬ ಭ್ರಷ್ಟಾಚಾರಿ: ಎಎಸ್ ಪಾಟೀಲ್ ನಡಹಳ್ಳಿ

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Apr 02, 2025 04:33 PM